ಶ್ರಾವಣಮಾಸದ ದಿನಗಳಲ್ಲಿ ಅರ್ಜಿತ ಅಭಿಷೇಕಗಳ ಸ್ಥಗಿತ
ಬಳ್ಳಾರಿ:ಜು,21-  ಶ್ರೀಶೈಲ ದೇವಸ್ಥಾನದಲ್ಲಿ ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಶ್ರಾವಣಮಾಸೋತ್ಸವಗಳ ಆಯೋಜನೆ  ಮಾಡಿದೆಮನದು ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಿ.ಪೆದ್ದಿರಾಜು ತಿಳಿಸಿದ್ದಾರೆ.
ಶ್ರಾವಣಮಾಸೋತ್ಸವದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ಶ್ರಾವಣ ಮಾಸದಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ತೆಲುಗು ರಾಜ್ಯಗಳಲ್ಲದೆ ದೇಶದ ಹಲವು ರಾಜ್ಯಗಳ ಭಕ್ತರು ಆಗಮಿಸುತ್ತಾರೆ.
ವಿಶೇಷವಾಗಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀಸ್ವಾಮಿ ಅಮ್ಮನವರ ದರ್ಶನಕ್ಕಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.
*ಉತ್ಸವಗಳ ವ್ಯವಸ್ಥೆ:*
 ಶ್ರಾವಣ ಮಾಸದಲ್ಲಿ ಐದು ದಿನಗಳ ಕಾಲ ಅಂದರೆ ಆಗಸ್ಟ್ 15 ರಿಂದ (ಶ್ರಾವಣ ಶುದ್ಧ ದಶಮಿ) ಆಗಸ್ಟ್ 19 (ಶ್ರಾವಣ ಪೌರ್ಣಮಿ) ಭಕ್ತರಿಗೆ ಶ್ರೀ ಸ್ವಾಮಿಯ ಅಲಂಕಾರದರ್ಶನವನ್ನು ಮಾತ್ರ ನೀಡಲಾಗುತ್ತದೆ. ಈ ಐದು ದಿನಗಳಲ್ಲಿ ಶ್ರೀ ಸ್ವಾಮಿಯನ್ನು ಮುಟ್ಟಲು ಅವಕಾಶವಿರುವುದಿಲ್ಲ. ಏಕಾದಶಿ, ವರಲಕ್ಷ್ಮೀ ವ್ರತ, ಶ್ರಾವಣಪೌರ್ಣಮಿ ಮೊದಲಾದ ಹಬ್ಬಗಳ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
• ಶ್ರಾವಣ ಶನಿವಾರಗಳು, ಶ್ರಾವಣ ಭಾನುವಾರಗಳು, ಶ್ರಾವಣ ಸೋಮವಾರಗಳು, ಸ್ವಾತಂತ್ರ್ಯ ದಿನ, ವರಲಕ್ಷ್ಮೀ ವ್ರತಂ, ಶ್ರವಣಪೌರ್ಣಮಿ, ಇತ್ಯಾದಿ (ಒಟ್ಟು 16 ದಿನಗಳವರೆಗೆ) ಶ್ರೀಸ್ವಾಮಿಯ ಗರ್ಭಗುಡಿಯ ಅಭಿಷೇಕಗಳು ಮತ್ತು ಸಾಮೂಹಿಕ ಅಭಿಷೇಕಗಳು ಮತ್ತು ಅರ್ಜಿತ ಕುಂಕುಮಾರ್ಚನೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
* ಅಭಿಷೇಕಗಳು ಮತ್ತು ಕುಂಕುಮಾರ್ಚನೆಗಳನ್ನು ಸ್ಥಗಿತಗೊಳಿಸಿದಾಗ ನಿರ್ದಿಷ್ಟ ದಿನಗಳಲ್ಲಿ (15.08.2024 ರಿಂದ 19.08.2024 ರವರೆಗೆ ಐದು ದಿನಗಳನ್ನು ಹೊರತುಪಡಿಸಿ) ದಿನಕ್ಕೆ ನಾಲ್ಕು ಹಂತಗಳಲ್ಲಿ ಸ್ವಾಮಿಯವರ ಮುಟ್ಟಿ(ಸ್ಪರ್ಶ) ದರ್ಶನಕ್ಕೆ ಅವಕಾಶ ಇರುತ್ತದೆ.
