ಪಿಂಚಣಿ ಅದಾಲತ್ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಿ: ಡಾಟಟ ಕೆ.ಧನಂಜಯ್
ಸಂಜೆವಾಣಿ ವಾರ್ತೆ
ಹನೂರು ಜು 22 :- ತಾಲೂಕಿನ ಶಾಗ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಣಿಗಮಂಗಲ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಸಾಮಾಜಿಕ ಭದ್ರತೆ ಯೋಜನೆಯ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಯಿತು.
ಗಾಣಿಗ ಮಂಗಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತೆ ಯೋಜನೆ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತೆ ಯೋಜನೆಗೆ ಸಂಬಂಧಿಸಿದಂತೆ ಅರ್ಜಿಗಳು ಸಲ್ಲಿಕೆಯಾಗಿದೆ.
ಕಾರ್ಯಕ್ರಮದಲ್ಲಿ ಗ್ರೇಡ್-2 ಹನೂರು ತಹಶೀಲ್ದಾರ್ ಡಾII ಕೆ.ಧನಂಜಯ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಗಾಣಿಗಮಂಗಲ ಗ್ರಾಮವು ಕಾಡಂಚಿನ ಪ್ರದೇಶದಲ್ಲಿ ಇರುವುದರಿಂದ ಪಿಂಚಣಿ ಕಾರ್ಯಕ್ರಮವನ್ನು ನಿಮ್ಮ ಗ್ರಾಮದಲ್ಲಿ ಹಮ್ಮಿಕೊಂಡಿದ್ದೇವೆ.
ಸ್ಥಳದಲ್ಲೇ ವೃದ್ಯಾಪಿ ವೇತನ ವಿಕಲಚೇತನ ಅರ್ಜಿಯನ್ನು ಕೊಡಬಹುದು ನೀವು ಕೊಟ್ಟ ಅರ್ಜಿಗಳನ್ನ ಜರೂರಾಗಿ ಮಾಡಲಾಗುವುದು ಅದರಿಂದ ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿ.
ಸರ್ಕಾರದಿಂದ ಮಾಸಸನ ಪಡೆಯಲು ವೃದ್ಧವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಕಲಚೇತ, ವಿಧವಾ ವೇತನ. ವೃದ್ಧಾಭಿವೇತನ ಹಾಗೂ ಮಾಸಸನ ಹಣ ಬರುತ್ತಿಲ್ಲ ಎಂದು ಎರಡು ಅರ್ಜಿಗಳು ಬಂದಿದವು.
ಒಟ್ಟು ಆರು ಅರ್ಜಿಗಳು ಬಂದಿದ್ದವು. 65 ವರ್ಷ ಮೇಲ್ಪಟ್ಟವರು ಸರ್ಕಾರದಿಂದ 600 ಬರುತ್ತಿದ್ದು. ಹೆಚ್ಚುವರಿ ಯಾಗಿ ಹಣ ಪಡೆಯಲು 13 ಅರ್ಜಿಗಳು ಸಲ್ಲಿಕೆಯಾಗಿದೆ.
ಈ ಸಂದರ್ಭದಲ್ಲಿ ಶಿರಸ್ತೇದಾರ್ ನಾಗೇಂದ್ರ. ಆರ್.ಐ ಮಾದೇಶ್. ಗ್ರಾಮ ಲೆಕ್ಕಾಧಿಕಾರಿ ಕುಮಾರ್, ಶಾಗ್ಯ ಗ್ರಾಮ ಪಂಚಾಯತಿ ಸದಸ್ಯರಾದ ಮಾದೇವಮ್ಮ. ಹಾಗೂ ಮುಖಂಡರು ಹಾಜರಿದ್ದರು.