ಕೆಪಿಸಿಎಲ್ 55 ನೇ ಸಂಸ್ಥಾಪನಾ ದಿನಾಚರಣೆಸೌರ ವಿದ್ಯುತ್ ಉತ್ಪಾದನೆಗೆ ಆಧ್ಯತೆ ಅವಶ್ಯ: ಸೂರ್ಯನಾರಾಯಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,21- ನಗರದ ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ನಿನ್ನೆ ಸಂಜೆ  ಕರ್ನಾಟಕ ವಿದ್ಯುತ್ ನಿಗಮದ 55 ನೇ ಸಂಸ್ಥಾಪನ ದಿನಾಚರಣೆಯನ್ನು ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಹಮ್ಮಿಕೊಂಡಿತ್ತು.
ಸಮಾರಂಭವನ್ನು ಉದ್ಘಾಟನೆ ಮಾಡಿದ ಕೇಂದ್ರದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯನಾರಾಯಣ ಎಸ್. ಅವರು ಮಾತನಾಡಿ. ಕಲ್ಲಿದ್ದಲು ಆಧಾರಿತ ಉಷ್ಣ ಸ್ಥಾವರಗಳಲ್ಲಿ ಆಗಾಗ್ಗೆ ಹಲವಾರು ಸಮಸ್ಯೆಗಳು ಉದ್ಭವಿಸುತ್ತವೆ. ಹೆಚ್ಚುತ್ತಿರುವ ಕಲ್ಲಿದ್ದಲು ಸಾಗಾಣಿಕೆ ವೆಚ್ಚದಿಂದ ಶೇ 65 ರಷ್ಟು ಉತ್ಪಾದನಾ ವೆಚ್ಚ ಇದಕ್ಕೆ ಭರಿಸುತ್ತಿದೆ. ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು ಭವಿಷ್ಯದಲ್ಲಿ ಶಾಖೋತ್ಪನ್ನ ಕೇಂದ್ರಗಳು ಉಳಿಯುವ ಪ್ರಶ್ನೆ ಎದುರಾಗಲಿದೆ. ಅದಕ್ಕಾಗಿ ಉದ್ಯೋಗಿಗಳು ನಿರ್ವಹಣೆ ವೆಚ್ಚ ಕಡಿಮೆ ಮಾಡವ ಪ್ರಯತ್ನ, ಆಧ್ಯತೆಗೆ ತಕ್ಕಷ್ಟು ವೆಚ್ಚ ಮಾಡಬೇಕು. ವಿವಿಧ ಸಂಪನ್ಮೂಲಗಳನ್ನು ಬಳಸಿಡಕೊಂಡು ಅಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಪರಿಸರ ಸಂರಕ್ಷಣೆ ದೃಷ್ಠಿಯಿಂದ ಹೊಸ ತಂತ್ರ ಜ್ಞಾನದ ಮೂಲಕ ನವೀಕರಿಸಬಹುದಾದ ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಬೇಕಿದೆ. ಕೆರೆಗಳಲ್ಲಿ ಪೆÇ್ಲೀಟಿಂಗ್ ಸೋಲಾರ್ ವಿದ್ಯುತ್ ಉತ್ಪಾದನೆಯ ವ್ಯವಸ್ಥೆ ಮಾಡಿದರೆ ನೀರು ಹವೆಯಾಗವುದು ಕಡಿಮೆ ಆಗುತ್ತದೆ. ಜೊತೆಗೆ ವಿದ್ಯುತ್ ಉತ್ಪಾದನೆ ಆಗಲಿದೆ. ಇದನ್ನು ಎನ್‍ಟಿಪಿಸಿ ಮಾಡಿದೆ ನಾವು ಸಹ ಮಾಡಬೇಕಿದ್ದು ಈ ದಿಶೆಯಲ್ಲಿ ರಾಜ್ಯದ ಸಣ್ಣ ನೀರಾವರಿಯ ಎಕರೆ ವಿಸ್ತೀರ್ಣ ಹೊಂದಿರುವ 40 ಕೆರೆಗಳಲ್ಲಿ 2500 ಮೆಗ ವ್ಯಾಟ್ ಉತ್ಪಾದನೆಗೆ ಯೋಜನೆ ರೂಪಿಸುತ್ತಿದೆಂದು ತಿಳಿಸಿದರು.
ಬಳ್ಳಾರಿ ಶಾಖೋತ್ಪನ್ನ ಕೇಂದ್ರದ  ಸೂಪರಿಂಟೆಂಡೆಂಟ್ ಇಂಜಿನೀಯರ್ ನರೇಂದ್ರ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಇತಿಹಾಸ ತಿಳಿಸುತ್ತ.1975 ರಲ್ಲಿ ಶಾಖೋತ್ಪನ್ನ ಕೇಂದ್ರವನ್ನು ಮೊದಲ ಬಾರಿಗೆ ರಾಯಚೂರಿನಲ್ಲಿ ಆರಂಭಿಸಿತು. 2008 ರಿಂದ ಬಳ್ಳಾರಿ ಶಾಖೋತ್ಪನ್ನ ಕೇಂದ್ರ ಆರಂಭಿಸಿತು. ಬೆಂಗಳೂರಿನ ಯಲಹಂಕದಲ್ಲಿ ಅನಿಲ ಆಧಾರಿತ 370 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಕೇಂದ್ರ ಸ್ಥಾಪಿಸಿದೆ. ಬೆಂಗಳೂರಿನಲ್ಲಿ ಕಸದಿಂದ 11.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಕಾರ್ಯ ಆರಂಭಿಸಿದೆ. ಆರಂಭದಲ್ಲಿ 746 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಿಂದ ಆರಂಭಗೊಂಡ ಕರ್ನಾಟಕ ವಿದ್ಯುತ್ ಉತ್ಪಾದನಾ ನಿಗಮ ಈಗ 9748 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆಂದು ಹೇಳಿದರು.
ಕೇಂದ್ರದ ಪ್ರಭಾರಿ ಕಾರ್ಯನಿರ್ವಾಹಕ ನಿದೇಶಕ ರಾಜು ಬಿ.ಟಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದರು. ಉಳಿದಂತೆ ನಿವೃತ್ತ ಅಧಿಕಾರಿ ಶೇಖ್ ಮೆಬೂಬ್ ಎಸ್.ಓ ಖಾಸೀಂ, ಅಧಿಕಾರಿಗಳಾದ ಮೋಹನ್ ರಾಜ್ ಟಿ, ಅಶೋಖ್ ಕುಮಾರ್ ಹೆಚ್, ಶಿವಲಾಲ್ ಜಿ. ನಾಯಕ್, ವೈ.ಬಿ.ಹಾಳಬಾವಿ ವೇದಿಕೆಯಲ್ಲಿ ಇದ್ದರು.
ಈ ವೇಳೆ 25 ವರ್ಷಗಳ ಕಾಳ ಸೇವೆ ಸಲ್ಲಿಸಿದ ಶಾಖೋತ್ಪನ್ನ ಕೇಂದ್ರದ ನೌಕರರನ್ನು  ಸನ್ಮಾನಿಸಿ ಗೌರವಿಸಲಾಯಿತು, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿತು, ನಂತರ ಸಾಂಸ್ಕøತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.