ವಿಶ್ವಕರ್ಮ ಸಮಾಜ ಸಂಘಟನೆಗೆ ಪ್ರಣವಾನಂದ ಶ್ರೀ ಕರೆ
ಆಳಂದ:ಜು.21: ಹಿಂದುಳಿದ ವಿಶ್ವಕರ್ಮ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಮಾಜ ಬಾಂಧವರು ಸಂಘಟನೆಗೆ ಒತ್ತು ನೀಡಬೇಕು ಎಂದು ವಿಶ್ವಕರ್ಮ ಮಠಾಧೀಶರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರು ಆದ ಕಲಬುರಗಿ, ಅಫಜಲಪೂರ ಮೂರುಜಾವಧೀಶ್ವರ ಮಠದ ಶ್ರೀ ಪ್ರಣವ ನಿರಂಜನ ಮಹಾಸ್ವಾಮಿಗಳು ಕರೆ ನೀಡಿದರು.
ಪಟ್ಟಣದ ಶ್ರೀ ತಿಂಥಣಿಯ ಮೌನೇಶ್ವರ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ ಆಳಂದ ತಾಲೂಕ ಘಟಕ ಮತ್ತು ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು, ವ್ಯಾಪಾರ ಉದ್ಯೋಗ ಶಿಕ್ಷಣದಲ್ಲಿ ತೊಡಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಉನ್ನತ ಭವಿಷ್ಯ ರೂಪಿಸಬೇಕು. ಸರ್ಕಾರಿ ಸೌಲಭ್ಯ ಸೇರಿ ಸಾಮಾಜಿಕ ನ್ಯಾಯ ಮತ್ತು ಹಕ್ಕಿಗಾಗಿ ಸಂಘಟಿತ ಧ್ವನಿಯಾಗಬೇಕು ಎಂದು ಅವರು ಸಲಹೆ ನೀಡಿದರು.
ಸಭೆಯ ಅಧ್ಯಕ್ಷ ವಹಿಸಿದ್ದ ಬೀದರ್, ಕಲಬುರಗಿ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಘಟನಾ ಪ್ರಧಾನ ಕಾರ್ಯರ್ಶಿ ಅಶೋಕ ಎಸ್. ಪೋದ್ದಾರ ಹರಸೂರ ಮಾತನಾಡಿ, ಸಮಾಜ ಹಿರಿಯರು ಸೇರಿ ಆಯ್ಕೆ ಮಾಡುವ ಪದಾಧಿಕಾರಿಗಳ ಕೊಟ್ಟಹುದ್ದೆಯನ್ನು ವಹಿಸಿಕೊಂಡು ಜವಾಬ್ದಾರಿಯುತ್ತ ಕೆಲಸವನ್ನು ನಿರಂತರವಾಗಿ ಸಮಾಜ ಸಂಘಟನೆ ಮತ್ತು ಜಾಗೃತಿ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ಈ ಸಂದರ್ಭಧಲ್ಲಿ ಸಮಾಜದ ಸ್ಥಳೀಯ ಮುಖಂಡರಾದ ಮಾಹಾದೇವ ಕೆ. ಪೆÇದ್ದಾರ ಜಿಲ್ಲಾ ಗೌರವ ಅಧ್ಯಕ್ಷ ಸುಧಾಕರ ಎಸ್.ಪೆÇದ್ದಾರ, ಜಿಲ್ಲಾಧ್ಯಕ್ಷ ಕಮಲಾಕರ ವಿಶ್ವಕರ್ಮ ಅಣಕಲ. ದೆವೇಂದ್ರ ವಿಶ್ವಕರ್ಮ ಹೆರೂರ, ಕಾಳಿದಾಸ ವಿಶ್ವಕರ್ಮ, ಶಿವಾನಂದ ಸುತಾರ, ಕಲ್ಲೂರ, ಮನೋಹರ ಪೆÇದ್ದಾರ, ಸಿದ್ದು ವಿಶ್ವಕರ್ಮ, ರುದ್ರೇಶ ವಿಶ್ವಕರ್ಮ, ಮಲ್ಲಿಕಾರ್ಜುನ ವಿಶ್ವಕರ್ಮ, ಚಿದಾನಂದ ವಿಶ್ವಕರ್ಮ, ಮಾರುತಿ ಕಮ್ಮಾರ, ಭಾಗೇಶ ವಿಶ್ವಕರ್ಮ, ರಾಜು ಪಂಚಾಳ, ಮೌನೇಶ ಪಂಚಾಳ, ಅಣವೀರ ವಿಶ್ವಕರ್ಮ ಸೇರಿದಂತೆ ಪಟ್ಟಣ ಸೇರಿ ತಾಲೂಕಿನ ಹಿರಿಯ ಮತ್ತು ಕಿರಿಯ ಮುಖಂಡರು ಹಾಜರಿದ್ದರು.
ಈ ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಳಂದ ತಾಲೂಕು ಘಟಕದ ನೂತನ ಪದಾಧಿಕಾರಿಗಳಾದ ಬಸವರಾಜ ವಿಶ್ವಕರ್ಮ (ಅಧ್ಯಕ್ಷರು), ವಿರೇಶ ಎಮ್. ಪೆÇದ್ದಾರ (ಯುವ ಅಧ್ಯಕ್ಷರು) ಅವರನ್ನು ಆಯ್ಕೆ ಮಾಡಿ ಇನ್ನೂಳಿದ ಪದಾಧಿಕಾರಿಗಳನ್ನು ಬಳಿಕ ಆಯ್ಕೆ ಮಾಡಬೇಕು ಎಂದು ನೂತನ ಅಧ್ಯಕ್ಷರುಗಳಿಗೆ ಸೂಚಿಸಲಾಯಿತು.
ದೇವಿಂದ್ರಪ್ಪಾ ಮಾಸ್ಟರ್ ಖಂಡಾಳ ಸಭೆ ನಿರೂಪಿಸಿದರು. ರಾಜು ಪಾಂಚಾಳ ಸ್ವಾಗತಿಸಿದರು. ಸುಜ್ಞಾನಿ ಪೋದ್ದಾರ ವಂದಿಸಿದರು.