ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ
ಸಂಜೆವಾಣಿ ನ್ಯೂಸ್
ಮೈಸೂರು:ಜು.21:- ದೇಶದ ಶ್ರೀಮಂತ ಪ್ರತಿಭೆ ಮತ್ತು ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ಉನ್ನತ ಗುಣಮಟ್ಟದ ಶಿಕ್ಷಣ ಉತ್ತಮ ಮಾರ್ಗವಾಗಿದೆ ಎಂದು ವಿಶ್ರಾಂತ ಕುಲಪತಿ ಪೆÇ್ರ.ಬಿ.ತಿಮ್ಮೇಗೌಡ ಅಭಿಪ್ರಾಯಪಟ್ಟರು.
ನಗರದ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ ನಡೆದ ಪದವೀಧರ ದಿನಾಚರಣೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನೀಯ ಪ್ರಮಾಣಪತ್ರಗಳನ್ನು ನೀಡಿ ಅವರು ಮಾತನಾಡಿದರು.
ಭಾರತೀಯ ಶಿಕ್ಷಣ ವ್ಯವಸ್ಥೆ ಚಾಣಕ್ಯ, ಚರಕ, ಶುಶ್ರುತ, ಆರ್ಯಭಟ, ಭಾಸ್ಕರ, ಪತಂಜಲಿ, ವಿವೇಕಾನಂದ, ಬುದ್ಧ, ಬಸವ, ಅಂಬೇಡ್ಕರ್ ಮೊದಲಾದ ದಾರ್ಶನಿಕರನ್ನು ವಿಶ್ವಕ್ಕೆ
ಕೊಡುಗೆಯಾಗಿ ಕೊಟ್ಟಿದೆ. ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಲು ಶಿಕ್ಷಣ ಮೂಲಭೂತವಾಗಿದೆ. ಆದ್ದರಿಂದ ವ್ಯಕ್ತಿ, ಸಮಾಜ, ದೇಶ ಮತ್ತು ಪ್ರಪಂಚದ ಒಳಿತಿಗಾಗಿ ಶಿಕ್ಷಣ ಮುಖ್ಯ ಎಂದರು.
ಮೌಲ್ಯಗಳನ್ನು ಕಳೆದುಕೊಳ್ಳುವ ಶಿಕ್ಷಣ ಅರ್ಥಹೀನ ಮತ್ತು ಪ್ರಚಾರಕ್ಕೆ ಯೋಗ್ಯವಲ್ಲ. ಆದ್ದರಿಂದ ವಿದ್ಯಾ?ರ್ಥಿಗಳು ವೃತ್ತಿ ಜೀವನವನ್ನು ರೂಪಿಸಿಕೊಳ್ಳುವಾಗ ಯಾವಾಗಲೂ ಸನ್ಮಾರ್ಗದಲ್ಲಿ ನಡೆಯಬೇಕು. ವಿದ್ಯಾರ್ಥಿಗಳು ತಮ್ಮ ಮಿತಿಗಳನ್ನು ದಾಟಿದರೆ, ವೃತ್ತಿಪರ ಮತ್ತು ಖಾಸಗಿ ಜೀವನ ಎರಡೂ ನಾಶವಾಗುತ್ತವೆ. ಹಾಗಾಗಿ ಭವಿಷ್ಯವನ್ನು ಆತ್ಮವಿಶ್ವಾಸ ಮತ್ತು ಸ್ವ ಸಾಮರ್ಥ್ಯದಿಂದ ನಿಭಾಯಿಸಬೇಕು. ಅದಕ್ಕಾಗಿ ಯಾವಾಗಲೂ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಓದು ಸ್ವಾರ್ಥಕ್ಕಾಗಿ ಮಾತ್ರವಲ್ಲ, ಸಮಾಜಕ್ಕೆ ಸಂಪೂರ್ಣ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಲು ಬಳಕೆಯಾಗಬೇಕು ಎಂದರು.
ಉದ್ಯೋಗ ಕ್ಷೇತ್ರದಲ್ಲೂ ಜಗತ್ತು ಬದಲಾವಣೆಗೆ ಒಳಗಾಗುತ್ತಿದೆ. ಸಮಗ್ರ ಮಾಹಿತಿ, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆಯಂತಹ ವಿವಿಧ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯೊಂದಿಗೆ ಪ್ರಪಂಚದಾದ್ಯಂತ ಅನೇಕ ಕೌಶಲರಹಿತ ಉದ್ಯೋಗಗಳು ಯಂತ್ರಗಳಿಂದ ಆಕ್ರಮಿಸಿಕೊಂಡಿವೆ. ಆದರೆ, ಇದೇ ಸಮಯದಲ್ಲಿ ನುರಿತ ತಂತ್ರಜ್ಞರಿಗೂ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಗಣಿತ, ಕಂಪ್ಯೂಟರ್ ವಿಜ್ಞಾನ, ದತ್ತಾಂಶ ವಿಜ್ಞಾನ, ಸಾಮಾಜಿಕ ವಿಜ್ಞಾನ, ಮಾನವಿಕ ಸೇರಿದಂತೆ ಬಹುಶಿಸ್ತೀಯ ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮೈವಿವಿ ಕುಲಪತಿ ಪೆÇ್ರ.ಎನ್.ಕೆ. ಲೋಕನಾಥ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲಿ ಕಲಿತ ಜೀವನ ಮೌಲ್ಯಗಳನ್ನು ಮರೆಯದೆ ನಿಜ ಜೀವನದಲ್ಲಿ
ಅಳವಡಿಸಿಕೊಳ್ಳಬೇಕು. ಇಂದು ತಾಂತ್ರಿಕಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ಇರುವುದರಿಂದ ವಿದ್ಯಾರ್ಥಿಗಳು ಅದರಲ್ಲೂ ನೈಪುಣ್ಯತೆಯನ್ನು ಪಡೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಪರಿಶ್ರಮ, ಸ್ವಯಂ ಅಧ್ಯಯನ, ಪ್ರಾಮಾಣಿಕತೆ, ಸಕಾರಾತ್ಮಕ ಮನೋಭಾವಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದರು.
ಮಹಾಜನ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಪರೀಕ್ಷಾ ನಿಯಂತ್ರಣಾಧಿಕಾರಿ ಶ್ರುತಿ ಪೂಣಚ್ಚ , ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಸಿ.ಕೆ.ರೇಣುಕಾರ್ಯ, ಆಡಳಿತಾಧಿಕಾರಿ ಪೆÇ್ರ.ಪಿ.ಸರೋಜಮ್ಮ, ಇಒ ಡಾ.ಎಸ್.ಆರ್.ರಮೇಶ್, ಡೀನ್ ಡಾ.ಎಚ್.ಶ್ರೀಧರ್ ಮತ್ತಿತರರು ಹಾಜರಿದ್ದರು.