ಪುರಸಭಾ ವಾರ್ಡುಗಳ ಅಭಿವೃದ್ಧಿಗೆ ವಿಶೇಷ ಅನುದಾನ
ಮಾಲೂರು.ಜು.೨೨- ಪಟ್ಟಣದ ೨೭ ವಾರ್ಡುಗಳಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಭೂತ ಸೌಲಭ್ಯಗಳ ಪಟ್ಟಿಯನ್ನು ತಯಾರಿಸಿ ಪುರಸಭಾ ಸದಸ್ಯರು ಪುರಸಭಾ ಮುಖ್ಯ ಅಧಿಕಾರಿಗಳಿಗೆ ನೀಡಿದರೆ ಕ್ರಿಯಾಯೋಜನೆ ರೂಪಿಸಿ ಪುರಸಭಾ ವ್ಯಾಪ್ತಿಯ ವಾರ್ಡುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನವನ್ನು ತರಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಟ್ಟಣದಲ್ಲಿ ಅಭಿವೃದ್ಧಿ ಹಾಗೂ ಮೂಲಭೂತ ಸವಲತ್ತುಗಳಲ್ಲಿ ಹಿಂದುಳಿದ ವಾರ್ಡುಗಳನ್ನು ಗುರುತಿಸಿ ಮೊದಲ ಆದ್ಯತೆ ನೀಡಿ ಸರ್ಕಾರದಿಂದ ಆ ವಾರ್ಡುಗಳ ಅಭಿವೃದ್ಧಿಗಾಗಿ ವಿಶೇ?ಷ ಅನುದಾನವನ್ನು ನೀಡಲು ಮುಖ್ಯಮಂತ್ರಿಗಳು ಉಪ್ಪಿಗೆ ಸೂಚಿಸಿದ್ದು, ಅದರಂತೆ ವಾರ್ಡ್ ವಾರು ಸದಸ್ಯರು ಆಯ ವಾರ್ಡುಗಳಲ್ಲಿ ಅಗತ್ಯವಿರುವ ಕಾಮಗಾರಿಗಳು ಹಾಗೂ ಸವಲತ್ತುಗಳ ಬಗ್ಗೆ ಪಟ್ಟಿತಯಾರಿಸಿ ಮುಖ್ಯಾಧಿಕಾರಿಗಳಿಗೆ ನೀಡಿದರೆ ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳು ಚರ್ಚಿಸಿ ಅಗತ್ಯವಿರುವ ವಾರ್ಡುಗಳಿಗೆ ಕಾಮಗಾರಿಗಳು ಹಾಗೂ ಸವಲತ್ತುಗಳ ಹಂಚಿಕೆ ಮಾಡುವುದರ ಮೂಲಕ ಕ್ರಿಯಾ ಯೋಜನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ನೀಡಿ ಅನುಮೋದನೆ ಪಡೆದು ವಿಶೇ? ಅನುದಾನವನ್ನು ಪುರಸಭೆಗೆ ತರಲಾಗುವುದು ಎಂದರು.
ಈಗಾಗಲೇ ಪಟ್ಟಣದ ಅಭಿವೃದ್ಧಿಗಾಗಿ ಬಸ್ ನಿಲ್ದಾಣವನ್ನು ೨೦ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ, ೧೦ ಕೋಟಿ ರೂಗಳ ಡಿಪಿಆರ್ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆಗೆ ಹೋಗಿದೆ ಮುಂದಿನ ೫೦ ವ?ಗಳ ಭವಿ?ಕ್ಕಾಗಿ ಬಸ್ ನಿಲ್ದಾಣವನ್ನು ನಿರ್ಮಿಸಿ ಮೊದಲ ಅಂತಸ್ತು ಪಾಕಿಂಗ್ ೨ನೇ ಅಂತಸ್ತು ಬಸ್ ನಿಲ್ದಾಣ, ಬಸ್ ನಿಲ್ದಾಣದ ಸುತ್ತಲೂ ಪುರಸಭೆಗೆ ಆದಾಯ ಬರುವ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಲಾಗುವುದು ಈಗಾಗಲೇ ಅಂಗಡಿ ಮಳಿಗೆಗಳ ವರ್ತಕರ ಸಭೆ ನಡೆಸಿ ೬ ತಿಂಗಳ ಕಾಲಾವಧಿ ನೀಡಲಾಗಿದೆ. ಪಟ್ಟಣದ ಪುರಸಭಾ ಅವಣದಲ್ಲಿರುವ ರಂಗಮಂದಿರವನ್ನು ಐಡಿಎಂಸಿ ಸಮಿತಿಯ ೧.೫ ಕೋಟಿ ರೂ ಹಾಗೂ ಮೈನಿಂಗ್ ಫಂಡ್ ೨.೭೫ ಕೋಟಿ ರೂಗಳಲ್ಲಿ ಅಭಿವೃದ್ಧಿ ಪಡಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ
