ಶಿವ ಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿ ಆಚರಣೆ
ಚಿಟಗುಪ್ಪ:ಜು.21: ಪಟ್ಟಣದ ಪುರಸಭೆಯಲ್ಲಿ ಅವಿರಳ ಜ್ಞಾನಿ ಶಿವ ಶರಣ ಹಡಪದ ಅಪ್ಪಣ್ಣನವರ 890ನೇ ಜಯಂತಿಯನ್ನು ಮುಖ್ಯಾಧಿಕಾರಿ ಹುಸಾಮೋದ್ದೀನ್ ಬಾಬಾ ಅವರು ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಆಚರಣೆ ಮಾಡಲಾಯಿತ್ತು.
ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘದ ಕಾರ್ಯದರ್ಶಿ ರಾಜಕುಮಾರ ಆರ್. ಹಡಪದ, ಹಿರಿಯ ಆರೋಗ್ಯ ನಿರೀಕ್ಷಕ ರವಿಕುಮಾರ ಸ್ವಾಮಿ, ಕಿರಿಯ ಆರೋಗ್ಯ ನಿರೀಕ್ಷಕಿ ವೈಶಾಲಿ, ಸಿಬ್ಬಂದಿಗಳಾದ ಕವಿತಾ, ಸರೋಜನಿ, ಅಶ್ವಿನಿ, ಮಂಜುಳಾ, ಧನರಾಜ, ಇಲಾಹಿ, ಬಸವರಾಜ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.