ನೀರಲಕೋಡ್ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮನವಿ
ಜೇವರ್ಗಿ:ಜು.21: ತಾಲೂಕಿನ ತಾಲೂಕ ಆಡಳಿತ ವತಿಯಿಂದ ತಾಲೂಕಿನ ಸೊನ್ನ ಗ್ರಾಮದಲ್ಲಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಸುಧೀಂದ್ರ ಇಜೇರಿ ನೇತೃತ್ವದಲ್ಲಿ ಅನೇಕ ಗ್ರಾಮಗಳ ವಿವಿಧ ಬೇಡಿಕೆಗಳಾದ ನೀರಲಕೋಡ್ ಮತ್ತು ಹಂಚಿನಾಳ ಗ್ರಾಮದ ರಸ್ತೆ ಸುಧಾರಣೆ ಮಾಡಬೇಕು ಮತ್ತು ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಬೇಕು ಮತ್ತು ಗ್ರಾಮದ ಮೂಲಭೂತ ಸೌಕರ್ಯಗಳು ಒದಗಿಸಬೇಕೆಂದು ಮನವಿ ಪತ್ರವನ್ನು ತಾಲೂಕ ತಹಶೀಲದಾರ ಮಲ್ಲಣ್ಣ ಯಲಗೋಡವರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ತಿಪ್ಪಣ್ಣ ಗೌಡ ಹಂಚಿನಾಳ ಲಕ್ಷ್ಮಣ್ ಪರೀಟ್ ಸೇರಿದಂತೆ ಅನೇಕರಿದ್ದರು