ಶರಣರು ವೈಜ್ಞಾನಿಕ ಮನೋಭಾವ ಬಿತ್ತಿದರು -ವೀರೇಂದ್ರ ರಾವಿಹಾಳ್
ಸಂಜೆವಾಣಿ ವಾರ್ತೆ
ಬಳ್ಳಾರಿ ಜು ೨೧: ಶರಣರು ಮೌಡ್ಯ ಭಂಜಕರಾಗಿ ಜನಮನದಲ್ಲಿ ವೈಜ್ಞಾನಿಕ ಮನೋಭಾವವನ್ನು ಬಿತ್ತಿದರು ಎಂದು ಲೇಖಕ ವೀರೇಂದ್ರ ರಾವಿಹಾಳ್ ನುಡಿದರು
ಅವರು ನಗರದ  ಸರಳಾದೇವಿ ಸತೀಶ್ಚಂದ್ರ  ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಕದಳಿ ವೇದಿಕೆ ಮತ್ತು ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ’ ವಚನಗಳಲ್ಲಿ ವಿಜ್ಞಾನ ‘ಎನ್ನುವ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಸತ್ಯ ಮತ್ತು ನೇರ ನುಡಿಯ ಅವರ ವಚನಗಳು ನಮಗೆ ಈ ಹೊತ್ತಿಗೂ ಕೈ ದೀವಿಗೆಯಂತೆ ನೆರವಾಗುತ್ತವೆ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್.ಟಿ. ನಂದಿಬೇವೂರು,   ಪ್ರಕೃತಿಯಲ್ಲಿ ಅಡಕವಾಗಿರುವ ಸತ್ವವನ್ನು ವ್ಯವಸ್ಥಿತವಾಗಿ ಅರಿಯುವುದೇ ವಿಜ್ಞಾನ.ಅರಿತ ವಿಷಯವನ್ನು ಆಚರಣೆಯಲ್ಲಿ ತರುವುದೇ ತಂತ್ರಜ್ಞಾನ.ಶರಣರು ಅರಿತ ಸತ್ಯವನ್ನು ಅನುಷ್ಠಾನಕ್ಕೆ ತರುವುದರ ಮೂಲಕ ತಂತ್ರಜ್ಞಾನಿಗಳೂ ಆಗಿದ್ದಾರೆಂದು  ಅಭಿಪ್ರಾಯ ಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಬಿ,ಬಸವನಗೌಡರವರು ಶರಣರು ಸತ್ಯವನ್ನು ತಮ್ಮ ತಾರ್ಕಿಕ ವಿಚಾರಗಳಿಂದ ಸಾಕಾರಗೊಳಿಸಿದರು ಎಂದರು.
ಪ್ರಾಂಶುಪಾಲ ಡಾ.ಹೆಚ್.ಕೆ.ಮಂಜುನಾಥ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಕನ್ನಡ ವಿಭಾಗದ ಮುಖ್ಯಸ್ಥರಾದ ದಸ್ತಗೀರಸಾಬ್ ದಿನ್ನಿ,ಸಂಡೂರು ತಾಲೂಕು ಶಸಾಪ ಅಧ್ಯಕ್ಷ ಬಿ.ನಾಗನಗೌಡ, ಜಿಲ್ಲಾ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ.ನಾಗೇಂದ್ರಗೌಡ, ತ್ರಿವೇಣಿ, ಉಮಾಪತಿ ಗೌಡ, ಲಲಿತಮ್ಮ, ನೀಲಾಂಬಿಕೆ, ಕುಸುಮ ಹಿರೇಮಠ,ಡಾ.ಸಿದ್ದೇಶ್ವರಿ, ಜಯರಾಮ್, ವೀಣಾ,ಕೆ.ಬಿ.ಕೊಟ್ರೀಶ್,ಕೆ.ಬಿ.ಸಚ್ಚಿದಾನಂದ,        ಮನ್ವಿತಾ,ಹಾಗೂ ಕಾಲೇಜಿನ ಉಪನ್ಯಾಸಕರು  ಇದ್ದರು.