ವರ್ಷವಾದರು ಗ್ರಂಥಾಲಯ ಕಟ್ಟಡ ಉದ್ಘಾಟನೆಯಿಲ್ಲ
ಆಳಂದ:ಜು.21: ಪಟ್ಟಣದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಸಾರ್ವಜನಿಕ ಗ್ರಂಥಾಲಯ ಕಟ್ಟಡ ನಿರ್ಮಾಣಗೊಂಡು ವರ್ಷವಾದರು ಇದುವರೆಗೂ ಉದ್ಘಾಟನೆಯಾಗದೇ ನಿಂತುಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಹಸವಾಗಿದೆ.
ಪುರಸಭೆ ವ್ಯಾಪ್ತಿಗೆ ಬರುವ ಈ ಗ್ರಂಥಾಲಯ ಕಟ್ಟಡಕ್ಕೆ ಹಿಂದಿನ ಶಾಸಕರ ಆಡಳಿತದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡ ನಿರ್ಮಿಸಿದ ಬಳಿಕ ಅಧಿಕಾರಿಗಳು ಪುರಸಭೆಗೆ ಹಸ್ತಾಂತರಿಸಿಕೊಂಡು ಗ್ರಂಥಾಲಯ ಆರಂಭಿಸಿದೆ ಇರುವುದು ಓದುಗರಿಗೆ ನೆಲೆಯಿಲ್ಲವಾಗಿದೆ.
ಓದುಗರಿಗೆ ಅನುಕೂಲ ಕಲ್ಪಿಸಿ:
ಹಳೆಯ ತಹಸೀಲ್ ಕಚೇರಿಯ ಬಂದಿಖಾನೆಯಲ್ಲಿನ ಗ್ರಂಥಾಲಯ ಮಳೆಯಾದರೆ ಸೊರುತ್ತಿದೆ, ನೋಣಗಳ ಕಾಟವಿದೆ. ಹಾವು ಚೇಳು ಕಾಟವಿದೆ. ಮಳೆಯಾದರೆ ನೀರು ನಿಂತು ಗ್ರಂಥಾಲಯಕ್ಕೆ ಹೋಗಲಾಗುತ್ತಿಲ್ಲ. ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿದೆ. ಶೀಘ್ರವೇ ಹೊಸಕಟ್ಟಡದಲ್ಲಿ ಗ್ರಂಥಾಲಯ ಕಾರ್ಯಾರಂಭಿಸಿ ಓದುಗರಿಗೆ ಅನುಕೂಲ ಕಲ್ಪಿಸಬೇಕು.
ಹಸ್ತಾಂತರಿಸಲಾಗುವುದು:
ಮಾರುಕಟ್ಟೆಯಲ್ಲಿನ ಕಟ್ಟಡ ಪೂರ್ಣಗೊಂಡ ಬಳಿಕ ಅಧಿಕಾರಿ ಚಾರ್ಜ್ ತೆಗೆದುಕೊಂಡಿದ್ದು. ಈ ಕುರಿತು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಪುರಸಭೆಗೆ ಕಟ್ಟಡ ಹಸ್ತಾಂತರಿಸುವುದು ಬಾಕಿಯಿದೆ.
ಗ್ರಂಥಾಲಯ ಬಗ್ಗೆ ಕ್ರಮವಹಿಸುವೇ:
ಇಂದಿರಾ ಕ್ಯಾಂಟಿನ, ಕೆಎಂಎಫ್ ಶಾಪ್ ತೆರೆಯುವುದಕ್ಕಾಗಿ ಸ್ಥಳದ ಕುರಿತು ಶಾಸಕರು ಚರ್ಚಿಸಿದ್ದಾರೆ. ಇನ್ನೂ ಜಾಗ ನಿರ್ಧರಗೊಂಡಿಲ್ಲ. ಹೊಸದಾಗಿ ಚಾರ್ಜ್ ತೆಗೆದುಕೊಂಡಿದೆನು. ಗ್ರಂಥಾಲಯ ಕಟ್ಟಡದ ಬಗ್ಗೆ ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಸಂಗಮೇಶ ಪನ್ನಶೆಟ್ಟಿ
ಪುರಸಭೆ ಮುಖ್ಯಾಧಿಕಾರಿಗಳು ಆಳಂದ.