ಡೆಂಗ್ಯೂ ಜಾಗೃತಿ ಅಭಿಯಾನ
ಲಕ್ಷ್ಮೇಶ್ವರ,ಜು.21:ಪಟ್ಟಣದಲ್ಲಿ ಶನಿವಾರ ಎಂಜಿಎಂ ಫೌಂಡೇಶನ್ ನೂರಾರು ವಿದ್ಯಾರ್ಥಿಗಳು ಡೆಂಗ್ಯೂ ಜಾಗೃತಿ ಅಭಿಯಾನ ಕೈಗೊಂಡರು .
ಶಿಗ್ಲಿ ನಾಕಾದಲ್ಲಿ ಸಾಹಿತಿ ಪೂರ್ಣಜಿ ಕರಾಟೆ ಅವರು ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಹಾಗೂ ಎಂಜಿಎಂ ಫೌಂಡೇಶನ್ ಸಿಬ್ಬಂದಿಗಳಿಗೆ ಗುಲಾಬಿ ಹೂ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ದಿನದಿಂದ ದಿನಕ್ಕೆ ಹೆಚ್ಚುತ್ತರುವ ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಸಂಗ್ರಹಿಸಿದ ನೀರನ್ನು ಬಾಯ್ದೆರೆದು ಇಡಬಾರದು ಇಡಿಸ್ ಎಂಬ ಸೊಳ್ಳೆಯಿಂದ ಹರಡುವ ಈ ರೋಗವು ವಿಶೇಷವಾಗಿ ಮಕ್ಕಳ ಮೇಲೆ ಆಕ್ರಮಣ ಮಾಡುತ್ತಿದ್ದು ಪೆÇೀಷಕರು ಈ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಮತ್ತು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಎಂದು ಹೇಳಿದರು.
ಆರೋಗ್ಯ ಇಲಾಖೆಯ ನಿರೀಕ್ಷಕ ಹಿರೇಮಠ ಅವರು ಮಾತನಾಡಿ ಈಗ ವಾತಾವರಣ ಬದಲಾವಣೆಗೊಂಡಿದ್ದು ಮಳೆಗಾಲ ವಾಗಿದ್ದರಿಂದ ಕೆಮ್ಮು ನೆಗಡಿ ಜ್ವರ ಮತ್ತಿತರ ಲಕ್ಷಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಧಾವಿಸಿ, ಚಿಕಿತ್ಸೆ ಪಡೆದುಕೊಳ್ಳಬೇಕು ರೋಗಗಳು ಉಲ್ಬಣಗೊಳ್ಳಲು ಅವಕಾಶ ನೀಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಭಿಯಾನದಲ್ಲಿ ಎಂಜಿಎಂ ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ, ಬಸವೇಶ್ ಮಹಾಂತ ಶೆಟ್ಟರ ರಮೇಶ ನವಲೇ ಎಂಜಿಎಂ ಫೌಂಡೇಶನ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.