ಎಸ್.ಎಸ್.ಎಲ್.ಸಿ ಪರೀಕ್ಷೆ 2: ಸೃಜನ.ಜೆ ತಾಲೂಕಿಗೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆ
ಹನೂರು ಜು 21 :- ಪಟ್ಟಣದ ಕ್ರಿಸ್ತರಾಜ ಶಾಲೆಯ ಸೃಜನ.ಜೆ ಸ್ವಾಮಿ ವಿಧ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆ ಎರಡರಲ್ಲಿ 625ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ಹನೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.
2023/24 ನೇರ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸೃಜನ.ಜೆ ವಿದ್ಯಾರ್ಥಿನಿಯು 625ಕ್ಕೆ. 590 ಅಂಕಗಳನ್ನು ಪಡೆದುಕೊಂಡಿದ್ದರು. ಆರು ಸಬ್ಜೆಕ್ಟ್ ಗಳಲ್ಲಿ ಗಣಿತ ವಿಷಯ 100ಕ್ಕೆ 84 ಅಂಕಗಳನ್ನು ಪಡೆದಿದ್ದರು. ನಂತರ ಹೆಚ್ಚಿನ ಅಂಕಗಳನ್ನು ಪಡೆಯಲು ಎರಡನೇ ಬಾರಿಗೆ ಗಣಿತ ಪರೀಕ್ಷೆ ಬರೆಯುವ ಮೂಲಕ 100ಕ್ಕೆ 94 ಅಂಕಗಳನ್ನು ಪಡೆದಿದ್ದಾರೆ.
ದಿನಾಂಕ ಜುಲೈ 9 ರಂದು ಪ್ರಕಟವಾದ ಎಸ್.ಎಸ್‍ಎಲ್.ಸಿ ಪರೀಕ್ಷೆ
ಎರಡನೇ ಬಾರಿಗೆ ಬರೆದ ಪರೀಕ್ಷೆಯಲ್ಲಿ ಗಣಿತದಲ್ಲಿ 94 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಹತ್ತು ಅಂಕಗಳನ್ನು ಹೆಚ್ಚಿಸಿಕೊಂಡು ಆರು ವಿಷಯಗಳಿಗೆ ಒಟ್ಟು 625ಕ್ಕೆ 600 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ನಿವಾಸಿಗಳಾದ ಶಿಕ್ಷಕ ಜಡೆಸ್ವಾಮಿ ಮತ್ತು ಶಿಕ್ಷಕಿ ರೂಪದೇವಿ ದಂಪತಿಯ ಮಗಳು ಸೃಜನ.ಜೆ ಅವರು ಅತಿ ಹೆಚ್ಚು ಅಂಕಗಳನ್ನು ಪಡೆಯಲು ಎಸ್.ಎಸ್.ಎಲ್.ಸಿ ಯಲ್ಲಿ ಗಣಿತ ಪಠ್ಯವನ್ನು ಮತ್ತೊಮ್ಮೆ ಎರಡನೇ ಬಾರಿ ಪರೀಕ್ಷೆ ಬರೆಯುವ ಮೂಲಕ 600 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.