ಕೆಸರು ಗದ್ದೆಯಾದ ರಸ್ತೆ
ವಾಡಿ,ಜು.21-ವಾಡಿ ಪಟಣ್ಣದಿಂದ ಕೊಂಚೂರ, ನಾಲವಾರ, ಸನ್ನತಿ ಮಾರ್ಗವಾಗಿ ಶಹಾಪುರಗೆ ಹೋಗುವ ರಸ್ತೆ ಕೆಸರು ಗದ್ದೆ ಯಾಗಿದೆ. ಇದರಲ್ಲಿ ರಸ್ತೆ ಯಾವುದು, ಕೆಸರು ಯಾವುದು ಎಂಬುದು ತಿಳಿಯದಂತಾಗಿದೆ. ಇಲ್ಲಿಂದ ಐತಿಹಾಸಿಕ ದೇವಾಲಯ ಹನುಮಾನ್, ಯಲಮ್ಮಾ ದೇವಿ, ನಾಲವಾರ ಕೊರಿಸಿದ್ದೇಶ್ವರ್, ಚಂದ್ರಲಾಪರಮೇಶ್ವರಿ ಹಾಗೂ ಸನ್ನತಿಗೆ ಯಾತ್ರಿಕರು ಇಲ್ಲಿಂದೆ ದರ್ಶನಕ್ಕೆ ಹೋಗುತ್ತಾರೆ. ಆದರೆ ರಸ್ತೆ ನೋಡಿ ಧÀಂಗಾಗುತ್ತಾರೆ. ರಸ್ತೆ ನಿರ್ಮಾಣ ಮಾಡಿ ಆರು ತಿಂಗಳು ಸರಿದಿಲ್ಲ. ಅದಾಗಲೆ ರಸ್ತೆ ಮೇಲೆ ಗುಂಡಿ ಬಿದ್ದಿವೆ. ಕೆಲವುಕಡೆ ರಸ್ತೆ ಕೆಸರು ಗದ್ದೆಯಾಗಿರುವುದರಿಂದ ಪ್ರಯಾಣಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.