ರಸ್ತೆ ಸಂಚಾರ ನಿಯಮಗಳ ವಸ್ತು ಪ್ರದರ್ಶನ
ಕಲಬುರಗಿ:ಜು.21:ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ 3ನೇ ಮತ್ತು 4ನೇ ತರಗತಿಯ ಮಕ್ಕಳಿಂದ ರಸ್ತೆ ಸಂಚಾರಿ ನಿಯಮಗಳ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ತಾವು ತೈಯಾರಿಸಿಕೊಂಡು ಬಂದ ರಸ್ತೆ ಸಂಚಾರಿ ನಿಯಮಗಳ ಬಗ್ಗೆ ವಿವರಣೆಯನ್ನು ವಿವರಿಸಿದರು. ರಸ್ತೆಗಳ ಮೇಲೆ ವಾಹನಗಳು ಓಡಾಡುವಾಗ ಹೇಗೆ ದಾಟಬೇಕು ಮತ್ತು ಅಪಘಾತಗಳು ಹೇಗೆ ಸಂಭವಿಸುತ್ತವೆ ಹಾಗೂ ರಸ್ತೆ ದೀಪಗಳ ಬಗ್ಗೆ ಅರಿವು ಮೂಡಿಸಲಾಯಿತು. ಹೀಗೆ ಅನೇಕ ವಿಷಯಗಳ ಬಗ್ಗೆ ವಸ್ತು ಪ್ರದÀರ್ಶನದಲ್ಲಿ ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮವನ್ನು ಎಸ್‍ಬಿಆರ್ ಕಾಲೇಜಿನ ಮೇಲ್ವಿಚಾರಕರಾದ ಶ್ರೀ. ಶ್ರೀಶೈಲ್ ಹೊಗಾಡೆ ರವರು ಉದ್ಘಾಟಿಸಿದರು. ಎಲ್ಲಾ ಮಕ್ಕಳಿಗೆ ರಸ್ತೆ ಸಂಚಾರ ನಿಯಮಗಳ ಬಗ್ಗೆ ಅಪಘಾತಗಳ ಬಗ್ಗೆ ರಸ್ತೆ ದೀಪಗಳ ಬಗ್ಗೆ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಕೇಳಿದರು. ವಿದ್ಯಾರ್ಥಿಗಳ ಉತ್ತರಿಸಿದ ಉತ್ತರಕ್ಕೆ ಹರ್ಷವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಹಾಗೂ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಅವ್ವಾಜಿ ಹಾಗೂ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು, ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಹಾಗೂ ಪ್ರಾಚಾರ್ಯರಾದ ಶ್ರೀ. ಎನ್.ಎಸ್. ದೇವರಕಲ್ ಅವರು ಈ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದರು.