ವೀರಶೈವ ಮಹಾಸಭಾ ಜಿಲ್ಲಾ ಸಮಿತಿಗೆ ಮತದಾನ ಸಿರುಗುಪ್ಪದಲ್ಲಿ ಮಾತ್ರ  ತಾಲೂಕು ಸಮಿತಿಗೆ ಸ್ಪರ್ಧೆ.
*  7791 ಮತದಾರರು, 18 ಮತಗಟ್ಟೆ
* ಆಯಾ ತಾಲೂಕು ಮಟ್ಟದಲ್ಲಿ ಮತದಾನ
*  ಮತದಾನ ವಿಳಂಬ ಸಾಲುಗಟ್ಟಿದ ಮತದಾರರು
ಎನ್.ವೀರಭದ್ರಗೌಡ
ಬಳ್ಳಾರಿ:ಜು,21-  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸಮಿತಿ ಮತ್ತು ಸಿರುಗುಪ್ಪ ತಾಲೂಕು ಸಮಿತಿಯ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಯಗೆ ಇಂದು ಮತದಾನ ನಡೆಯಿತು.
ಮತದಾನಕ್ಕಾಗಿ ನಗರದ ಬಳ್ಳಾರಿಯ ಅಲ್ಲಂ ಸುಮಂಗಳಮ್ಮ‌ಕಾಲೇಜಿನಲ್ಲಿ 12 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಿತ್ತು.  ಉಳಿದಂತೆ ಸಿರುಗುಪ್ಪದಲ್ಲಿ ಮೂರು, ಕಂಪ್ಲಿ, ಕುರುಗೋಡು ಹಾಗು ಸಂಡೂರಿನಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಿತ್ತು ಮಧ್ಯಾಹ್ನದ ಒಂದುವರೆ ವೇಳೆಗೆ ನಗರದಲ್ಲಿ ಒಂದುವರೆ ಸಾವಿರ ಮತದಾರರು ಮತ ಚಲಾಯಿಸಿದ್ದರು ಎಂದು ಸಹಾಯಕ ಚುನಾವಣಾ ಅಧಿಕಾರಿ ಲಿಂಗನಗೌಡ ತಿಳಿಸಿದ್ದಾರೆ.
ಕೆಲ ಮತಗಟ್ಟೆಗಳ ಮುಂದೆ ಸಾಲಾಗಿ ನಿಂತಿದ್ದರು. ಅರ್ಧ ತಾಸಿಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು.
ಕಾಲೇಜಿನ‌ ಮುಂಭಾಗ ಮತ್ತು ಆವರಣದಲ್ಲಿ ಮತದಾರರಿಗೆ ತಮಗೆ ಮತ ನೀಡುವಂತೆ ಅಭ್ಯರ್ಥಿಗಳು ಮತಯಾಚನೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ನಗರ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.
ಬಳ್ಳಾರಿ ತಾಲೂಕಿನಲ್ಲಿ 4458, ಕಂಪ್ಲಿ- 534, ಕುರುಗೋಡು- 542, ಸಂಡೂರು-60,  ಸಿರುಗುಪ್ಪ-1554 ಸೇರಿ  ಜಿಲ್ಲೆಯಲ್ಲಿ  ಒಟ್ಟು 7791 ಮತದಾರರಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ  ಬಿಚ್ಚುಗಲ್ಲು ಪಂಚಾಕ್ಷರಪ್ಪ, ಚಾನಾಳ್ ಶೇಖರ್ ಪ್ರಬಲ ಸ್ಪರ್ಧಿಗಳಾಗಿದ್ದರು,ಇನ್ನು  30 ಕಾರ್ಯಕಾರಿ ಸ್ಥಾನಗಳಿಗೆ  10 ಮಹಿಳಾ ಸ್ಥಾನಗಳಿಗೆ 18 ಜನ ಮತ್ತು 20 ಸಾಮಾನ್ಯ ಸ್ಥಾನಗಳಿಗೆ 39 ಜನರು  ಕಣದಲ್ಲಿದ್ದರು.
ಮತದಾನದ ನಂತರ  ಇಂದೇ ಮತಗಳ ಎಣಿಕೆ ನಡೆಯಲಿದ್ದು ಮಧ್ಯರಾತ್ರಿ ನಂತರ ಫಲಿತಾಂಶ ದೊರೆಯಲಿದೆ.
2 Attachments • Scanned by Gmail