ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಬಾಗಲಕೋಟೆ,ಜು.21″ 12ನೇ ಶತಮಾನದ ಮಹಾ ಮಾನತಾವಾದಿ ಬಸಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಶಿವಶರಣ ಹಡಪದ ಅಪ್ಪಣ್ಣ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯ ಇರದ ಸಮಯದಲ್ಲಿ ಅಪ್ಪಣ್ಣನವರ ದರ್ಮ ಪತ್ನಿ ಲಿಂಗಮ್ಮಳಿಗೆ ವಚನ ಮಂಡಿಸುವ ಕಾರ್ಯವನ್ನು ಒದಗಿಸಿಕೊಟ್ಟವರು ಅಪ್ಪಣ್ಣನವರು ಎಂದರು.
ಶರಣರೆಲ್ಲ ಒಂದೆಡೆ ಸೇರಿ ಪ್ರಭುದೇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಹಾ ಮನೆಯ ಸಭೆಯಲ್ಲಿ ಶರಣರು ವಾದಿಸಿದ ವಚನಗಳಿಗೆ ಅಂಕಿತ ಹಾಕುವ ಕಾರ್ಯ ಅಣ್ಣನ್ನವರದಾಗಿತ್ತು. ತದನಂತರವೇ ಆ ವಚನ ಪ್ರಚಲಿತಗೊಳ್ಳುತ್ತಿದ್ದುದು ಎಂದರು. ಶರಣರೆಲ್ಲರ ಬೋಜನ ಕೂಟಡವಾದ ಮೇಲೆ ಪ್ರತಿಯೊಬ್ಬರಿಗೂ ತಾಂಬೂಲ ಕೊಡುವ ವ್ಯವಸ್ಥೆ ಅಪ್ಪಣ್ಣನವರದಾಗಿತ್ತು. ನಡೆ-ನುಡಿ, ಆಚಾರ-ವಿಚಾರ, ಲಿಂಗಪೂಜೆ, ಜಂಗಮ ದಾಸೋಹಗಳಂತಹ ಕಾರ್ಯಗಳನ್ನು ಮಾಡಿ ನುಡಿದಂತೆ ನಡೆದವರ ಸಾಲಿನಲ್ಲಿ ಅಪ್ಪಣ್ಣ ಅಗ್ರಗಣ್ಯರಾಗಿದ್ದಾರೆ. ಇಂತಹ ವಚನಕಾರರ ಆದರ್ಶ ಮುಂದಿನ ಜನಾಂಗಕ್ಕೆ ಪ್ರಚಲಿತವಾಗಿರಲಿ ಎಂಬ ಉದ್ದೇಶದಿಂದ ಅವರಿಗೆ ಗೌರವ ಕೊಡುವ ನಿಮಿತ್ಯವಾಗಿ ಸರಕಾರ ಅವರ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ ಅನಿಷ್ಟತೆ, ಮೇಲು-ಕೀಳು, ಬಡವ ಬಲ್ಲಿದನೆಂಬ ಬೇದ ಭಾವ ಇರುವಂತಹ ಅಂದಿನ ದಿನಗಳಲ್ಲಿ ಅಂತಹ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡಿ ಸರ್ವರೂ ಸಮಾನರು ಎಂದು ಸಾರಿದವರು ಶರಣರು. ಅಂದು ನಡೆದ ಸಾಮಾಜಿಕ ಕ್ರಾಂತಿ ಇಂದು ವಿಶ್ವವೇ ಅನುಸರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಸಂವಿಧಾನ ಕೂಡಾ ಸಮಾಜದ ಸುಧಾರಣೆಗೆ ಬಂದಿದ್ದು, ಇದು ಕೂಡಾ ಶರಣರಿಂದ ಬಂದಿದ್ದು, ವಚನಗಳು ಜೀವನದ ಸಂವಿಧಾನವಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಬೆಂಗಳೂರು ಗ್ರಾಮಾಂತರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ ಶರಣರು ಸಮ ಸಮಾಜ ಕಟ್ಟಲು ಶ್ರಮಿಸಿದವರು. ಅಂದಿನ ಅನುಭವ ಮಂಟಪ ಇಂದು ಸಂಸತ್ತು ಆಗಿದೆ. ವಚನ ಸಾಹಿತ್ಯದ ಅನುಭವ ಬದುಕಿನ ಜೀವನವಾಗಬೇಕು. ಸಮ ಸಮಾಜ ನಿರ್ಮಾಣಕ್ಕೆ ಅಂದಿನ ಅನುಭವ ಮಂಟಪದ ಉಸ್ತುವಾರಿ ವಹಿಸಿದ್ದವರು ಅಪ್ಪಣ್ಣರಾಗಿದ್ದರು. ಅವರ ನೀಜವಾದ ಹೆಸರು ಜೀವಣ್ಣ ಬಸವಣ್ಣನವರು ಕರೆಯುತ್ತಿರುವುದು ಅಪ್ಪಣ್ಣ ಎಂದು ತಿಳಿಸಿದರು.
ಸಮಾಜದ ವತಿಯಿಂದ ನಾಗಪ್ಪ ಹಡಪದ ಮತ್ತು ಶಿವರಾಜ ಅವರನ್ನು ಹಾಗೂ ಎಸ್.ಎಸ್.ಎಲ್.ಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸಮುದಾಯದ ಮಕ್ಕಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿ ಎಸ್.ಎಂ.ಕಾಂಬಳೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯ ಮುಖಂಡರಾದ ಎಚ್.ಬಿ.ವೈದ್ಯ, ಮಲ್ಲಣ್ಣ ಹಡಪದ, ಬಸವರಾಜ ಲಂಕೆಪ್ಪ, ಬಸವರಾಜ ಹಡಪದ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.