ಅಯೋಧ್ಯೆಗೆ ಸೈಕಲ್ ಯಾತ್ರೆ : ಯುವಕನಿಗೆ ಸನ್ಮಾನ
ಭಾಲ್ಕಿ:ಜು.21: ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಅಯೋಧ್ಯೆ ರಾಮ ಮಂದಿರ ಮತ್ತು ಜ್ಯೋತಿರ್ಲಿಂಗ ದರುಶನಕ್ಕೆ ಸೈಕಲ್ ಯಾತ್ರೆ ಹೊರಟ ಯುವಕನನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಬೆಂಗಳೂರಿನಿಂದ ಸೈಕಲ್ ಮೇಲೆ ಯಾತ್ರೆ ಹೊರಟ ಪ್ರದೀಪ ಪಾಟೀಲ್ ಎಂಬುವ ಯುವಕನನ್ನು ಮಾರ್ಗ ಮಧ್ಯದ ಹೊನ್ನಳ್ಳಿ ಗ್ರಾಮದ ಮಹಾದೇವ ಮಂದಿರ ಆವರಣದಲ್ಲಿ ಯುವಕರು ಸೈಕಲ್ ಯಾತ್ರಿಕ ಪ್ರದೀಪ ಪಾಟೀಲ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ದಯಾನಂದ ಪಾಟೀಲ್, ಸಂಜಯಕುಮಾರ, ನಾಗರಾಜ ಬಿರಾದಾರ್, ಮಹಾದೇವ ಬಿರಾದಾರ್, ನೇಹರು ಬಿರಾದಾರ್, ಬಸವರಾಜ ಏಳುವರೆ, ದೀಪಕ ಬಿರಾದಾರ್, ಮಹಾದೇವ ಸೇರಿದಂತೆ ಹಲವರು ಇದ್ದರು.