ಉದ್ಯೋಗ ಮೀಸಲಾತಿ: ಸರ್ಕಾರದ ಕ್ರಮ ಖಂಡನೀಯ
ಮಾಲೂರು. ಜು.೨೨- ಕೆಲವು ಉದ್ಯಮಿಗಳ ಆಕ್ಷೇಪಕ್ಕೆ ಮಣಿದು ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾಯ್ದೆಯನ್ನು ಅಧಿವೇಶನದಲ್ಲಿ ಮಂಡಿಸದಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿರುವ ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ದಿನೇಶ್ ಗೌಡ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ
ಅಧಿವೇಶನದಲ್ಲಿ ಮಸೂದೆಯನ್ನು ತಡೆಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ರಮ ಸರಿಯಲ್ಲ. ಸರ್ಕಾರದ ಈ ನಡೆ ಕನ್ನಡಿಗರಿಗೆ ಬೇಸರ ಉಂಟು ಮಾಡಿದೆ. ಈ ವಿಚಾರದಲ್ಲಿ ಸರ್ಕಾರ ಕನ್ನಡಿಗರ ಪರವಾದ ಬದ್ಧತೆ ತೋರದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.
ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲು ಸಿದ್ಧಪಡಿಸಿದ್ದ ಕಾಯ್ದೆ ಕೆಲವು ಖಾಸಗಿ ಕಂಪನಿಗಳ ಮಾಲೀಕರು ರಾಜ್ಯಕ್ಕೆ ಬಂದು೧೫ ರಿಂದ ೨೦ ವರ್ಷ ಕಳೆದರೂ ಇನ್ನೂ ಕನ್ನಡ ಮಾತನಾಡುವುದನ್ನು ಕಲಿತ್ತಿಲ್ಲ. ಮೀಸಲಾತಿ ವಿಚಾರ ಬಂದಾಗ ಬೆದರಿಕೆ ಹಾಕುವುದು ಸರಿಯಲ್ಲ. ಎಲ್ಲಿಯಿಂದಲೋ ಬಂದು ಕಾರ್ಖಾನೆ ಸ್ಥಾಪಿಸಿ ಕನ್ನಡ ನಾಡಿನಲ್ಲಿ ಹೂಡಿಕೆ ಮಾಡಲಿ, ಆದರೆ ಉದ್ಯೋಗ ನೀಡುವ ವಿಚಾರದಲ್ಲಿ ಕನ್ನಡಿಗರಿಗೆ ಆದ್ಯತೆನೀಡಬೇಕು ಎಂದು ಆಗ್ರಹಿಸಿದರು.
ಕೆಲ ಉದ್ಯಮಿಗಳ ಆಕ್ಷೇಪಕ್ಕೆಮಣಿದು ಖಾಸಗಿಉದ್ಯಮದಲ್ಲಿಕನ್ನಡಿಗರಿಗೆ ಉದ್ಯೋಗಮೀಸಲಾತಿಕಲ್ಪಿಸುವ ಕಾಯ್ದೆಯನ್ನುಅಧಿವೇಶನದಲ್ಲಿ ಮಂಡಿಸದಿರುವ ರಾಜ್ಯ ಸರ್ಕಾರದ ನಿಲುವನ್ನು ಜಯ ಕರ್ನಾಟಕ ಸಂಘಟನೆ ಖಂಡಿಸುತ್ತದೆ ಎಂದರು.