ಒಳ್ಳೆಯ ಸಂಸ್ಕಾರ ಒಳ್ಳೆಯದನ್ನು ಕಲಿಸುತ್ತದೆ:ವಾಸುದೇವ
ತಾಳಿಕೋಟೆ:ಜು.21: ಚಿಕ್ಕವರಿರುವಾಗ ಮಾತಾಪಿತರು ಒಳ್ಳೆಯ ಸಂಸ್ಕಾರವನ್ನು ಕಲಿಸುತ್ತಾ ಸಾಗಿದರೆ ಒಳ್ಳೆಯ ಸಂಸ್ಕಾರವಂತರಾಗಿ ಬಾಳುತ್ತೇವೆ ಒಳ್ಳೆಯದನ್ನು ಕಲಿಯಬೇಕೆಂಬುದು ಮಕ್ಕಳಲ್ಲಿ ಬೇಕು ಅಂದರೆ ಒಳ್ಳೆಯ ಸಂಸ್ಕಾರದ ಮಾರ್ಗದೊರೆಯಲು ಸಾದ್ಯವೆಂದು ಶ್ರೀ ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ ಕಮಿಟಿಯ ಕೋಶ್ಯಾಧ್ಯಕ್ಷ ಹಾಗೂ ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ ಅವರು ನುಡಿದರು.
ಇತ್ತೀಚಗೆ ಆಷಾಡ ಏಕಾದಶಿ ನಿಮಿತ್ಯವಾಗಿ ಸ್ಥಳೀಯ ಶ್ರೀ ವಿಠ್ಠಲ ಮಂದಿರದಲ್ಲಿ 11ದಿನಗಳ ಕಾಲ ನಡೆಸಿಕೊಂಡು ಬಂದ ಮಹಿಳಾ ಭಜನಾ ಮಂಡಳಿಯವರಿಗೆ ಏರ್ಪಡಿಸಲಾದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನ ಅಲಂಕರಿಸಿ ಮಾತನಾಡುತ್ತಿದ್ದ ಅವರು 11 ದಿನ ಎಲ್ಲ ಭಜನಾ ಮಂಡಳಿಯವರು ಶ್ರೀ ವಿಠ್ಠಲ ರುಕುಮಾಯಿ ಅವರ ಸಂಬಂದಿತ ಭಜನಾ ಹಾಡುಗಳನ್ನು ಹಾಡಿ ಮನರಂಜಿಸಿದ್ದಿರಿ ಇಂತಹ ಭಕ್ತಿಯ ಸೇವಾ ಕಾರ್ಯಕ್ಕೆ ನಮ್ಮ ಅಗತ್ಯವಿದ್ದ ಸೌಲಭ್ಯ ನೀಡಿ ಇನ್ನಷ್ಟು ಭಕ್ತಿಭಾವ ಹೆಚ್ಚಿಸಲು ಅನುವು ಮಾಡಿಕೊಡುತ್ತೇವೆ ಇದರಲ್ಲಿ ಯಾವ ಸಂಶಯವಿಲ್ಲಾವೆಂದು ಅವರ ಸೇವಾ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಅಧ್ಯಕ್ಷತೆ ವಹಿಸಿದ ಶ್ರೀ ಪಾಂಡುರಂಗ ವಿಠ್ಠಲ ಮಂದಿರ ಟ್ರಸ್ಟ ಅಧ್ಯಕ್ಷರಾದ ಸಂಭಾಜಿ ವಾಡಕರ ಅವರು ಮಾತನಾಡಿ ಪ್ರತಿವರ್ಷ ನಡೆಸಿಕೊಂಡು ಬಂದಂತೆ ಶ್ರೀ ವಿಠ್ಠಲ ರುಕುಮಾಯಿ ಸೇವಾ ಕಾರ್ಯಕ್ಕೆ ಮುಂದಾಗಿದ್ದೇವೆ ನಮ್ಮ ಆಡಳಿತ ಮಂಡಳಿಯು ಹಿರಿಯರ ಮಾರ್ಗದರ್ಶನದಂತೆ ನಡೆದಿದೆ ಸತತ 11 ದಿನ ಭಜನಾ ಕಾರ್ಯ ಅಲ್ಲದೇ ಶ್ರೀಗಳಿಂದ ಆಧ್ಯಾತ್ಮೀಕ ಪ್ರವಚನವನ್ನೂ ಸಹ ಕೇಳಿದ್ದೀರಿ ಇದರಿಂದ ಭಕ್ತಿ ಭಾವ ಹೆಚ್ಚಾಗಿ ಸನ್ಮಾರ್ಗ ದೊರೆಯಲಿದೆ ಎಂದ ಅವರು ನಾವು ಕೂಡಾ ಹಿರಿಯರ ಮಾರ್ಗ ಅನುಸರಿಸುತ್ತೇವೆ ಇದರಲ್ಲಿ ಎರಡು ಮಾತಿಲ್ಲಾ ಭಕ್ತಿಯ ಸೇವಕರಿಗೆ ಆದ್ಯತೆ ನೀಡುತ್ತೇವೆಂದರು.
