ಗುರು ಪೂರ್ಣಿಮೆಯೆಂದು ಗುರುವಿಗೆ ವಿಶೇಷ ಪೂಜೆ- ಅಲಂಕಾರ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೨೧; ಗುರುಪೂರ್ಣಿಮೆಯ ಪ್ರಯುಕ್ತ ದಾವಣಗೆರೆಯ ಸಾಯಿಬಾಬ ಮಂದಿರ,ದತ್ತಾತ್ರೇಯ ದೇವಸ್ಥಾನ ಹಾಗೂ ಗುರುರಾಯರ ಮಠದಲ್ಲಿ ವಿಶೇಷ ಪೂಜೆ ಮಾಡಲಾಗಿತ್ತು.ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗುರುವಿಗೆ ಭಕ್ತಿಭಾವದ ನಮನ ಸಲ್ಲಿಸಿದರು. ನಗರದ ಕೆಬಿ ಬಡಾವಣೆಯಲ್ಲಿರುವ ರಾಯರಮಠದಲ್ಲಿ ಹುಣ್ಣಿಮೆಯ ಪ್ರಯುಕ್ತ ಶ್ರೀ ವೇದ ಪಂಡಿತ ನರಸಿಂಹ ಆಚಾರ್ ಮಣ್ಣೂರ್ ಅವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗಿತ್ತು.ಪ್ರತಿ ಆಷಾಡಹುಣ್ಣಿಮೆಯನ್ನು  ಗುರುಪೂರ್ಣಿಮೆ ಎಂದು ಆಚರಣೆ ಮಾಡಕಾಗುತ್ತದೆ ಯಾಕೆಂದರೆ  ನಮ್ಮ ಜೀವನದಲ್ಲಿ ಗುರುವಿಗೆ ಅತ್ಯಂತ ದೊಡ್ಡ ಪಾತ್ರ ,ತಾಯಿ ಜನ್ಮ ಕೊಟ್ಟರೆ , ತಂದೆ ನಮ್ಮನ್ನು ಸಾಕಿ ಸಲಹುತ್ತಾರೆ. ಆದರೆ ಗುರು ಜೀವನಪೂರ್ತಿ ನಮ್ಮಲ್ಲಿರುವ ಅಂಧಕಾರವನ್ನು ತೊಳೆದು ಅನ್ನದ ಮಾರ್ಗವನ್ನು ತೋರಿಸುತ್ತಾನೆ ಹೀಗಾಗಿ ತಂದೆತಾಯಿ, ಗುರು  ಈ ಮೂವರು ಬೆಲೆ ಕಟ್ಟಲಾಗದವರು.ಇನ್ನು ಗುರು ಶಬ್ದವನ್ನು ವಿಶ್ಲೇಷಿಸಿದಾಗ ‘ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಗುರುವಾಗಿದ್ದಾನೆ.ಸಂಸ್ಕೃತದಲ್ಲಿ ಗುರು ಎಂಬ ಪದದ ಅರ್ಥ ‘ಕತ್ತಲೆಯನ್ನು ದೂರ ಮಾಡುವುದು’. ಭಾರತೀಯ ಸಂಸ್ಕೃತಿ ಯಾವಾಗಲೂ ಗುರುಗಳನ್ನು ಗೌರವಿಸಿದೆ. ಗುರು ನಿಮಗೆ ಕಲಿಸುತ್ತಾರೆ, ಜ್ಞಾನೋದಯ ನೀಡುತ್ತಾರೆ ಮತ್ತು ಬೆಳಕಿನೆಡೆ ನಿಮ್ಮನ್ನು ನಡೆಸುತ್ತಾರೆ.  ಜ್ಞಾನದ ಬೆಳಕನ್ನು ನೀಡುವ ಮೂಲಕ  ದೇವರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡುತ್ತಾರೆ. ಆಷಾಢ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಆಚರಿಸಲಾಗುವ ಗುರು ಪೂರ್ಣಿಮೆಯು ಇಂದು ಬೆಳಿಗ್ಗೆ 10:43 ಕ್ಕೆ ಪ್ರಾರಂಭವಾಗಿ, ಜುಲೈ 22 ರ ನಾಳೆ ಬೆಳಿಗ್ಗೆ 08:06 ಕ್ಕೆ ಕೊನೆಗೊಳ್ಳುತ್ತದೆ.