ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ
ಮಾಲೂರು.ಜು.೨೧- ಪಟ್ಟಣದ ಅರಳೆರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮಾ ಮಹೋತ್ಸವ ಶ್ರದ್ದಾಭಕ್ತಿಯಿಂದ ನೆಡೆಯಿತು. ಅಪಾರ ಜನಸ್ತೋಮ ಸರತಿ ಸಾಲಿನಲ್ಲಿ ನಿಂತು ಕ್ಷೀರಭಿಷೆಕ ಮಾಡಿ ಬಾಬಾ ಅವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು
ಪಟ್ಟಣದ ಆದರ್ಶನಗರದ ಅರಳೇರಿ ರಸ್ತೆ ಬಳಿ ಇರುವ ಶಿರಡಿ ಸಾಯಿ ಬಾಬಾ ಮಂದಿರದಲ್ಲಿಶಿರಡಿ ಸಾಯಿಬಾಬಾ ಸೇವಾ ಸಮಿತಿ ಮತ್ತುಯುವಕ ಮಂಡಳಿ ವತಿಯಿಂದ ಪ್ರತಿವರ್ಷದಂತೆ
ಈ ವರ್ಷವೂ ಸಹ ಗುರುಪೂರ್ಣಿಮಾ ಮಹೋತ್ಸವನ್ನು ಏರ್ಪಡಿಸಲಾಗಿತ್ತು, ಜುಲೈ ೨೧ರ ಭಾನುವಾರ ಬೆಳಿಗ್ಗೆ ಬಾಬಾ ಗೆ ೫ಗಂಟೆಗೆ ರಾಜ ಪುರೋಹಿತ ನಾಗರಾಜ ಭಟ್ಟರು ಹಾಗೂ ದೇವಾಲಯದ ಪ್ರಧಾನ ಅರ್ಚಕ ರಾಮಮೂರ್ತಿ ಪ್ರಧಾನ್ ಅರ್ಚಕತ್ವದಲ್ಲಿ ಸುಪ್ರಭಾತ ಸೇವೆ ಕಾಕಡಾರತಿ, ಮೂಲ ದೇವರಿಗೆ ಅಭಿಷೇಕ, ಬೆಳಗ್ಗೆ ೫.೩೦ ರಿಂದ ೬.೩೦ ಕ್ಕೆಕ್ಷೀರಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ, ಪ್ರಸಾದ್ ಅವರ ತಂಡದವರಿಂದ ಬಾಬಾ ಅವರ ಭಜನೆ ಗೀತೆಗಳು ಹಾಗೂ ೭:೦೦ಗಂಟೆಗೆ ಮಹಾಮಂಗಳಾರತಿ ನಡೆಯಿತು ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀ
ಶಿರಡಿ ಸಾಯಿಬಾಬಾ ಭಕ್ತಾದಿಗಳಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು ಅಪಾರ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಬಾಬಾ ಅವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು
ಗುರುಪರಂಪರೆ ಸಂಗೀತ ಕಾರ್ಯಕ್ರಮದಲ್ಲಿ ಸಾಯಿ ಭಜನೆ ಸಾಮೂಹಿಕ ವಿಷ್ಣುಸಹಸ್ರನಾಮ,ದೇವರ ಕೀರ್ತಿನಗೆಗಳು, ಗುರುದೇವೋತ್ಸವಕಾರ್ಯಕ್ರಮ, ವೈಲಿನ್ ವಾದನ, ಭರತನಾಟ್ಯ,ಕುಚುಪುಡಿ ಕಾರ್ಯಕ್ರಮಗಳು ನಡೆಯಲಿದೆ
ಶಾಸಕ ಕೆ.ವೈ.ನಂಜೇಗೌಡ, ಸಂಸದ ಮಲ್ಲೇಶ್‌ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ,ಮಾಜಿ ಶಾಸಕರಾದ ಎ.ನಾಗರಾಜು, ಎಸ್.ಎನ್.ಕೃಷ್ಣಯ್ಯಶೆಟ್ಟಿ, ಮಂಜುನಾಥಗೌಡ, ಮುಖಂಡ ಹೂಡಿ ವಿಜಯ್ ಕುಮಾರ್ ಜಿ.ಪಂ.ಮಾಜಿ ಸದಸ್ಯೆ ಗೀತಮ್ಮವೆಂಕಟೇಶ್, ಶಿರಡಿ ಸಾಯಿಬಾಬಾ ದೇವಾಲಯ ಸಮಿತಿಯ ಅಧ್ಯಕ್ಷ ಆರ್ ಸಿ ಅಪ್ಪಾಜಿಗೌಡ ಸದಸ್ಯರಾದ ಅಮರ್ ಸಿಂಗ್ ಲೋಕೇಶ್ ಎಂ ಎನ್ ಸುಬ್ರಮಣ್ಯ ರೆಡ್ಡಿ ಚಂದ್ರ ಶೇಖರ್ ಪ್ರಸಾದ್ ಎನ್ ನಾಗೇಶ್‌ದಿನೇಶ್ ಗೌಡ ಬಾಬುರೆಡ್ಡಿ ಗೋವಿಂದ ರಾಜ್ ಶೆಟ್ಟಿ ತೋಟಗಾರಿಕೆ ಇಲಾಖೆ ಪ್ರದೀಪ್ ಮುಖಂಡ ಹೂಡಿ ವಿಜಯಕುಮಾರ್ ಇನ್ನಿತರರು ದೇವಾಲಯಕ್ಕೆ ಆಗಮಿಸಿ ಬಾಬಾ ಅವರ ದರ್ಶನ ಪಡೆದರು