ಸಮುದಾಯದ ಅಭಿವೃದ್ಧಿಗೆ ಸಹಕರಿಸಿ: ಪುಣ್ಯಾನಂದಪುರಿ ಶ್ರೀ
ಮಾಲೂರು.ಜು.೨೨- ಮಠ ಸಮಾಜದ ಆಸ್ತಿಯಾಗಿದ್ದು ಭಕ್ತಾದಿಗಳ ಸಹಕಾರದಿಂದ ಹೆಚ್ಚಿನ ರೀತಿಯಲ್ಲಿ ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗ ಸಂಸ್ಥಾನ ಮಠದ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ಇರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದಲ್ಲಿ ಮಠ ಹಾಗೂ ಭಕ್ತಾದಿಗಳ ಸಹಕಾರದಿಂದ ಗುರುಪೂರ್ಣಿಮೆ ಪ್ರಯುಕ್ತ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಠದಲ್ಲಿ ಭಕ್ತಾದಿಗಳಿಂದ ಪುಷ್ಪಾರ್ಚನೆ ಸ್ವೀಕರಿಸಿ ಮಾತನಾಡಿದರು.
ಸಮಾಜದಲ್ಲಿ ಯಾವುದೇ ಮಠವು ಪ್ರಗತಿಯತ್ತ ಸಾಗಬೇಕಾದರೆ ಭಕ್ತಾದಿಗಳು ಮಠದ ಆಸ್ತಿಯಾಗಿರುತ್ತಾರೆ ಇಲ್ಲಿನ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗ ಸಂಸ್ಥಾನ ಮಠವು ಕಳೆದ ಎರಡು ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧಿಕಾರವಧಿಯಲ್ಲಿ ಮಠಕ್ಕೆ ಜಮೀನು ನೀಡಿದ್ದು ನನ್ನ ಸರ್ವಸ್ವವನ್ನೇ ತ್ಯಾಗ ಮಾಡಿ ನನ್ನ ಬಳಿ ಇದ್ದ ಮನೆ ಮಾರಾಟ ಮಾಡಿ ಬಂದ ಹಣ ಹಾಗೂ ಭಕ್ತಾದಿಗಳ ಸಹಕಾರದಿಂದ ಸಮುದಾಯದ ಅಭಿವೃದ್ಧಿಗಾಗಿ ಮಠದಲ್ಲಿ ಶಾಲಾ ಕಟ್ಟಡ ಸಮುದಾಯ ಭವನ ಹಾಗೂ ದೇವಾಲಯ ನಿರ್ಮಿಸಲಾಗಿದೆ ನನಗೆ ವಯಸ್ಸು ಆಗುತ್ತಿದ್ದು ಮಠ ನೋಡಿಕೊಳ್ಳಲು ಒಬ್ಬ ಉತ್ತರಾಧಿಕಾರಿಯ ಅಗತ್ಯವಿದೆ ಮಠವು ಸಮುದಾಯದ ಆಸ್ತಿಯಾಗಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಟ್ಟಕ್ಕೆ ಭೇಟಿ ನೀಡಿ ಮತವನ್ನು ಉಳಿಸಿ ಬೆಳೆಸಬೇಕು ಎಂದರು
ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಈಗಾಗಲೇ ಮಠದ ಆವರಣದಲ್ಲಿ ಐಸಿಎಸ್ ಹಾಗೂ ಸಿಬಿಎಸ್ಸಿ ೧ ರಿಂದ ೧೦ನೇ ತರಗತಿಯವರೆಗೆ ಶಾಲೆಯನ್ನು ಪ್ರಾರಂಭಿಸಲಾಗಿದ್ದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ನಿಲಯ ತೆರೆಯಲು ಮುಂದಾಗಿದ್ದೆ ಆದರೆ ಸಮುದಾಯದ ವಿದ್ಯಾರ್ಥಿಗಳನ್ನು ಪೋಷಕರು ದಾಖಲು ಮಾಡದ ಕಾರಣ ಮುಂದಿನ ವರ್ಷದಿಂದ ವಿದ್ಯಾರ್ಥಿ ನಿಲಯ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಮಠದ ಭಕ್ತರಾದ ರಾಜ್ಯ ಗಾಣಿಗರ ಒಕ್ಕೂಟ ಸಂಘದ ಅಧ್ಯಕ್ಷ ಪಿಜಿ ವಿಜಯ್ ಕುಮಾರ್ ಅಂಕಪ್ಪ ಶೆಟ್ಟಿ ರಂಗರಾಜು ಮಹಾದೇವ್ ಇನ್ನಿತರರು ಹಾಜರಿದ್ದರು
ಫೋಟೋ ೨ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ಇರುವ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದಲ್ಲಿ ಮಠ ಹಾಗೂ ಭಕ್ತಾದಿಗಳ ಸಹಕಾರದಿಂದ ಗುರುಪೂರ್ಣಿಮೆ ಪ್ರಯುಕ್ತ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಠದಲ್ಲಿ ಭಕ್ತಾದಿಗಳಿಂದ ಪುಷ್ಪಾರ್ಚನೆ ಸ್ವೀಕರಿಸಿ ಮಾತನಾಡಿದರು.
ಸೆಪ್ಟೆಂಬರ್‌ನಲ್ಲಿ ಬೃಹತ್ ಸಮಾವೇಶ
ಮಠವು ಪ್ರಾರಂಭವಾಗಿ ಎರಡು ವರ್ಷ ಪೂರೈಸಿರುವುದರಿಂದ ಮಠದ ಪ್ರಾರಂಭ ಹಾಗೂ ಸ್ವಾಮಿಗಳಾಗಿ ದೀಕ್ಷೆ ಪಡೆದ ದಿನವನ್ನು ಸಮುದಾಯದವರು ಭಕ್ತರ ಸಹಕಾರದಿಂದ ಮಠದ ಆವರಣದಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಗಾಣಿಗರ ಹಬ್ಬ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು ಕಾರ್ಯಕ್ರಮಕ್ಕೆ ಗಾಣಿಗ ಸಮುದಾಯ ಹಾಗೂ ಮಠದ ಬಗ್ಗೆ ಸ್ಮರಣ ಸಂಚಿಕೆಯನ್ನು ಸಹ ಹೊರ ತರಲಾಗುವುದು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಸಚಿವರು ಹಾಗೂ ಸಮುದಾಯದ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳನ್ನು ಆಹ್ವಾನಿಸಲಾಗುವುದು ಗಾಣಿಗ ಸಮಾಜದ ವಿವಿಧ ಪಂಗಡಗಳ ಜನತೆ ಒಗ್ಗಟ್ಟಿನಿಂದ ಗಾಣಿಗರ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು