ನಿಜಸುಖಿ ಹಡಪದ ಅಪ್ಪಣ್ಣನವರು
ಹಡಪದರ ಮುಖ ನೋಡಿದರೆ ಅಪಶಕುನ ಎಂದು ಬೊಬ್ಬಿಡುತ್ತಿದ ಮೇಲ್ಜಾತಿಯವರ ಮೌಢ್ಯತೆಯನ್ನು ದಿಕ್ಕರಿಸಿ ಬಸವಣ್ಣಪ್ಪನವರೇ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು, ನಂತರ ಜನರ ಮೂಢನಂಬಿಕೆಯನ್ನು ಹೋಗಲಾಡಿಸಲೆಂದೇ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ, ಅವರು ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕೆಂಬ ನಿಯಮ ಮಾಡಿದರು.
ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಮಾತ್ರವಲ್ಲ, ತಮ್ಮ ಜೀವದ ಒಡನಾಡಿಯಾಗಿದ್ದರು, ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು,   ಕಲ್ಯಾಣಕ್ಕೆ ಬರುವ ಶರಣ ಸಮೋಹಕ್ಕೆ ತಾಂಬೂಲ ಕೊಟ್ಟು ಸ್ವಾಗತಿಸುತ್ತಿದ್ದರು, ಕ್ಷಣವಾದರೂ ಬಸವಣ್ಣನವರನ್ನು ಬಿಟ್ಟಿರಲಾರದ ಜೀವ ಅಪ್ಪಣ್ಣನವರದ್ದು, ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳಲ್ಲೂ ಇದು ಸಾಬೀತಾಗಿದೆ.
ಬಸವ ಲಿಂಗೈಕ್ಯದ ನಂತರ ನೀಲಾಂಬಿಕೆಯವರು ತಂಗಡಗಿಯಲ್ಲಿ ಲಿಂಗೈಕ್ಯರಾದರು….ಮುಂದೆ ಹಡಪದ ಅಪ್ಪಣ್ಣನವರು ಕೂಡ ತಂಗಡಗಿಯಲ್ಲಿ ಲಿಂಗೈಕ್ಯರಾಗುತ್ತಾರೆ