ಅಂತಾರಾಷ್ಟ್ರೀಯ ಚೆಸ್ ದಿನ ಆಚರಣೆ
ವಿಜಯಪುರ,ಜು.21: ಅಂತಾರಾಷ್ಟ್ರೀಯ ಚೆಸ್ ದಿನ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಮಕ್ಕಳಾದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಚದುರಂಗ ಆಟ ಆಡಿ ಈ ದಿನವನ್ನು ಆಚರಿಸಿದರು.
ಚೆಸ್ ಎನ್ನುವುದು ಬಹಳ ಪ್ರಾಚೀನ ಆಟಗಳಲ್ಲಿ ಒಂದು.
ಇದು ಬುದ್ಧಿವಂತಿಕೆ ಹಾಗೂ ಜಾಣ್ಮೆಯ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದಾಗಿದ್ದು, ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಮಕ್ಕಳಿಗೆ ಏಕಾಗ್ರತೆಯ ಶಕ್ತಿಯನ್ನು ಬೆಳೆಸಲು ಈ ಆಟ ಉತ್ತಮ. ಇದು ಯೋಚಿಸುವ ಸಾಮಥ್ರ್ಯವನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ಹೇಗೆ ನಿರ್ಧಾರ ಕೈಗೊಳ್ಳಬೇಕೆನ್ನುವುದನ್ನು ತಿಳಿಸುತ್ತದೆ. ಈ ಚೆಸ್ ಆಟವು ಮಕ್ಕಳಲ್ಲಿ ಅವರ ಐಕ್ಯೂ ಮಟ್ಟದೊಂದಿಗೆ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಈ ಆಟದ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಿ, ಆಸಕ್ತಿ ಮೂಡುವಂತೆ ಪೆÇ್ರೀತ್ಸಾಹಿಸಲು ಈ ದಿನವನ್ನು ಆಚರಿಸಲಾಗುತ್ತಿದೆ.