12ನೇ ಶತಮಾನದಲ್ಲಿ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ ಶಿವಶರಣ ಹಡಪದ ಅಪ್ಪಣ
ಕಲಬುರಗಿ:ಜು.21: 12ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರು ಇವರು ಹಡಪದ ಸಮಾಜದವರಾಗಿದ್ದು, ಬಸವಣ್ಣನವರು ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು ಎಂದು ಮುದಗಲ್ಲ ಕಲ್ಯಾಣ ಆಶ್ರಮ ಶ್ರೀ ಮಹಾಂತೇಶ್ವರ ಮಠ ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು.
ಭಾನುವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಪಂಚಾಯತ್, ಕಲಬುರಗಿ ಇವರುಗಳು ಸಂಯುಕ್ತಾಶ್ರಯದಲ್ಲಿ ಶಿವಶರಣ ಹಡಪದ ಅಪ್ಪಣ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಶರಣರ ಸಂತ ಪೂಜ್ಯರ ಆಚಾರ ವಿಚಾರಗಳಿಂದ.ಸಮಾಜಕ್ಕೆ ಮಹಾನ ಜ್ಞಾನವನ್ನು ನೀಡಿದ್ದಾರೆ ನಮ್ಮ ಈ ಸರ್ಕಾರ ಇಡೀ ರಾಜ್ಯದಲ್ಲಿ ಶಾಲೆ ಕಾಲೇಜುಗಳಲ್ಲಿ ಸರ್ಕಾರಿ ಕಛೇರಿಗಳ ಹಡಪದವರು. ಅಪ್ಪಣನವರ ಅಪರೂಪದ ವಚನಗಳಿವೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವಂತಹ ವಚನಗಳಾಗಿದ್ದವು ಶರಣರ ಹೆಸರುಗಳು ಕಾಲ ಕಾಲದವರಿಗೆ ಇರುತ್ತವೆ ಅದಕ್ಕೆ ಕಾರಣ ಅವರ ನಡೆ ನುಡಿಯಾಗಿದೆ. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಅರ್ಥಪೂರ್ಣ ಜಯಂತಿಯನ್ನ ಆಚರಣೆಯ ಮಾಡಿದ್ದನ್ನು ಸ್ವಾಗರ್ತವಾಗಿದೆ ಎಂದರು.
ಹಡಪದ ಸಮಾಜ ಒಂದು ಕಾಲದಲ್ಲಿ ಸಮಾಜವನ್ನು ಕಂಡರೆ ಗೌರವಿಲ್ಲದೆ ವ್ಯವಸ್ತೆ ಇತ್ತು.ಎಷ್ಟು ಹಳ್ಳಿಗಳಲ್ಲಿ ಅವರು ಮುಖನೋಡಬಾರದು ಪಂಚಾಂಗ ಶಾಸ್ತ್ರದ ಅವರನ್ನು ನೋಡಿದರೆ ಅಶುಭ ಎಂದು ಬರೆದಿಟ್ಟಿದ್ದರು ಎಂದರು.