ಇನ್ನೋರ್ವ ಶ್ರೀ ಲಕ್ಷ್ಮೀ ದೇವಿ ಭಜನಾ ಮಂಡಳಿಯ ಹಿರಿಯರಾದ ಶ್ರೀಮತಿ ಸುವರ್ಣಾ ಅವರು ಮಾತನಾಡಿ ಶ್ರೀ ವಿಠ್ಠಲ ರುಕುಮಾಯಿ ದೇವರ ಆರಾಧಿಸುವ ಭಜನಾ ಕಾರ್ಯಕ್ರಮ 11ದಿನ ನಡೆಸಿಕೊಂಡು ಬಂದಿದ್ದೇವೆ ಕಳೆದ 4, 5 ವರ್ಷಗಳಿಂದಲೂ ಈ ಸೇವಾ ಕಾರ್ಯ ಮಾಡುತ್ತಾ ಸಾಗಿಬಂದಿದ್ದೇವೆ ಆಷಾಡ ಏಕಾದಶಿ ಎಂಬುದು ಬಹಳೇ ಮಹತ್ವದ ಆಚರಣೆಯಾಗಿದೆ ಎಂದು ಅದರ ಮಹತ್ವ ಹಾಗೂ ಉಪವಾಸ ಮಾಡುವಂತಹ ವಿಧಾನವನ್ನು ಉಪಸ್ಥಿತ ಮಂಡಳಿಯವರಿಗೆ ತಿಳಿಸಿಕೊಟ್ಟರು.
ಅತಿಥಿ ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ತಾಳಿಕೋಟೆಯಲ್ಲಿಯ ಶ್ರೀ ವಿಠ್ಠಲ ಮಂದಿರ ಪುರಾತನದ್ದಾಗಿದೆ ನಾನು ಚಿಕ್ಕವನಿರುವಾಗ ಈ ದೇವಾಲಯ ಹಾಳೂರಂತೆ ಬಿಳಕಸ್ಥಿತಿಯಲ್ಲಿತ್ತು ಇಲ್ಲಿ ಬರುವ ಭಕ್ತರಿಗೆ ಅಂಜಿಕೆ ಬರುವಂತೆ ಇತ್ತು ಹಿರಿಯರಾದ ಗಣ್ಯ ದಿ.ವಿಠ್ಠಲಸಿಂಗ್ ಹಜೇರಿ, ದಿ.ಸುಭಯ್ಯ ಹೇಬಸೂರಶೆಟ್ಟರು ಹಾಗೂ ದಿ.ಗೋಪಿಚಂದ ವಾಡಕರ ಅವರನ್ನೋಳಗೊಂಡು ಇನ್ನೂ ಕೆಲವರು ಜೀರ್ಣೋದ್ದಾರಕ್ಕೆ ಮುಂದಾಗಿ ಮಂದಿರಕ್ಕೆ ಆದಾಯ ಬರುವಂತೆ ಮಾಡಿರುವದು ಸಂತಸ ತಂದಿದೆ ಇಂತವರ ಮಿತ್ರರಾದ ತಾವುಗಳು ಹಿರಿಯರು ಹಾಕಿದ ಮಾರ್ಗದತ್ತ ನಡೆದು ಶ್ರೀ ಮಂದಿರದ ಇತಿಹಾಸ ಕಾಪಾಡಬೇಕೆಂದರು.
ವೇ.ವಸಂತ ಜೋಶಿ ಹಾಗೂ ವೇ.ವೇಂಕಟೇಶ ಗ್ರಾಮಪೊರೊಹಿತ ಅವರು 11 ದಿನಗಳ ಕಾಲ ಆದ್ಯಾತ್ಮೀಕ ಪ್ರವಚನ ನಡೆಸಿಕೊಟ್ಟು ಭಕ್ತಿಮಾರ್ಗವನ್ನು ತೋರಿದರು.
ಮಂದಿರದ ಅರ್ಚಕರಾದ ವೇ.ಪ್ರತಿಕಬಟ್ ಜೋಶಿ ಸ್ವಾಗತಿಸಿ ವಂದಿಸಿದರು.