ಹಬೊಹಳ್ಳಿ:ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಮಧ್ಯವರ್ಜನ ಶಿಬಿರ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜು.21 ಪಟ್ಟಣದ ಮಂಚಮಸಾಲಿ ಸಮುದಾಯಭವನದಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಆಡಳಿತ ಮತ್ತು ಬೆಳ್ತಂಗಡಿಯ ಹಾಗೂ ವಿಜಯನಗರ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ಟ್ರಸ್ಟ್, ಪಾನಮುಕ್ತ ಸಂಘಟನೆಗಳು ಜಂಟಿಯಾಗಿ ಮಧ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದ್ದತ್ತು
1823ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ನೋಬೆಲ್ ಶಿಕ್ಷಣ ಟ್ರಸ್ಟ್‍ನ ಆಡಳಿತಾಧಿಕಾರಿ ಹಫೀಜ್ ಶೇಕ್ ಮಾತನಾಡಿ ಪ್ರತಿಯೊಬ್ಬ ಮನುಷ್ಯ ಮದ್ಯದ ಗೀಳಿಗೊಳಗಾಗುತ್ತಾನೋ ಅವರ ಕುಟುಂಬಗಳು ನೆಮ್ಮದಿಯನ್ನು ಕಳೆದುಕೊಂಡು ಗೋಳಾಡುತ್ತಿರುತ್ತವೆ. ಮದ್ಯಪಾನರಾಗಲು ಯಾವುದೋ ಕಾರಣ ಬೇಕಿಲ್ಲ. ಅದರ ದಾಸರಾದವರು ಸಮಾಜದಿಂದಲೂ ಹಾಗೂ ಅವರ ಸಂಬಂಧಿಕರಿಂದಲೂ ಅತ್ಯಂತ ಕೀಳುಭಾನೆಗಳಿಂದ ನೋಡುತ್ತಾರೆ. ಆದ್ದರಿಂದ ಪಾನಮುಕ್ತರಾಗಿ ಹೊಸ ಜೀವನ ಕಟ್ಟಿಕೊಳ್ಳುವಂತ ಅವಕಾಶವನ್ನು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವೆ ಅನನ್ಯ ಎಂದರು.
ಶಿಬಿರದ ಮಾರ್ಗದರ್ಶಕರಾದ ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಮದ್ಯವರ್ಜನ ಶಿಬಿರಗಳು ಮದ್ಯಸವ್ಯಸನಿಗಳಿಗೆ ದಾರಿ ದೀಪವಾಗಿವೆ. ಈಗಾಗಲೇ ರಾಜ್ಯದಲ್ಲಿ 1822 ಶಿಬಿರಗಳು ಯಶಸ್ವಿಯಾಗಿ 1ಲಕ್ಷಕ್ಕೂ ಹೆಚ್ಚುಜನ ಈ ಮದ್ಯವ್ಯಸನದಿಂದ ಮುಕ್ತರಾಗಿದ್ದಾರೆ. ಈ ಶಿಬಿರದಲ್ಲಿ 70ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದು, 8ದಿನಗಳ ಕಾಲ ನಡೆಯುವ ಶಿಬಿರದಿಂದ ಅದರ ಪ್ರತಿಫಲಕ್ಕಾಗಿ ಸಮಾಜ ಮತ್ತು ಮದ್ಯಪಾನಕ್ಕೋಲಗಾದ ಕುಟುಂಬಗಳ ಸದಸ್ಯರು ಎದಿರು ನೋಡುತ್ತಿದ್ದಾರೆ ಎಂದರು.
ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ, ಮಾಜಿ ಸದಸ್ಯ ಬಾದಾಮಿ ಮೃತ್ಯುಂಜಯ, ಜಿಲ್ಲಾ ನಿರ್ದೇಶಕರಾದ ಸತೀಶ್ ಸೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ನವೀನ್ ಕುಮಾರ್, ಶಿಬಿರದ ಸಮಿತಿಯ ಅಧ್ಯಕ್ಷ ಡಿ.ಓಬಳೇಶ, ಗೌರವಾಧ್ಯಕ್ಷ ಕಿನ್ನಾಳ್ ಸುಭಾಷ್, ಶಿವಪ್ಪನಾಯಕ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಎಂ.ಗುಂಡಪ್ಪ, ಶಿಲ್ಪಕಲಾ, ಪವಿತ್ರಾ, ಸಿದ್ದೇಶ್ವರ, ನಟರಾಜ್ ಬಾದಾಮಿ, ಯು.ಕೆ.ಕೊಟ್ರೇಶ, ಬಿ.ಎಸ್.ಸುಭಾಷ್, ಬ್ರಹ್ಮಾನಂದ ಗುತ್ತಲ್, ವಿವೇಕ್ ವಿನ್ಸೆಂಟ್ ಪಾಯಾಸ್, ವೈ.ಎ.ನಾಗೇಶ್, ದಿವಾಕರ ಪೂಜಾರ್, ಮಂಜುನಾಥ ಪೂಜಾರಿ, ಹುಚ್ಚಪ್ಪ, ತಾಲೂಕು ವೈದ್ಯಾಧಿಕಾರಿ ಡಾ.ಶಿವರಾಜ್, ಸಹಾಯಕಿ ಶ್ವೇತಾ, ಪಿಎಸ್‍ಐ ಬಸವರಾಜ್ ಅಡವಿಬಾವಿ, ತಾಲೂಕು ಯೋಜನಾಧಿಕಾರಿಗಳಾದ ಮಂಜುಳ, ಟಿ.ಆರ್.ವಾಣಿ ಮಡಿವಾಳ, ಕ್ಷೇತ್ರ ಮೇಲ್ವಿಚಾರಕರಾದ ಜಿ.ಕೇಶವ, ಎಸ್.ಪ್ರಭು ಮತ್ತಿತರರು ಪಲ್ಗೊಂಡಿದ್ದರು.
One attachment • Scanned by Gmail