ಸಿಎಂ ರಾಜಿನಾಮೆಗೆ ಒತ್ತಾಯಿಸಿ ನಾಳೆ ಧರಣಿ ಸತ್ಯಾಗ್ರಹ
ಕೋಲಾರ,ಜು,೨೨:ಮಹರ್ಷಿ ವಾಲ್ಮೀಕಿ ನಿಗಮದ ಸಾವು-ನೋವುಗಳ ಹಣದ ಅವ್ಯವಹಾರ ಹಗರಣ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಗಳ ಕೋಟ್ಯಾಂತರ ಹಣ ರಾಜ್ಯ ಸರ್ಕಾರದಿಂದ ದುರುಪಯೋಗ ಹಾಗೂ ಪ್ರತಿಭಾವಂತ ಎಸ್.ಸಿ. ಎಸ್.ಟಿ. ಸಮುದಾಯ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಡಿತಕ್ಕೆ ನೇರ ಹೊಣೆಯಾಗಿರುವ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ರಾಜಿನಾಮೆಗೆ ಒತ್ತಾಯಿಸಿ ಜು, ೨೩ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಸ್ವಾಭಿಮಾನಿ ಎಸ್ಸಿ/ಎಸ್ಟಿ ಸಂಘಟನೆಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ವಾಲ್ಮೀಕಿ ಅಭಿವೃದ್ದಿ ನಿಗಮದ ೧೮೭ ಕೋಟಿ ರೂ ಅನುದಾನವನ್ನು ದುರ್‍ಬಳಿಸಿದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿ ಕೊಂಡು ಬರೆದಿರುವ ಡೆತ್‌ನೋಟ್‌ನಲ್ಲಿ ಈ ಹಗರಣ ಬೆಳಕಿಗೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ೧೩ ಮಂದಿ ಅಧಿಕಾರಿ ಸಿಬ್ಬಂದಿಗಳು ಹಾಗೂ ಸಚಿವರನ್ನು ಈಗಾಗಲೇ ಬಂಧಿಸಲಾಗಿದೆ. ಅಧ್ಯಕ್ಷ ಮಾತ್ರ ತಲೆ ಮರೆಸಿ ಕೊಂಡಿತ್ತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಈ ಹಿಂದಿನ ಆಡಳಿತ ನಡೆಸಿದ ಬಿಜೆಪಿ ಮತ್ತು ಜೆ.ಡಿ.ಎಸ್. ಅವಧಿಗಳಲ್ಲೂ ನಡೆದಿರುವ ಹಗರಣಗಳ ವಿರುದ್ದ ತನಿಖೆ ನಡೆಸಬೇಕು. ಪ್ರಸಕ್ತ ಸಾಲಿನಲ್ಲಿ ೧೮೭ ಕೋಟಿ ರೂಗಳನ್ನು ಮರುಪಾವತಿಸುವಂತಾಗ ಬೇಕು. ಪ್ರಸಕ್ತ ಸಾಲಿನ ಅನುದಾನ ಸೇರಿದಂತೆ ಎಲ್ಲವೂ ಒಟ್ಟಿಗೆ ಬಿಡುಗಡೆ ಮಾಡಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿ ಕೊಳ್ಳ ಬೇಕೆಂದು ಅಗ್ರಹ ಪಡೆಸಿದರು.
ವಾಲ್ಮೀಕಿ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸುಮಾರು ೮೯ ಕೋಟಿ ರೂಗಳನ್ನು ವಸೂಲಿ ಮಾಡಲಾಗಿದೆ. ಉಳಿದ ಹಣವನ್ನು ನಿಗಮಕ್ಕೆ ಮರುಪಾವತಿಸುವಂತೆ ಮಾಡ ಬೇಕಾಗಿದೆ. ದಲಿತರ ಹಣ ದುರ್‍ಬಳಿಕೆ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲು ಮಾಡ ಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಗುಟ್ಟಹಳ್ಳಿ ಶ್ರೀನಿವಾಸ್ ಮಾತನಾಡಿ ಶೇ ೨೪.೧೦ ರ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸುವ ಮೂಲಕ ಸಿದ್ದರಾಮಯ್ಯನವರು ದಲಿತ ದ್ರೋಹಿಗಳೆನಿಸಿ ಕೊಂಡಿದ್ದು ಕೊಡಲೇ ಮುಖ್ಯ ಮಂತ್ರಿ ಸ್ಥಾನಕ್ಕೆ
ರಾಜಿನಾಮೆ ನೀಡ ಬೇಕೆಂದು ಆಗ್ರಹ ಪಡೆಸಿದರು,
ಜೂ ೨೩ ರಂದು ಆರ್.ಪಿ.ಐ ರಾಜ್ಯಾಧ್ಯಕ್ಷರಾದ ಡಾ.ಎಂ.ವೆಂಕಟಸ್ವಾಮಿ ನೇತ್ರತ್ವದಲ್ಲಿ ನಡೆಸಲಿರುವ ಪ್ರತಿಭಟನೆಯ ನಂತರ ರಾಜ್ಯಪಾಲರಿಗೆ ಮನವಿ ಪತ್ರಸಲ್ಲಿಸಲಾಗುವುದು. ಎರಡನೇ ಹಂತದ ಹೋರಾಟವನ್ನು ಜು.೨೪ ರಿಂದ ೨೯ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯ ಮಂದೆ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು ಜುಲೈ ೧೦ ರಂದು ವಿಧಾನ ಸೌಧ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಛಲವಾದಿ ನಾಗರಾಜ್, ವೆಂಕಟ್, ಮಂಜುಳ, ನಾಗರಾಜ್,ಬ್ಯಾಟಪ್ಪ, ಮುನೇಶ್ ಉಪಸ್ಥಿತರಿದ್ದರು.