ಹಸಿರು ಟವಲ್ ಘನತೆ ಗೌರವ ಉಳಿಸುವಂತಾಗಲಿ
ಕೋಲಾರ,ಜು.೨೨- ಹಸಿರು ಟವಲ್ ಗೆ ಸಾಕಷ್ಟು ಇತಿಹಾಸವಿದೆ ತ್ಯಾಗ ಬಲಿದಾನದ ನಡುವೆ ರೈತರಿಗೆ ಹಾಗೂ ಬಡವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವಾಗಿದೆ ಅದನ್ನು ತಮ್ಮ ಸ್ವಾರ್ಥಕ್ಕೆ ಬಳಕೆಯಾಗದೇ ಜನರ ಹಿತಕ್ಕೆ ಬಳಕೆಯಾಗುವಂತೆ ಮಾಡುವುದು ನಿಮ್ಮಗಳ ಜವಾಬ್ದಾರಿಯಾಗಿದೆ ಎಂದು ದಸಂಸ ರಾಜ್ಯ ಮುಖಂಡ ಟಿ.ವಿಜಿಕುಮಾರ್ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಭಾನುವಾರ ನಗರದ ಕುವೆಂಪು ಬಡಾವಣೆಯ ರೈತ ಸಂಘದ ಕಛೇರಿಯಲ್ಲಿ ೪೪ ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇವತ್ತು ಹಸಿರು ಟವಲ್ ಹಾಕಿಕೊಂಡು ರೈತರ ಮೇಲೆಯೇ ಅರ್ಜಿಗಳನ್ನು ಕೊಡಲು ಸಂಘಕ್ಕೆ ಬರಬೇಡಿ ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ನಿಜವಾದ ಸಂಘಟನೆಯವರು ಯಾವತ್ತೂ ರೈತ ವಿರೋಧಿ ಕೆಲಸ ಮಾಡಲ್ಲ ಕೇವಲ ಹಣಕ್ಕಾಗಿ ಹಸಿರು ಟವಲ್ ಬಳಕೆಯಾಗಬಾರದು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಸೇವೆಗಾಗಿ ಹಸಿರು ಟವರ್ ಬಳಕೆಯಾಗಬೇಕು ಎಂದು ತಿಳಿಸಿದರು.
ದೇಶದಲ್ಲಿ ಎರಡು ವರ್ಗಗಳನ್ನು ನೋಡಬಹುದಾಗಿದೆ ಒಂದು ದುಡಿಯುವ ವರ್ಗ, ಇನ್ನೊಂದು ಸೋಮಾರಿಯ ವರ್ಗವಾಗಿದೆ ರೈತರು ದುಡಿಯುವ ವರ್ಗವಾಗಿದ್ದಾರೆ ದೇಶದ ಬೆನ್ನೆಲುಬು ಕೂಡ ಆಗಿದ್ದಾರೆ ಒಂದು ಕ್ಷಣ ರೈತ ತಮ್ಮ ಕೆಲಸವನ್ನು ನಿಲ್ಲಿಸಿದರೆ ಸಾಕು ಇಡೀ ದೇಶವೇ ಹಸಿವಿನಿಂದ ಇರಬೇಕಾಗುತ್ತದೆ ಅಂತಹ ಶಕ್ತಿ ರೈತರಿಗೆ ಇದೆ ರೈತರು ಒಗ್ಗಟ್ಟಾದರೆ ಸಾಕು ಇಡೀ ಅಧಿಕಾರಿ ವರ್ಗ ತಮ್ಮ ಹತ್ತಿರ ನೋಡುವಂತಾಗಬೇಕು ಅ ಶಕ್ತಿ ಬೆಳಸಿಕೊಳ್ಳಿ ರೈತ ಸಂಘಟನೆ ಕೂಡ ಸಮಾನತೆಯನ್ನು ಬಯಸುವುದಾಗಿದ್ದು ರೈತ ಸಂಘವೇ ದೇಶದ ಮುಂದಿನ ಶಕ್ತಿಯಾಗಿ ಬೆಳೆಯಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮನ್ನು ಆಳುವ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ರೈತ ವಿರೋಧಿ ಸರಕಾರಗಳಾಗಿದ್ದು ಪ್ರತಿ ಹಂತದಲ್ಲೂ ಕಾರ್ಪೊರೇಟ್ ಸಂಸ್ಥೆಗಳ ಪರವಾದ ಕಾನೂನುಗಳನ್ನು ಜಾರಿ ಮಾಡಿ ರೈತರನ್ನು ಬೀದಿಗೆ ತಳ್ಳಿದ್ದಾರೆ ರೈತರಿಂದ ವಸೂಲಿ ಮಾಡಿದ ಹಣದಿಂದ ಸರಕಾರಗಳು ನಡೆಯುತ್ತಿದ್ದು ರೈತರ ಶಕ್ತಿಯನ್ನು ಮುಂದಿನ ದಿನಗಳಲ್ಲಿ ಸರಕಾರಗಳಿಗೆ ತೋರಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಅರಿವು ಶಿವಪ್ಪ ಮಾತನಾಡಿ ಅಧಿಕಾರಕ್ಕಾಗಿ ಹಾಗೂ ಕೆಲವರ ಸ್ವಾರ್ಥಕ್ಕಾಗಿ ಸಂಘಟನೆ ವಿಭಜನೆಯಾಗಿದೆ ಆದರೆ ರೈತ ಸಂಘಕ್ಕೆ ತನ್ನದೇ ಆದ ಇತಿಹಾಸವಿದೆ ದೇಶದಲ್ಲಿ ರೈತರ ಬೇಡಿಕೆಗಳಿಗಾಗಿ ಒಂದು ವರ್ಷಕ್ಕಿಂತ ಹೆಚ್ಚು ದಿನ ಹೋರಾಟ ನಡೆಸಬೇಕಾಗಿತ್ತು ಆದರೆ ಇವತ್ತು ಕೃಷಿ ಬಿಕ್ಕಟ್ಟಿನಿಂದ ರೈತರ ಪ್ರಾಣ ಕಳೆದುಕೊಳ್ಳಬೇಕಾಗಿದೆ ರೈತರಿಗೆ ಬಲ ತುಂಬಿ ಆಳುವ ಸರಕಾರಗಳ ಮೇಲೆ ಒತ್ತಡ ಹಾಕುವ ಕೆಲಸವನ್ನು ರೈತ ಸಂಘಟನೆಗಳು ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ಉಪನ್ಯಾಸಕ ಜಯರಾಮ್, ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬೆಡಶೆಟ್ಟಿಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್, ಕಾರ್ಯಾಧ್ಯಕ್ಷ ರಮೇಶ್, ಜಿಲ್ಲಾ ಮುಖಂಡರಾದ ಪ್ರಭಾಕರ್, ಬೈಚೇಗೌಡ, ನರಸಿಂಹಯ್ಯ, ತಾಲೂಕು ಅಧ್ಯಕ್ಷರಾದ ಮಂಜುನಾಥ್, ವೆಂಕಟಸ್ವಾಮಿ, ತಿಮ್ಮರೆಡ್ಡಿ, ಸುಬ್ರಮಣಿ, ನಾಗಪ್ಪ, ಮಹಿಳಾ ಮುಖಂಡರಾದ ರಾಧಮ್ಮ ಭಾರತಮ್ಮ ಮುಂತಾದವರು ಇದ್ದರು.