ಎರಗೊಳು ನೀರು ಪಟ್ಟಣಕ್ಕೆ ಸರಬರಾಜಾಗಿದ್ದು ಪೈಪ್ ಲೈನ್ ಮೂಲಕ ಈಗಾಗಲೇ ಅಶುದ್ಧವಾದ ನೀರನ್ನು ಹೊರ ಬಿಡಲಾಗುತ್ತಿದೆ ಹಂತ ಹಂತವಾಗಿ ಎರಗೊಳ್ ನೀರನ್ನು ಪಟ್ಟಣದ ಎಲ್ಲಾ ವಾರ್ಡುಗಳಿಗೆ ಸರಬರಾಜು ಮಾಡಲಾಗುವುದು, ಇಂದಿರಾ ಕ್ಯಾಂಟೀನ್ ಕಾಮಗಾರಿ ಪ್ರಗತಿಯಲ್ಲಿದ್ದು ೨೬ ಲಕ್ಷ ರೂಗಳ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಉಳಿದ ವಿವಿಧ ಕಾಮಗಾರಿಗಳು ಅಭಿವೃದ್ಧಿ ಪಡಿಸಲಾಗುವುದು, ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ ವೈಜ್ಞಾನಿಕವಾಗಿದ್ದು ಒಳಚರಂಡಿ ವ್ಯವಸ್ಥೆಯನ್ನು ದುರಸ್ತಿ ಪಡಿಸುವ ನಿಟ್ಟಿನಲ್ಲಿ ಒಳಚರಂಡಿ ಮಂಡಳಿಗೆ ಅಭಿವೃದ್ಧಿಗಾಗಿ ನೀಡಲು ಒಪ್ಪಿದ್ದಾರೆ ಅದೇ ರೀತಿ ನೀರು ಸಂಸ್ಕರಣ ಘಟಕಕ್ಕೆ ೫೦ ಕೋಟಿ ರೂಗಳು ಒಟ್ಟರೆ ೩.೫೦ಕೋಟಿ ರೂಗಳು ಯುಜಿಡಿಗೆ ನೀಡಲಿದ್ದಾರೆ.
ಕೈಗಾರಿಕಾ ಅಭಿವೃದ್ಧಿಯ ಹಿತ ದೃಷ್ಟಿಯಿಂದ ವಿಜಯಪುರದಿಂದ ಹೊಸೂರು ರಸ್ತೆಯ ಸಂಪಂಗೆರೆ ರವರಿಗೆ ೬ ಪಥದ ರಸ್ತೆ ಹಾದು ಹೋಗುತ್ತಿತ್ತು ಪಟ್ಟಣದಲ್ಲಿ ೩೦೦ ಕೋಟಿ ರೂಗಳ ವೆಚ್ಚದಲ್ಲಿ ಪ್ಲೈವೋವರ್ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಸೋಮವಾರ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಲಿದೆ ರೈಲ್ವೆ ಸೇತುವೆ ೪ ಪಥದ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ ಅಲ್ಲದೆ ಯೋಜನಾ ಪ್ರಾಧಿಕಾರದ ೧೦ ಕೋಟಿ ರೂಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ೧೧.೫ ಕೋಟೆ ರೂಗಳ ಟೆಂಡರ್‌ಗೆ ಹೋಗಿದೆ ಪಟ್ಟಣದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿ ಇರುವ ಉದ್ಯಾನವನಗಳ ಅಭಿವೃದ್ಧಿಗಾಗಿ ೨೫ ಲಕ್ಷ ಅನುದಾನವನ್ನು ಮೀಸಲಿರಿಸಲಾಗಿದೆ.
ಆಶ್ರಯ ನಿವೇಶನಗಳ ಬಡಾವಣೆ ಮಾಕಿಂಗ್ ನಡೆಯುತ್ತಿದೆ, ಮಾಕಿಂಗ್ ಪೂರ್ಣಗೊಂಡ ಮೇಲೆ ನಿವೇಶನದ ಹಕ್ಕುಪತ್ರದ ಜೊತೆಗೆ ವಸತಿ ಕಟ್ಟಡ ನಿರ್ಮಾಣ ಮಂಜೂರಾತಿ ಆದೇಶ ಪತ್ರಗಳನ್ನು ಸಹ ನೀಡಲಾಗುವುದು, ೭೭೪ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ನೀಡಲಾಗುವುದು ನಿವೇಶನಗಳಿಗಾಗಿ ಹಣಪಾವತಿಸಿದವರಿಗೆ ಬಡ್ಡಿಸಹಿತ ೫೩ ಕೋಟಿ ೧೧ ಲಕ್ಷ ರೂಗಳನ್ನು ೬೮೩ ಮಂದಿಗೆ ವಾಪಸ್ ನೀಡಲಾಗಿದೆ ಆದ? ಕೂಡಲೇ ನಿವೇಶನಗಳನ್ನು ನೀಡಲಾಗುವುದು.
