ರಂಗಸ್ವಾಮಿ ಒಡ್ಡು ರಸ್ತೆ ಅಭಿವೃದ್ಧಿ: ತಡೆಗೋಡೆ ನಿರ್ಮಾಣಕ್ಕೆ ಕಾರ್ಯಾರಂಭ
ಸಂಜೆವಾಣಿ ವಾರ್ತೆ
ಹನೂರು ಜು 21 :- ತಾಲೂಕಿನ ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದ ಬಸವನ ಹಾದಿಯ ಮಧ್ಯೆ ಬರುವ ರಂಗಸ್ವಾಮಿ ಒಡ್ಡುವಿನ ಮುಂದೆ ಮುಖ್ಯ ರಸ್ತೆ ಸಂಪೂರ್ಣ ಗುಂಡಿಯಾಗಿ ಕೆರೆಯಂತಾಗಿದ್ದ ರಸ್ತೆಯನ್ನು ದುರಸ್ತಿ ಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜೊತೆಗೆ ರಸ್ತೆಯ ತಿರುವು ಬದಿಗಳಲ್ಲಿ ತಡೆಗೋಡೆಗಳನ್ನು ನಿರ್ಮಿಣ ಕಾರ್ಯ ಪ್ರಾರಂಭಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವಾಗ ರಂಗಸ್ವಾಮಿ ಒಡ್ಡು ಮುಂದೆ ರಸ್ತೆ ಸಂಪೂರ್ಣ ಹೊಂಡ ನಿರ್ಮಾಣವಾಗಿ ಮಳೆಗಾಲದಲ್ಲಿ ಕೆರೆಯಾಗಿ ವಾಹನ ಸವಾರರು ಆಯಾತಪ್ಪಿ ಅಪಘಾತಗಳು ಸಂಭವಿಸುವ ಸಾಧ್ಯತೆ ಈ ಬಗ್ಗೆ ಎಚ್ಚೆತ್ತ ಪಿಡಬ್ಲ್ಯೂಡಿ ಇಂಜಿನಿಯರ್ ಅಧಿಕಾರಿಗಳು ಗುಂಡಿಯಾಗಿದ್ದ ರಸ್ತೆ ದುರಸ್ತಿ ಪಡಿಸಿ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಾರೆ.
ರಸ್ತೆ ತಿರುವು ಬದಿಗಳಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭ:
ಶ್ರೀ ಮಲೆ ಮಹದೇಶ್ವರ ಬೆಟ್ಟದ ಆನೆತಲೆ ದಿಂಬದಿಂದ ಆಸು-ಪಾಸು ಹಲವು ಕಡೆ ರಸ್ತೆಯ ತಡೆಗೋಡೆಗಳು ಕಿತ್ತು ಹೋಗಿದ್ದು ವಾಹನ ಸವಾರರು ಮೈಮರೆತರೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇತ್ತು. ಬೆಟ್ಟದಿಂದ ತೀವ್ರ ಇಳಿಜಾರು ತಿರುವುಗಳ ಮಾರ್ಗವಾಗಿ ರಸ್ತೆಯಲ್ಲಿ ವಾಹನಗಳನ್ನು ಸಂಚರಿಸುವಾಗ ತಡೆಗೋಡೆಗಳು ಇಲ್ಲದಂತಾಗಿತ್ತು ಈ ಬಗ್ಗೆ ಪಿಡಬ್ಲ್ಯೂಡಿ ಇಂಜಿನಿಯರ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕುಸಿದು ಬಿದ್ದಿರುವ ತಡೆಗೋಡೆ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದಾರೆ.
ಆನೆತಲೆ ದಿಂಬು ಆಸು ಪಾಸಿನಲ್ಲಿ ತಡೆಗೋಡೆಗಳಿಲ್ಲದೆ ಇರುವುದರಿಂದ ಅನಾಹುತಕ್ಕೆ ಆಹ್ವಾನ ನೀಡುವಂತಿತ್ತು. ಹಾಗೂ ರಂಗಸ್ವಾಮಿ ಒಡ್ಡಿನ ಬಳಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು ವಾಹನ ಸಂಚಾರ ತೊಂದರೆಯಾಗಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್, ಎಇಇ ಚಿನ್ನಣ್ಣ, ಎಇ ಮಹೇಶ್, ಅವರು ರಂಗಸ್ವಾಮಿ ಒಡ್ಡುವಿನ ಮುಂಭಾಗದಲ್ಲಿ ಗುಂಡಿ ಬಿದ್ದಿದ್ದ ರಸ್ತೆಯ ಬಳಿ ತೆರಳಿ ಬಳಿಕ ಪರಿಶೀಲನೆ ನಡೆಸಿದರು.
ರಂಗಸ್ವಾಮಿ ಪಡ್ಡುವಿನ ಬಳಿ ರಸ್ತೆಗೆ ಅಡ್ಡಲಾಗಿದ್ದ ಕಿರು ಸೇತುವೆಯಲ್ಲಿ ಕಸಪ್ ತ್ಯಾಜ್ಯಗಳು ಸಂಗ್ರಹವಾಗಿ ಮುಚ್ಚಿಹೋಗಿತ್ತು. ನಂತರ ಜೆಸಿಬಿ ಯಂತ್ರದ ಮೂಲಕ ಕಿರು ಸೇತುವೆಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗಳಿಸಿ ರಸ್ತೆಯ ಮೇಲೆ ನೀರು ಬರದಂತೆ ಕಾಲುವೆಯನ್ನು ತೋಡಿ ಅಭಿವೃದ್ಧಿ ಪಡಿಸಲಾಗಿದೆ. ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರಿಗೆ ದುರಸ್ತಿಯಾಗಿರುವ ಬಗ್ಗೆ ಕೂಡಲೇ ರಸ್ತೆ ದುರಸ್ತಿಗೆ ಕ್ರಮವಹಿಸಲಾಗುವುದು. ಜತೆಗೆ ತಡೆಗೋಡೆಗಳ ರಿಪೇರಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಮಹೇಶ್ ತಿಳಿಸಿದ್ದಾರೆ.