ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಲು ಕರೆ
ಕಲಬುರಗಿ:ಜು.21ಇಂದು ಸ್ಫರ್ಧಾತ್ಮಕ ಯುಗವಾಗಿದ್ದರಿಂದ ಒಳ್ಳೆಯ ಗುರಿಮುಟ್ಟಬೇಕಾದರೆ, ಉತ್ತಮ ಸಾಧನೆ ಮಾಡಬೇಕಾದರೆ ಪ್ರತಿಯೊಬ್ಬರು ಸ್ಫರ್ಧೆಯಲ್ಲಿ ತೊಡಬೇಕಾಗಿರುವುದು ಅನಿವಾರ್ಯವಾಗಿದೆ. ಇಂಜಿನೀಯರ್, ಮೆಡಿಕಲ್ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರು ಕೂಡಾ ಸ್ಫರ್ಧೆ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ಅತಿಹೆಚ್ಚು ಅಂಕಗಳನ್ನು ಪಡೆದು ತೇರ್ಗಡೆಯಾಗುವುದರೊಂದಿಗೆ ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ರೂಪಿಸಿಕೊಳ್ಳಲು ಸಾದ್ಯವಾಗುತ್ತದೆ. ಅದಕ್ಕಾಗಿ ಆಧ್ಯಾತ್ಮ, ಸಾಮಾಜಿಕ, ಸಾಂಸ್ಕøತಿಕ, ವೈಜ್ಞಾನಿಕ ಅಂಶಗಳನ್ನು ವಿದ್ಯಾರ್ಥಿ ಜೀವನದಿಂದಲೆ ಅರಿತುಕೊಳ್ಳಬೇಕಾಗಿದೆಂದು ಜಿಲ್ಲಾ ಪಿ.ಯು ಉಪನಿರ್ದೇಶಕರಾದ ಶಿವಶರಣಪ್ಪ ಮುಳೇಗಾಂವ ತಿಳಿಸಿದರು.
ಅವರು ನಗರದ ಸಂತ ಜೋಸೆಫ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲ ಉದ್ಘಾಟಿಸಿ ಮಾತನಾಡಿ, ಜೋಸೆಫ್ ಕಾಲೇಜು ಉತ್ತಮವಾದ ಕಾಲೇಜು ಆಗಿದ್ದು, ಶೈಕ್ಷಣಿಕ ಸೇವೆಗಾಗಿ ಹುಟ್ಟಿಕೊಂಡ ಕ್ರೈಸ್ತ ಮಿಷನರಿಗಳು ಭಾರತದ ಶಿಕ್ಷಣ ಕ್ಷೇತ್ರಕ್ಕೆ ಅದ್ಭುತವಾದ ಕೊಡುಗೆಯನ್ನು ನೀಡಿರುವುದರಿಂದ, ಅವಕಾಶವಂಚಿತ ಜನರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ಇದಕ್ಕೆ ಕನ್ನಡದ ವಿಶ್ವಮಾನವರೆಂದು ಹೆಸರಾದ ರಾಷ್ಟ್ರಕವಿ ಕುವೆಂಪು ಅವರು ಇದಕ್ಕೆ ಸಾಕ್ಷಿಯಾಗಿದ್ದಾರೆಂದು ತಿಳಿಸಿದರು. ಮುಖ್ಯಅತಿಥಿಗಳಾಗಿ ಆಗಮಿಸಿದ ಸಾಹಿತಿ ಡಾ. ಸದಾನಂದ ಪೆರ್ಲ ಅವರು ಮಾತನಾಡುತ್ತ ಪ್ರತಿವರ್ಷ ಎಸ್.ಎಸ್.ಎಲ್.ಸಿ., ಪಿ.ಯು.ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಮತ್ತು ರ್ಯಾಂಕ್ ಪಡೆಯುತ್ತಿರುವ ಮಂಗಳುರು, ಉಡುಪಿ ಜಿಲ್ಲೆಗಳಿಗೆ ಕ್ರೈಸ್ತ ಮಿಷನರಿಗಳು ನೀಡಿದ ಶೈಕ್ಷಣಿಕ ಪರಿಸರವೇ ಕಾರಣವಾಗಿದೆ, ಆ ನಿಟ್ಟಿನಲ್ಲಿ ನಮ್ಮ ಜೋಸೆಫ್ ಶಿಕ್ಷಣ ಸಂಸ್ಥೆ ಮಹಿಳಾ ಸಬಲೀಕರಣಕ್ಕೆ ಶಿಕ್ಷಣದ ಮುಖಾಂತರ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತ ಬರುತ್ತಿದೆ. ಇಲ್ಲಿನ ವಿದ್ಯಾರ್ಥಿನಿಯರು ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ಮಾಡಿದ ಶೈಕ್ಷಣಿಕ ಸಾಧನೆ ಶ್ಲಾಘನೀಯವಾದುದು.
ಎಸ್.ಎಸ್.ಎಲ್.ಸಿಯಲ್ಲಿ ಕಡಿಮೆ ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಪ್ರತಭಾವಂತ ವಿದ್ಯಾರ್ಥಿಯಾಗಿ ಪರಿವರ್ತನೆ ಮಾಡುವಲ್ಲಿ ಕಾಲೇಜು ಶ್ರಮಿಸುತ್ತ ಬಂದಿರುವುದನ್ನು ಕುರಿತು ಹರ್ಷವ್ಯಕ್ತಪಡಿಸಿದರು. ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಇಂದ್ರೀಯವಾಗಿ ಸೇರಿಕೊಂಡಿರುವ ಮೊಬೈಲ್ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನಿಡಿದರು. 2024 ಮಾರ್ಚ ತಿಂಗಳಲ್ಲಿ ಜರುಗಿದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿಜ್ಞಾನ ವಿಭಾಗದ ಕು. ಅಜಕಾ (97%), ಕಲಾವಿಭಾಗದ ಕು. ಭಾಗೀರಥಿ (93.%), ವಾಣಿಜ್ಯ ವಿಭಾಗದ ಕು. ಜೌರಾ ಫಾತೀಮಾ (93%). ಹಾಗು ಉಚ್ಛ ಶ್ರೇಣಿಯಲ್ಲಿ ತೇರ್ಗಡೆಯಾದ 18 ವಿದ್ಯಾರ್ಥಿನಿಯರಿಗು ನಗದು ಬಹುಮಾನ, ಗೌರವ ಪುರಸ್ಕಾರ ಫಲಕವನ್ನು ಅತಿಥಿಗಣ್ಯರಿಂದ ನೀಡಿ ಅಭಿನಂದಿಸಲಾಯಿತು.
ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಸಜನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಪ್ರಾನ್ಸಿನ್ ಅವರು ಉಪಸ್ಥಿತರಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನಾಗೀತೆ ನಡೆಸಿಕೊಟ್ಟರು, ಪ್ರಾಂಶುಪಾಲರಾದ ಡಾ. ಚಿ.ಸಿ. ನಿಂಗಣ್ಣ ಅತಿಥಿಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು, ವಿದ್ಯಾರ್ಥಿನಿಯರು, ಉಪನ್ಯಾಸಕರು, ಪೋಷಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಜೇಬಾ ಕೆ. ಕಾರ್ಯಕ್ರಮ ನಿರೂಪಿಸಿದರು, ಶೈಲಜಾ ಎಸ್. ವಂದನಾರ್ಪಣೆ ಮಾಡಿದರೆಂದು ಪ್ರಾಂಶುಪಾಲರಾದ ಡಾ. ಚಿ.ಸಿ. ನಿಂಗಣ್ಣ ಅವರು ತಿಳಿಸಿದರು.