ಜೋಗ ಜಲಪಾತ ವೀಕ್ಷಿಸಲು ವಿಶೇಷ ಬಸ್ ಆಯೋಜನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೧; ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಯೋಜಿಸಿದ್ದ ವಿಶೇಷ ರಾಜಹಂಸ ಬಸ್ ನಲ್ಲಿ ದಾವಣಗೆರೆಯಿಂದ ಪ್ರಯಾಣ ಬೆಳೆಸಿದ ಪ್ರಯಾಣಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಸಾರಿಗೆ ಸಂಸ್ಥೆಯ ಟ್ರಾಫಿಕ್ ಇನ್ಸ್ ಪೆಕ್ಟರ್ ಗಿರೀಶ್  ಜೋಗ ವೀಕ್ಷಣೆಗೆ ವೀಕೆಂಡ್ ಪಿಕ್ನಿಕ್ ರೀತಿ ಪ್ರತಿ ಭಾನುವಾರ ಪ್ಯಾಕೇಜ್ ರೂಪಿಸಿದೆ ಶಿರಸಿ ಮಾರಿಕಾಂಬಾ ದೇವರ ದರ್ಶನ ಪಡೆದು ನಂತರ ಜೋಗ ತೆರಳಿ ಜಲಪಾತ ಕಾಣ್ತುಂಬಿಕೊಳ್ಳಬಹುದು.ಮಧ್ಯಮ ವರ್ಗದ ಜನರಿಗೆ ಉಪಯೋಗವಾಗಲಿದೆ ಎಂದರು. ಎರಡೂ ಕಡೆಯಿಂದ ವಯಸ್ಕರಿಗೆ 670 ರೂ 12 ವರ್ಷದೊಳಗಿನ ಮಕ್ಕಳಿಗೆ 520 ರೂ ನಿಗದಿ ಮಾಡಲಾಗಿದೆ ಎಂದರು. ಈ ವೇಳೆಬಸ್ ನಿಲ್ದಾಣದ ಇನ್ಸ್ ಪೆಕ್ಟರ್ ಗಣೇಶ್, ಚಾಲಕರಾದ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.