ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಸ್.ಮಹದೇವ ಅಧಿಕಾರ ಸ್ವೀಕಾರ
ಸಂಜೆವಾಣಿ ವಾರ್ತೆ
ನಂಜನಗೂಡು: ಜು.22:- ನಂಜನಗೂಡಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಎಸ್.ಮಹದೇವ, ಕಾರ್ಯದರ್ಶಿಯಾಗಿ ಹೆಚ್.ಜೆ.ವರದನಾಯಕ ಅಧಿಕಾರ ಸ್ವೀಕರಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಮಹದೇಶ್ವರ ಸಭಾಂಗಣದಲ್ಲಿ ನಡೆದ ಲಯನ್ಸ್ ಸಂಸ್ಥೆಯ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಡಾ.ಪಿ.ಆರ್.ಎಸ್.ಚೇತನ್ ರವರು ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಗೋಪಾಲಕೃಷ್ಣ ರವರಿಂದ ನೂತನ ಅಧ್ಯಕ್ಷರಿಗೆ ಪದಕ ವಿತರಿಸುವ ಮೂಲಕ ಅಧ್ಯಕ್ಷರಾಗಿ ಆಯ್ಕೆಗೊಳಿಸಿದರು.
ನೂತನ ಅಧ್ಯಕ್ಷ ಎಸ್.ಮಹದೇವ ಮಾತನಾಡಿ ಲಯನ್ಸ್ ಸಂಸ್ಥೆ ಕಳೆದ 5 ದಶಕಗಳಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ನನ್ನ ಅಧಿಕಾರವಧಿಯಲ್ಲಿ ಲಯನ್ಸ್ ಸಂಸ್ಥೆಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವಂತಹ ಸೇವಾಕಾರ್ಯಕ್ರಮಗಳನ್ನು ರೂಪಿಸುತ್ತೇನೆ. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಕಾರ್ಯಕ್ರಮವನ್ನು ರೂಪಿಸುತ್ತೇನೆ. ಜೊತೆಗೆ ಆರೋಗ್ಯ ಅರಿವು, ಆರೋಗ್ಯ ಶಿಬಿರ ಆಯೋಜನೆ, ಕ್ಯಾನ್ಸರ್ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ರೂಪಿಸುವ ಧ್ಯೇಯವನ್ನು ಹೊಂದಿದ್ದೇನೆ. ಅಲ್ಲದೆ ಮುಖ್ಯವಾಗಿ ಹಸಿವು ಮುಕ್ತ ಸಮಾಜ ನಿರ್ಮಾಣವಾಗಿಸಲು ನನ್ನ ಶಕ್ತಿ ಮೀರಿ ದುಡಿಯುತ್ತೇನೆ. ಪ್ರಮುಖವಾಗಿ ಪರಿಸರ ಸಂರಕ್ಷಣೆ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಜಿಲ್ಲಾ ರಾಜ್ಯಪಾಲ ಡಾ.ಪಿ.ಆರ್.ಎಸ್.ಚೇತನ್ ಮಾತನಾಡಿ ಸಾಮಾನ್ಯ ಕುಟುಂಬದಿಂದ ಬಂದ ನನ್ನಂತವರು ಜನರ ಸೇವೆ ಮಾಡಲು ಅಕಾಶ ಕಲ್ಪಿಸಿದೆ, ಲಯನ್ಸ್ ಕ್ಲಬ್ ನಾಯಕತ್ವ ಗುಣ ಬೆಳೆಸುತ್ತದೆ. ಪ್ರಪಂಚದಾದ್ಯಂತ ಲಯನ್ಸ್ ಮಾಡಿರುವ ಸೇವೆಯನ್ನು ಯಾವುದೇ ಸಕಾರ ಮಾಡಲು ಸಾಧ್ಯವಿಲ್ಲ, ರಕ್ತನಿಧಿ, ಆರೋಗ್ಯ ಶಿಬಿರ, ಕಣ್ಣಿನ ಶಸ್ತ್ರ ಚಿಕಿತ್ಸೆ, ಅಂಗವಿಕಲರ ಸೇವೆಯಲ್ಲಿ ಸಂಸ್ಥೆ ಮುಂದಿದೆ. ಲಯನ್ಸ್ ಕ್ಲಬ್ 53 ವರ್ಷಗಳ ಭವ್ಯ ಇತಿಹಾಸ ಹೊಂದಿದೆ. ಸಮಾಜಕ್ಕೆ ನೀವು ನೀಡಿದ ಸೇವೆ, ನಿಮ್ಮ ಬದುಕಿನಲ್ಲಿ ಬೇರೆ ರೂಪದಲ್ಲಿ ಪಡೆದುಕೊಳ್ಳುತ್ತೀರಿ, ನಿಮ್ಮ ಮಾತೃ ಬಷೆ ಯಾವುದೇ ಆಗಿರಲಿ ಮಕ್ಕಳಿಗೆ ಕನ್ನಡ ಕಲಿಸಿ ಮಕ್ಕಳಿಗೆ ಕನ್ನಡ ಪುಸ್ತಕ ಉಡುಗೊರೆಗಳನ್ನು ನೀಡಿ ಎಂದ ಅವರು ನಿಮ್ಮ ಸೇವಾ ಕಾರ್ಯಗಳ ಮೂಲಕ ಬಡ ಜನರಿಗೆ ಉತ್ತಮ ಸೇವೆ ಒದಗಿಸಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಾ.ಸುನಂದಾ, ಜಯದೇವ ಆಸ್ಪತ್ರೆಯ ಡಾ.ಪಿ.ಕುಮಾರ್, ಡಾ.ಸೃಜನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಗವಿಕಲರಿಗೆ ವೀಲ್‍ಚೇರ್‍ಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಸಮಾರಂಭದಲ್ಲಿ ಗೋಪಾಲಕೃಷ್ಣ, ಜಿ.ಮಹೇಶ್, ಬಸವರಾಜು, ಎನ್.ಎಂ.ಮಂಜುನಾಥ್, ಎನ್.ಜಯರಾಮು, ಎನ್,ಆರ್.ಕೃಷ್ಣಪ್ಪಗೌಡ, ಎನ್.ಉಮೇಶ್, ಎಸ್.ನಾಗರಾಜು, ಹೆಚ್.ಎಸ್.ರಾಜು, ಎನ್.ಶ್ರೀನಿವಾಸ್, ನಂಜುಂಡಸ್ವಾಮಿ(ಅಂಬಿ), ಮಧುಸೂಧನ್, ವಿಜಯ್‍ಕುಮಾರ್, ತಮ್ಮಣ್ಣೇಗೌಡ, ಸೇರಿದಂತೆ ಹಲವಾರು ಪ್ರಮುಖರು ಇದ್ದರು.