ಪುರಸಭಾ ವ್ಯಾಪ್ತಿಯಲ್ಲಿ ಕೆಲವು ಪ್ರತಿಷ್ಠಿತ ವ್ಯಕ್ತಿಗಳು ಪುರಸಭಾ ಸಿಎ ನಿವೇಶನಗಳನ್ನು ಭೂ ಕಬಳಿಕೆ ಮಾಡಿಕೊಂಡು ಖಾತೆ, ಮನೆ ನಿರ್ಮಾಣ, ಕಾಂಪ್ಲೆಕ್ಸ್ ಇನ್ನಿತರೆ ನಿರ್ಮಿಸಿಕೊಂಡಿದ್ದಾರೆ. ಅಂತಹ ಸಿಎ ನಿವೇಶನಗಳನ್ನು ಪುರಸಭೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದು, ೩೦೮ ಸಿಎ ನಿವೇಶನಗಳು ಅಕ್ರಮವಾಗಿ ಖಾತೆಗಳನ್ನು ಮಾಡಿಕೊಳ್ಳಲಾಗಿದೆ. ಮುಂಬರುವ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ವಿಧಾನಮಂಡಲದ ಅಧಿವೇಶನ ಮುಗಿಯುವದರೊಳಗೆ ಸದಸ್ಯರು ತಮ್ಮ ವಾರ್ಡ್ಗಳಲ್ಲಿ ಅಗತ್ಯ ಇರುವ ಕೆಲಸ ಕಾರ್ಯಗಳ ಪಟ್ಟಿಯನ್ನು ನೀಡಿದರೆ ಮುಖ್ಯಮಂತ್ರಿಗಳ ಬಳಿ ಅನುಮೋದಿಸಿ ವಿಶೇಷ ಅನುದಾನ ತರಲಾಗುವುದು.
ಈ ಸಂದರ್ಭದಲ್ಲಿ ಪುರಸಭೆಯ ಆಡಳಿತಾಧಿಕಾರಿ ತಹಸಿಲ್ದಾರ್ ಕೆ ರಮೇಶ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿ ಉಲ್ಲಾ ಖಾನ್, ಎಬಿ ಪ್ರದೀಪ್, ತಾಲೂಕು ಆರೋಗ್ಯ ಅಧಿಕಾರಿ ಡಾ ರಮೇಶ್ ಬಾಬು, ಪುರಸಭಾ ಸದಸ್ಯರು ಸಭೆಯಲ್ಲಿ ಹಾಜರಿದ್ದರು.
ಪೋಟೊ ೧. ಮಾಲೂರು ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು.
ಸಿಎ ನಿವೇಶನಗಳಿಂದ ೨೫೦ ಕೋಟಿ ಆದಾಯ
ಕಸ ವಿಲೇವಾರಿ ಘಟಕ ರಾಜೆನಹಳ್ಳಿ ರಸ್ತೆಯ ದೊಡ್ಡ ಇಗಲೂರು ಬಳಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಕಸ ಸಂಗ್ರಹಣಕ್ಕೆ ವಾಹನಗಳನ್ನು ಖರೀದಿಸಿ ಪಟ್ಟಣದಲ್ಲಿ ಕಸದ ಸಮಸ್ಯೆ ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಬಡಾವಣೆಗಳಲ್ಲಿ ಪುರಸಭೆಗೆ ಸಂಬಂಧಿಸಿದ ಸ್ವತ್ತುಗಳು ಗುರುತಿಸಿ ತೆರವು ಕಾರ್ಯವನ್ನು ಕೈಗೊಳ್ಳಬೇಕು, ಪುರಸಭೆಗೆ ಸಿಎ ನಿವೇಶನಗಳಿಂದ ೨೫೦ ಕೋಟಿ ಆದಾಯ ಬರಲಿದೆ ಯೋಜನಾ ಪ್ರಾಧಿಕಾರದ ನಿವೇಶನಗಳಿಂದ ೧೦೦ ಕೋಟಿ ಆದಾಯ ಬರಲಿದೆ ಸರ್ಕಾರಿ ಸರ್ವೇ ನಂಬರ್ ಜಮೀನುಗಳು ಪುರಸಭಾ ವ್ಯಾಪ್ತಿಯಲ್ಲಿ ಯಾವ ಆಧಾರದ ಮೇಲೆ ಖಾತೆಯಾಗಿದೆ ಆ ವ್ಯಾಪ್ತಿಯಲ್ಲಿರುವ ಸಮಯ ಸರ್ವೇ ನಂಬರ್ ಜಮೀನುಗಳನ್ನು ತಹಶೀಲ್ದಾರ್ ಅವರು ಗುರುತಿಸಿ ಕೊಡಬೇಕು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೊಂದಿಗೆ ತಾಲೂಕು ಆಡಳಿತ ಹಾಗೂ ನಾನು ಸಂಪೂರ್ಣ ಸಹಕಾರ ನೀಡಲಾಗುವುದು ತಹಶೀಲ್ದಾರರು ಹಾಗೂ ಪುರಸಭಾ ಮುಖ್ಯಾಧಿಕಾರಿಗಳು ಸಿಎ ನಿವೇಶನ ಹಾಗೂ ಸರ್ವೇ ನಂಬರ್‌ಗಳ ಜಮೀನಿನ ಮಾಹಿತಿಯನ್ನು ಪಡೆದು ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.