ಶಿಕ್ಷಕರು ಸಮಾಜದ ನೈಜ ಗುರುಗಳು
ಕಲಬುರಗಿ:ಜು.21: ಶಿಕ್ಷಕರು ವಿದ್ಯಾರ್ಥಿಗಳಿಗೆ ಶ್ರೇಷ್ಠ ಜ್ಞಾನ, ಬುದ್ದಿ, ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಸೂಕ್ತ ಮಾರ್ಗದರ್ಶನ ಮಾಡಿ, ಅವರನ್ನುರಾಷ್ಟ್ರದ ಶ್ರೇಷ್ಠ ಸಂಪನ್ಮೂಲಗಳನ್ನಾಗಿಸುತ್ತಾರೆ. ಸಮಾಜದಲ್ಲಿ ಗುರುವಿನ ಪಾತ್ರ ನಿರ್ವಹಿಸುತ್ತಾರೆ. ಸದೃಢರಾಷ್ಟ್ರದ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅನನ್ಯವಾಗಿದ್ದು, ಶಿಕ್ಷಕರು ಸಮಾಜ ನೈಜ ಗುರುವಾಗಿದ್ದಾರೆ ಎಂದು ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಸುನೀಲಕುಮಾರ ಎಚ್.ವಂಟಿ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಭಾನುವಾರ ಏರ್ಪಡಿಸಲಾಗಿದ್ದ ‘ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಪಾದಪೂಜೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮತ್ತು ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ವಿದ್ಯಾರ್ಥಿಗಳು ನಿಮ್ಮ ತಾಯಿ-ತಂದೆ, ಶಿಕ್ಷಕರು, ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕøತಿ ಬೆಳೆಸಿಕೊಳ್ಳಬೇಕು. ಯಾವ ವಿದ್ಯಾರ್ಥಿ ಶಿಕ್ಷಕರಿಗೆ ನೈಜ ಗೌರವ ನೀಡುತ್ತಾನೆಯೋ, ಆತನ ಬದುಕು ಸಮೃದ್ಧವಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವುದರ ಜೊತೆಗೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಮೂಲಕ ಸಮಾಜಕ್ಕೆ ಗುರುವಾಗುವ ಕಾರ್ಯ ಮಾಡಬೇಕು. ಗುರುವಂದನೆ ನಿಮಿತ್ಯ ಶಿಕ್ಷಕರಿಗೆ ಗೌರವಿಸುವ ಸಂಪ್ರದಾಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಚಂದ್ರಲೇಖಾ ಎಸ್.ಪೂರ್ಮಕರ್, ಶಿಲ್ಪಾ ಎಸ್.ಖೇಡ್, ಪ್ರಿಯಾಂಕಾ ಪಿ.ಕುಲಕರ್ಣಿ, ಪ್ರೀತಿ ಜೆ.ಬಿರಾದಾರ, ಪೂರ್ಣಿಮಾ ಸಿ.ಪಾಟೀಲ, ಖಮರುನನೀಸ್ ಶೇಖ್, ಸರಸ್ವತಿ ಎಂ.ಬಿರಾದಾರ, ಮಲ್ಲಮ್ಮ ಬಿ.ಕೋಣಿನ್, ವರ್ಷಾರಾಣಿ ಪಾಟೀಲ, ರೋಹಿತ್ ಯೆರಪುಲ್, ಕಾಶಮ್ಮ ಚಿನ್ಮಳ್ಳಿ ಅವರಿಗೆ ಶಾಲೆಯ ವಿದ್ಯಾರ್ಥಿಗಳು ಪಾದಪೂಜೆ ನೆರವೇರಿಸಿ, ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸೇವಕರಾದ ನಾಗಮ್ಮ, ಸುನಿತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.