ಎಸ್.ಬಿ.ಐ.ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಲೂಯಿಸ್ ರೊಸಾರಿಯೊಗ: ಸನ್ಮಾನ
ಸಂಜೆವಾಣಿ ವಾರ್ತೆ
ಹನೂರು ಜು 22 :- ಚಾಮರಾಜನಗರ ಎಸ್.ಬಿಐ ಮುಖ್ಯ ವ್ಯವಸ್ಥಾಪಕರಾಗಿ ಇತ್ತೀಚೆಗೆ ನೇಮಕಗೊಂಡಿರುವ ಚಾಮರಾಜನಗರ ಹಾಗೂ ರಾಮನಗರ ಎಸ್.ಬಿ.ಐ.ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾದ ಲೂಯಿಸ್ ರೊಸಾರಿಯೊ ರವರಿಗೆ ಮಾರ್ಟಳ್ಳಿ ಜನತೆ ಪರವಾಗಿ ಸನ್ಮಾನಿಸಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗೆ ಮುಖ್ಯ ವ್ಯವಸ್ಥಾಪಕರಾಗಿ ಲೂಯಿಸ್ ರೊಸಾರಿಯೊ ರವರು ಕಳೆದ ತಿಂಗಳು ಅಧಿಕಾರ ವಹಿಸಿಕೊಂಡು ಜಿಲ್ಲೆಯ 52 ಶಾಖೆಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ. ಈ ಎಲ್ಲಾ ಶಾಖೆಗಳಿಗೂ (ಕ್ರೆಡಿಟ್ ಮತ್ತು ಎನ್.ಪಿ.ಎ.ಎಂ) ಮುಖ್ಯ ವ್ಯವಸ್ಥಾಪಕರಾಗಿದ್ದಾರೆ.
ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕರಾದ ಲೂಯಿಸ್ ರೊಸಾರಿಯಾ ಅವರನ್ನು ಭೇಟಿ ಮಾಡಿದ ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯ ನಿವೃತ್ತ ಶಿಕ್ಷಕ ಆಲ್ಬರ್ಟ್, ಶಿಕ್ಷಕ ಜೇಮ್ಸ್ ಕುಮಾರ್ ಹಾಗೂ ದಯಾಳ್ ಅವರು ಮಾರ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಎಸ್.ಬಿಐ ಬ್ಯಾಂಕ್ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸೂಯಿಸ್ ರೊಸಾರಿಯಾ ಅವರು ಮಾರ್ಟಳ್ಳಿ ಭಾಗದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇದ್ದು ಇಲ್ಲಿನ ಜನರ ಬ್ಯಾಂಕ್ ವಹಿವಾಟಿಗೆ ಎಸ್.ಬಿ.ಐ ಬ್ಯಾಂಕ್ ಅವಶ್ಯಕತೆ ಇರುತ್ತದೆ. ಮುಂದಿನ ದಿನಗಳಲ್ಲಿ ಎಸ್.ಬಿ.ಐ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.