ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು ಮುಕ್ತಿ:ಶಿವಲಿಂಗಪ್ಪ ಜಲಾದೆ
ಬೀದರ :ಜು.21:ನಗರದ ಜನಸೇವಾ ಶಿಶು ಮಂದಿರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಲ್ಲಿ ಗುರು ಪೂರ್ಣಿಮೆ ಅಂಗವಾಗಿ ಗುರು ಪೂಜೆ ಉತ್ಸವ ಕಾರ್ಯಕ್ರಮ ನಡೆಯಿತು. ಜನಸೇವಾ ಶಾಲೆಯ ಆಡಳಿತಾಧಿಕಾರಿ ಯಾದ ಸೌಭಾಗ್ಯವತಿ ಆರ್ ಜಲಾದೆ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿ ಜೀ ಮೂಲಿಮನಿ ಫೌಂಡೇಶನ್ ಅಧ್ಯಕ್ಷರಾದ ಶಿವಲಿಂಗಪ್ಪ ಜಲಾದೆ ರವರು ಆಗಮಿಸಿ ಗುರುವಿನ ಗುಲಾಮ ನಾಗುವ ತನಕ ಮುಕ್ತಿ ದೊರೆಯದು ಮುಕ್ತಿ .ಭಾರತೀಯ ಹಿಂದೂ ಪರಂಪರೆಯಲ್ಲಿ ಗುರುವಿನ ಸ್ಥಾನ ದೊಡ್ಡದು ಎಂದು ತಿಳಿಸಿದರು.
ನಂತರ ವಿಶೇಷ ಉಪನ್ಯಾಸವನ್ನು ವಿಕಾಸ್ ಅಕಾಡೆಮಿ ಬೀದರ್ ಸಂಯೋಜಕರಾದ ಬಸವರಾಜ ಅಷ್ಟಗಿ ಮಾತನಾಡಿ ಗುರು ಪರಂಪರೆ, ಗುರುವಿನ ಮಹತ್ವ, ಗುರು ಪೂರ್ಣಿಮೆ ಮಹತ್ವ,ಗುರು ಕಾಣಿಕೆ ಸಮರ್ಪಣೆ, ಶಿಕ್ಷಕರು ಗುರುವಾಗಬಲ್ಲರು ಎನ್ನುವ ವಿಷಯಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ಏಕಲವ್ಯ,ಶಿವಾಜಿ,ವೇದ ವ್ಯಾಸ ವಿವೇಕಾನಂದರ ಕಥೆಗಳ ಮೂಲಕ ತಿಳಿಸಿದರು.
ಪ್ರಾಥಮಿಕ ಶಾಲೆ ಮುಖ್ಯಗುರುಗಳಾದ ನೀಲಮ್ಮ ಚಾಮರೆಡ್ಡಿ ನಿರೂಪಣೆ ಮಾಡಿದರು, ಪ್ರೌಢಶಾಲೆ ಮುಖ್ಯಗುರುಗಳಾದ ರಾಹುಲ್ ಮೇತ್ರೆಸ್ಕರ ವಂದಿಸಿದರು.
ಈ ಸಂದರ್ಭದಲ್ಲಿ ಜನಸೇವ ಶಾಲೆಯ ಸಹ ಶಿಕ್ಷಕರಾದ ಸತೀಶ ಚಿಮ್ಮಾ, ಅಮಿತ ಕುಮಾರ ಹಾಳೆಂಬರಕರ್ ಸಹ ಶಿಕ್ಷಕಿಯರಾದ ರೇಣುಕಾ ಬ್ಯಾಗೆರೆ,ಜ್ಯೋತಿ ಖೇಣಿ,ಗಂಗಮ್ಮ,ಅಶ್ವಿನಿಸ್ವಾಮಿ, ಭಾರ್ಗವಿ ಅಷ್ಟಗಿ,ಶಾಸ್ತ್ರಿಬಾಯಿ,ಪುಷ್ಪಲತಾ,ರೇಣುಕಾ ಫುಲಾರಿ, ಪ್ರಿಯಾಂಕಾ,ಭಾಗ್ಯಶ್ರೀ,ವಿಜಯ ಲಕ್ಷ್ಮಿ ,ಮತ್ತಿತರರು ಉಪಸ್ಥಿತರಿದ್ದರು