ರಸ್ತೆ ಬದಿ ತ್ಯಾಜ್ಯ: ಕ್ರಮಕ್ಕೆ ಡಿಸಿ ಸೂಚನೆ
ಕೋಲಾರ,ಜು,೨೨- ಜಿಲ್ಲಾಧಿಕಾರಿ ಅಕ್ರಂಪಾಷ ಅವರು ಭಾನುವಾರ ರಜೆ ದಿನಾವಾಗಿದ್ದರೂ ಸಹ ನಗರದಲ್ಲಿ ಸ್ವಚ್ಚತೆಯನ್ನು ವೀಕ್ಷಿಸಲು ನಗರಸಭೆ ಪೌರಾಯುಕ್ತರೊಂದಿಗೆ ನಗರದ ವಿವಿಧಡೆ ಸಂಚರಿಸಿದರು,
ನಗರದ ಬೈಪಾಸ್ ರಸ್ತೆಯಲ್ಲಿನ ರಾಜಕಾಲವೆಗಳನ್ನು ವೀಕ್ಷಿಸಿದರು. ಕಾಲವೆಯ ತುಂಭ ತ್ಯಾಜ್ತ ರಾಶಿಗಳಿಂದ ತುಂಬಿದ್ದು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಾಡಗಿರುವುದನ್ನು ಕಂಡು ಬೇಸರ ವ್ಯಕ್ತ ಪಡೆಸಿದ ಅವರು ಪೌರಾಯುಕ್ತ ಶಿವಾನಂದ ಅವರಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಕೊಡಲೇ ಸ್ವಚ್ಚಗೊಳಿಸಲು ಸೂಚಿಸ ಬೇಕೆಂದು ತಿಳಿಸಿದರು,
ಬೈಪಾಸ್ ರಸ್ತೆಯ ಬದಿಗಳಲ್ಲಿ ತ್ಯಾಜ್ಯದ ರಾಶಿಗಳನ್ನು ಕೊಡಲೆ ತೆರವು ಮಾಡ ಬೇಕು. ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿಗಳನ್ನು ಸುರಿಯುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುವ ಜೊತೆಗೆ ತ್ಯಾಜ್ಯದ ದುರ್ವಾಸನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದ ಅವರು ತ್ಯಾಜ್ಯವನ್ನು ಸುರಿಯುವವರ ವಿರುದ್ದ ದಂಡ ವಿಧಿಸಿ ಮತ್ತೊಮ್ಮೆ ಸುರಿದರೆ ಪರಿಸರ ಮಾಲಿನ್ಯ ಹಾಳುಗೆಡುವುತ್ತಿರುವ ವಿರುದ್ದ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೋಟಿಸ್ ಜಾರಿ ಮಾಡಲು ತಿಳಿಸಿದರು,
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯಾಧಿಕಾರಿ, ಪರಿಸರ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿವರ್ಗ ಇದ್ದರು.