• ಪ್ರಸ್ತುತ ಜಾರಿಯಲ್ಲಿರುವಂತೆ, ಈ ಸ್ಪರ್ಶ ದರ್ಶನದ ಟಿಕೆಟ್ ಶುಲ್ಕ ರೂ. 500/-. ಈ ಸ್ಪರ್ಶದರ್ಶನ ಟಿಕೆಟ್ ಗಳನ್ನು ದೇವಸ್ಥಾನದ ವೆಬ್ ಸೈಟ್ ‘www.srisailadevasthanam.org‘  ಮೂಲಕ ಮುಂಗಡವಾಗಿ ಖರೀದಿಸಬಹುದು.
• ಉಳಿದ ದಿನಗಳಲ್ಲಿ, ಗರ್ಭಗುಡಿ ಅರ್ಜಿತ ಅಭಿಷೇಕಗಳು, ಸಾಮೂಹಿಕ ಅಭಿಷೇಕಗಳು ಮತ್ತು ಕುಂಕುಮಾರ್ಚನೆಗಳು ಎಂದಿನಂತೆ ಮುಂದುವರೆಯುತ್ತವೆ.
• ಭಕ್ತರು ಆನ್ ಲೈನ್ ನಲ್ಲಿ ವಿವಿಧ ಆರ್ಜಿತ ಸೇವಾ ಟಿಕೆಟ್ ಗಳನ್ನು ಪಡೆಯಬೇಕು. ಭಕ್ತರು ಲಭ್ಯತೆಯ ಆಧಾರದ ಮೇಲೆ ಗಂಟೆಯ ಮೊದಲು ಇ -ಟಿಕೆಟ್ ಗಳನ್ನು ಪಡೆಯಬಹುದು
• ಸ್ವಾಮಿಯವರ ಸ್ಪರ್ಶದರ್ಶನ ಟಿಕೆಟ್ ಹೊಂದಿರುವವರು ಟಿಕೆಟ್ ಪ್ರತಿ (ಹಾರ್ಡ್ ಕಾಪಿ) ಮತ್ತು ಆಧಾರ್ ಕಾರ್ಡ್ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ತರಬೇಕು.
• ಆಯಾ ಸೇವಾ ಟಿಕೆಟ್ ಗಳನ್ನು ಸ್ಕ್ಯಾನ್ ಮಾಡಿದ ನಂತರ ಮತ್ತು ಆಧಾರ್ ಗುರುತಿನ ಚೀಟಿಯೊಂದಿಗೆ ಸಂಬಂಧಿಸಿದ ಟಿಕೆಟ್ ಗಳನ್ನು ಪರಿಶೀಲಿಸಿದ ನಂತರ, ಭಕ್ತರಿಗೆ ಆಯಾ ಸೇವೆಗಳಿಗೆ ಹಾಜರಾಗಲು ಅವಕಾಶ ನೀಡಲಾಗುತ್ತದೆ.
• ಆದರೆ ರೂ. 150/- ಶೀಘ್ರ ದರ್ಶನಕ್ಕೆ (ಶ್ರೀ ಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಮತ್ತು ರೂ. 300/- ಅತಿ ಶೀಘ್ರ ದರ್ಶನಂ ಟಿಕೆಟ್ ಗಳನ್ನು (ಶ್ರೀಸ್ವಾಮಿಯ ಅಲಂಕಾರಿಕ ದರ್ಶನ ಮಾತ್ರ) ಆನ್ಸೆನ್ ಮತ್ತು ಕರೆಂಟ್ ಬುಕಿಂಗ್ ಮೂಲಕ ಪಡೆಯಬಹುದು.
 ಆದುದರಿಂದ ಆರ್ಜಿತ ಸೇವೆಗಳನ್ನು ಮಾಡುವ ಭಕ್ತರು ಮತ್ತು ಶ್ರೀ ಸ್ವಾಮಿಯ ಸ್ಪರ್ಶ ದರ್ಶನಕ್ಕೆ ಬರುವ ಭಕ್ತರು ಆಯಾ ಅರ್ಜಿತ ಸೇವೆಗಳ ಲಭ್ಯತೆ ಮತ್ತು ಸ್ಪರ್ಶ ದರ್ಶನದ ಟಿಕೆಟ್‌ಗಳ ಲಭ್ಯತೆಗೆ ಅನುಗುಣವಾಗಿ ತಮ್ಮ ಶ್ರೀಶೈಲ ಯಾತ್ರೆಯನ್ನು ಯೋಜಿಸಬೇಕೆಂದು  ಶ್ರೀ ಶೈಲಂ ದೇವಸ್ಥಾನದ ಉಪ ಕಲೆಕ್ಟರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಿ. ಪೆದ್ದಿರಾಜು ಪ್ರಕಟಣೆ ಮೂಲಕ ತಿಳಿಸಿದ್ದಾರೆ.