ಕರಾಳ ಕೃಷಿ ನೀತಿ ಮತ್ತು ಕಾರ್ಮಿಕ ಕೋಡ್‍ಗಳನ್ನು ಹಿಂಪಡೆಯಲು ಅಧಿವೇಶನದಲ್ಲಿ ಒತ್ತಾಯಿಸಲು ವಿವಿಧ ಸಂಘಟನೆಗಳಿಂದ ಸಂಸದರಿಗೆ ಮನವಿ
ವಿಜಯಪುರ,ಜು.21:ಪ್ರಾಂತ ರೈತ ಸಂಘಟನೆ, ಅಖಿಲಭಾರತ ಕೃಷಿಕೇತ ಮಜದೂರ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕ್ ಯೂನಿಯನ್ ಮತ್ತು ಎಐಡಿವಾಯ್‍ಓ, ಎಐಎಂಎಸ್‍ಎಸ್ ಮಹಿಳಾ ಸಂಘಟನೆ, ಜನವಾದಿ ಮಹಿಳಾ ಸಂಘಟನೆ ಮುಖಂಡರ ನೇತೃತ್ವದಲ್ಲಿ ಕರಾಳ ಕೃಷಿ ನೀತಿ ಹಾಗೂ ಕಾರ್ಮಿಕ ಕೋಡ್‍ಗಳನ್ನು ಕೈ ಬಿಡುವ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ರೈತರು ಮತ್ತು ಕೃಷಿ ಕಾರ್ಮಿಕರನ್ನು ಸಾಲದ ಶೂಲದಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ರಕ್ಷಿಸಲು ಸಮಗ್ರ ಸಾಲ ಮನ್ನಾ ಮಾಡಬೇಕು.
ವಿದ್ಯುಚ್ಛಕ್ತಿ ವಲಯದ ಖಾಸಗೀಕರಣ ಮತ್ತು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‍ಗಳ ಪ್ರಸ್ತಾಪ ಕೈಬಿಡಬೇಕು.
ರಸಗೊಬ್ಬರ, ಬೀಜ, ಕ್ರಿಮಿ/ಕಳೆನಾಶಕಗಳು, ವಿದ್ಯುತ್ತು, ನೀರಾವರಿ, ಯಂತ್ರೋಪಕರಣಗಳು, ಬಿಡಿ ಭಾಗಗಳು ಹಾಗೂ ಟ್ರಾಕ್ಟರ್‍ಗಳಂತಹ ಕೃಷಿ ಒಳಸುರಿಗಳ ಮೇಲೆ ಜಿಎಸ್‍ಟಿ ಹಾಕಬಾರದು. ಕೃಷಿ ಒಳಸುರಿಗಳಿಗೆ ಸಬ್ಸಿಡಿ ಪುನಃ ಜಾರಿ ಮಾಡಬೇಕು. ಸರ್ಕಾರಿ ಯೋಜನೆಗಳ ಲಾಭವನ್ನು ಪಾಲು-ಬೆಳೆಗಾರರು ಮತ್ತು ಗೇಣಿದಾರ ರೈತರಿಗೂ ವಿಸ್ತರಿಸಬೇಕು.
ಎಲ್ಲಾ ಕೃಷಿ ಮತ್ತು ಪಶುಸಂಗೋಪನೆ ವ್ಯವಸ್ಥೆಗಳಿಗೂ ಸಾರ್ವಜನಿಕ ವಲಯದಲ್ಲಿ ಸಂಪೂರ್ಣ ವಿಮೆ ಸೌಲಭ್ಯ ಕಲ್ಪಿಸಬೇಕು. ಕಾರ್ಪೊರೇಟ್ ಪರವಾದ Pಒಈಃಙ ಸ್ಕೀಮನ್ನು ರದ್ದುಪಡಿಸಬೇಕು.
ಆಹಾರ ಉತ್ಪಾದಕರಾದ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ಹಕ್ಕನ್ನು ಮಾನ್ಯ ಮಾಡಬೇಕು ಹಾಗೂ 60 ವರ್ಷ ವಯಸ್ಸಿನ ನಂತರ ತಿಂಗಳಿಗೆ 10,000 ರೂ. ನೀಡಬೇಕು.
ಅರಣ್ಯ ಹಕ್ಕು ಕಾಯ್ದೆ (ಈಖಂ) ಮತ್ತು ಪಂಚಾಯತ್ (ಶೆಡ್ಯೂಲ್ಡ್ ಏರಿಯಗಳಿಗೆ ವಿಸ್ತರಣೆ) ಕಾಯ್ದೆ (PಇSಂ) ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಮನವಿ ಸ್ವೀಕರಿಸಿದ ಸಂಸದ ಜಿಗಜಿಣಗಿ ಅವರು ಅಧಿವೇಶನದಲ್ಲಿ ಲಿಖಿತವಾಗಿ ಪ್ರಶ್ನೆ ಕೇಳುವದಾಗಿ ಭರವಸೆ ನೀಡಿದರು. ಇದರ ನೇತೃತ್ವವನ್ನು ಮಲ್ಲಿಕಾರ್ಜುನ ಎಚ್.ಟಿ. ಲಕ್ಷ್ಮಣ ಹಂದ್ರಾಳ, ಜಿ.ಜಿ. ಗಾಂಧಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ. ಶಿವಬಾಳಮ್ಮ ಕೊಂಡಗೂಳಿ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಅಶ್ವಿನಿ ತಳವಾರ, ಶೋಭಾ ಮುಂತಾದವರು ಹಾಜರಿದ್ದರು.