ಹಬೋಹಳ್ಳಿ:ಸಾರ್ವಜನಿಕರ ಬೇಡಿಕೆಯಂತೆ ಬೆಂಗಳೂರಿಗೆ ಡೇ ಬಸ್‍ಗೆ ಚಾಲನೆ
ಹಗರಿಬೊಮ್ಮನಹಳ್ಳಿ:ಜು.21 ತಾಲೂಕಿನ ಹಾಗೂ ಕ್ಷೇತ್ರದ ಒತ್ತಾಸೆಯಂತೆ ಪಟ್ಟಣದಿಂದ ನಿತ್ಯ ಬೆಳಗ್ಗೆ 5.45ಕ್ಕೆ ಬೆಂಗಳೂರಿಗೆ ಹೊರಡುವ ಸಾರಿಗೆ ಬಸ್‍ಗೆ ಘಟಕದಿಂದ ಶಾಸಕ ಕೆ.ನೇಮಿರಾಜ್‍ನಾಯ್ಕ್ ಶನಿವಾರ ಚಾಲನೆ ನೀಡಿದರು.
ಪಟ್ಟಣದ ಬಸ್ ಘಟಕದ ಆವರಣದಲ್ಲಿ ಬೆಂಗಳೂರಿಗೆ ಹೋಗಲು ಶೃಂಗಾರಗೊಂಡ ಬಸ್‍ಗೆ ಮಠಾಧೀಶರೊಂದಿಗೆ ಚಾಲನೆ ನೀಡಿದ ಅವರು ಮಾತನಾಡಿ, ಇದೇ ಘಟಕದಿಂದ ತಾಲೂಕಿನ ಮುತ್ಕೂರು-ಬೆಂಗಳೂರು ಬಸ್ ರಾತ್ರಿ ಹೋಗುತ್ತಿದ್ದು, ಸಾರ್ವಜನಿಕರು ದಿನದ ಬೆಳಗ್ಗೆ ಒಂದು ಬಸ್ ಬೆಂಗಳೂರಿಗೆ ಹೋಗುವ ಅವಶ್ಯವಿದ್ದು, ಬಹುದಿನಗಳಿಂದ ಬೇಡಿಕೆಯನ್ನು ಸಹ ಸಲ್ಲಿಸಿದ್ದರು. ಅವರ ಬೇಡಿಕೆಗನುಗುಣವಾಗಿ ಇಂದು ಬಸ್ ಸಂಚಾರ ಆರಂಭವಾಗಿದೆ. ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಘಟಕಕ್ಕೆ ಉತ್ತಮ ಲಾಭವನ್ನು ತಂದುಕೊಡಲಿ ಎಂದರು.
ಘಟಕದ ವ್ಯವಸ್ಥಾಪಕ ನೀಲಪ್ಪ ಮಾತನಾಡಿ, ಬೆಳಗ್ಗೆ 5.45ಕ್ಕೆ ಹೊರಡುವ ಬಸ್ ಎಂದಿನಂತೆ ಕೊಟ್ಟೂರು, ಉಜ್ಜಿನಿ, ಚಿತ್ರದುರ್ಗ ಮಾರ್ಗವಾಗಿ, ಮಧ್ಯಾಹ್ನ 12.30ಕ್ಕೆ ಬೆಂಗಳೂರು ತಲುಪಲಿದೆ. ಬಳಿಕ ಅಲ್ಲಿಂದ 2.30ಕ್ಕೆ ಹೊರಟು ಅದೇ ಮಾರ್ಗವಾಗಿ ಪಟ್ಟಣಕ್ಕೆ ಮರಳಲಿದೆ ಎಂದರು.
ಈ ವೇಳೆ ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ಗದ್ದಿಕರೆ ಚರಂತೇಶ್ವರ ಸ್ವಾಮೀಜಿ, ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ವಿ.ವೀರಣ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪಾಂಡುನಾಯ್ಕ್, ಸಂಚಿ ಶಿವಕುಮಾರ್, ಸರ್ದಾರ್ ಯಮನೂರ, ಹೋಟಲ್ ಸಿದ್ದರಾಜ್, ಬಿ.ಜಿ.ಬಡಿಗೇರ್, ಜಿ.ಎಂ.ಜಗದೀಶ, ಬ್ಯಾಟಿ ನಾಗರಾಜ್, ಎಲೆಗಾರ್ ಮಂಜುನಾಥ, ರಾಜು ಪಾಟೀಲ್, ಬಡಿಗೇರ್ ಬಸವರಾಜ್, ಗೋಣೆಪ್ಪ, ಬಣಕಾರ್ ಅರುಣ್, ಚಿತ್ತವಾಡ್ಗಿ ಪ್ರಕಾಶ್, ಎಚ್.ಎಂ.ವಿಜಯಕುಮಾರ್, ಪವಾಡಿ ಮಂಜುನಾಥ, ದಾದಮ್ಮನವರ ವಿಜಯಂದ್ರ, ರಾಹುಲ್‍ನಾಯ್ಕ್, ಗಜೇಂದ್ರ ಮಾಚಿ, ಮಂಜುನಾಥ, ಮೇಘರಾಜ್, ಬಷೀರ್ ಹಾಗೂ ಶಾಸಕರ ಆಪ್ತಸಹಾಯಕ ದೊಡ್ಡಬಸವರಾಜ ರೆಡ್ಡಿ ಸೇರಿದಂತೆ ಸಾರಿಗೆ ಘಟಕದ ಸಿಬ್ಬಂದಿ ಮತ್ತಿತರರು ಇದ್ದರು.