ರೈಲ್ವೆ ನಿಲ್ದಾಣದ ಅಕ್ಕಪಕ್ಕ ಅನಧಿಕೃತ ವಾಹನಗಳ ಪಾರ್ಕಿಂಗ್ ತೆರವು ಗೊಳಿಸಿಸುವಂತೆ ಒತ್ತಾಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 21- ನಗರದ ರೈಲ್ವೆ ನಿಲ್ಧಾಣದ ಸುತ್ತಮುತ್ತ ಇರುವ ಅನಧಿಕೃತ ಹಾಗೂ ಕಾನೂನು ಬಾಹಿರ ಬೈಕ್, ಕಾರುಗಳ ಪಾರ್ಕಿಂಗ್ ವ್ಯವಸ್ಥೆಯನ್ನು ತೆರೆವುಗೊಳಿಸಿ ನನಗೆ ನ್ಯಾಯ ಕಲ್ಪಿಸಿಕೊಡಬೇಕೆಂದು ರೈಲ್ವೆ ನಿಲ್ದಾಣದ ಅಧಿಕೃತ ಪರವಾನಗಿ ಪಡೆದಿರುವ ದಡದಹಳ್ಳಿಯ ಪಿ. ಮೂರ್ತಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚಾಮರಾಜನಗರ ರೈಲ್ವೆ ನಿಲ್ದಾಣದ ಅಧಿಕೃತ ವಾಹನಗಳ ಪಾರ್ಕಿಂಗ್ ಟೆಂಡರ್ ಪಡೆದುಕೊಂಡಿದ್ದೇನೆ. ಕಳೆದ 2009 ರಿಂದಲೂ ಗುತ್ತಿಗೆ ಪಡೆದುಕೊಂಡು ರೈಲ್ವೆ ಇಲಾಖೆಯವರು ನಿಗಧಿಪಡಿಸುವ ಹಣವನ್ನು ಪಾವತಿ ಮಾಡಿ, ರೈಲ್ವೆ ನಿಲ್ದಾಣದಲ್ಲಿಯೇ ವಾಹನಗಳ ಪಾರ್ಕಿಂಗ್ ಮಾಡಿಕೊಂಡು ಬರುತ್ತಿದ್ದೇನೆ. ಆದರೆ, ಮಲ್ಲೇಶ ಎಂಬ ವ್ಯಕ್ತಿ ರೈಲ್ವೆ ನಿಲ್ದಾಣ ಸನಿಹದಲ್ಲಿ ಕಂದಾಯ ಭೂಮಿಯಲ್ಲಿ ವಾಹನಗಳ ಪಾರ್ಕಿಂಗ್ ಮಾಡಿಸಿಕೊಂಡು ಅನಧಿಕೃತ ಹಾಗೂ ಕಾನೂನು ಬಾಹಿರವಾಗಿ ಬೈಕ್, ಆಟೋ, ಹಾಗೂ ಕಾರುಗಳನ್ನು ನಿಲ್ಲಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ನನಗೆ ಆರ್ಥಿಕ ನಷ್ಟ ಉಂಟು ಆಗುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು.
ರೈಲ್ವೆ ಇಲಾಖೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಜಿಎಸ್‍ಟಿ ಸೇರಿ 1,77,725 ರೂ.ಗಳನ್ನು ಪಾವತಿ ಮಾಡುತ್ತಿದ್ದೇನೆ. ಆದರೆ, ಈತನ ಅನಧಿಕೃತ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ಬೈಕ್, ಕಾರು ಹಾಗೂ ಆಟೋಗಳು ನಮ್ಮ ಕಡೆಗೆ ಬರುತ್ತಿಲ್ಲ. ಎಲ್ಲವನ್ನು ಈ ಮಲ್ಲೇಶ ಎಂಬ ಅನಧಿಕೃತವಾಗಿ ನಿಲ್ಲಿಸಿಕೊಂಡು ನನಗೆ ತೊಂದರೆ ನೀಡುತ್ತಿದ್ದೇನೆ. ಈ ಸಂಬಂಧ ಕಾನೂನು ಹೋರಾಟವನ್ನು ಸಹ ನಾನು ನಡೆಸುತ್ತಿದ್ದೇನೆ. ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಮತ್ತು ತಹಶೀಲ್ದಾರ್ ಅವರಿಗೆ ದೂರು ನೀಡಿದ್ದು. ಅದರ ಸೂಚನೆಯ ಮೇರೆಗೆ ಅನಧಿಕೃತವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ. ತೆರವು ಗೊಳಿಸಲು ಮುಂದಾಗಿದ್ದರು. ಆದರೆ, ಬಿಎಸ್ಪಿ ಮುಖಂಡರಾದ ಸಿದ್ದಯ್ಯನಪುರ ಎಸ್.ಪಿ. ಮಹೇಶ್, ದೊಡ್ಡರಾಯ ಪೇಟೆ ಸಿದ್ದರಾಜು ಅವರು ಮಲ್ಲೇಶ್‍ಗೆ ಕುಮ್ಮಕ್ಕು ನೀಡಿ, ತೆರವು ಮಾಡಲು ಬಂದ ಅಧಿಕಾರಿಗಳಿಗೆ ಬೆದರಿಕೆ ಹಾಕಿ ನನಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮೂರ್ತಿ ತಿಳಿಸಿದರು.
ಕೃಷ್ಣಮೂರ್ತಿ ಅವರ ಹೆಸರು ತರುವುದು ಸರಿಯಲ್ಲ :ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ.ಆರ್. ಕೃಷ್ಣಮುರ್ತಿ ಅವರನ್ನು ಈ ವಿಚಾರದಲ್ಲಿ ಎಳೆದು ತರವುದು ಸರಿಯಲ್ಲ. ಈ ಬಿಎಸ್ಪಿ ಮುಖಂಡರು ಅವರ ಹೆಸರನ್ನು ಹೇಳಿಕೊಂಡು ಹಣ ಮಾಡಲು ಮುಂದಾಗಿದ್ದಾರೆ ಕಾನೂನಾತ್ಮಕವಾಗಿ ನನ್ನ ಹೋರಾಟ ನಡೆಸುತ್ತಿದ್ದೇನೆ. ಯಾವುದೇ ರೀತಿಯ ಶಿಫಾರಸ್ಸು ಮಾಡಿಲ್ಲ ಎಂದರು.
ರಾಮಸಮುದ್ರ ಕೆ.ನಾಗರಾಜು ಮಾತನಾಡಿ, ಬಿಎಸ್ಪಿ ಮುಖಂಡರು ಎಂದು ಹೇಳಿಕೊಂಡು ನಗರದಲ್ಲಿ ಇಂಥ ಅವ್ಯವಹಾರಗಳಿಗೆ ಕುಮ್ಮುಕ್ಕು ನೀಡುತ್ತಿರುವ ಈ ಇಬ್ಬರಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ದಲಿತ ಮುಖಂಡನಾದ ಮೂರ್ತಿ ಬಹಳ ಕಷ್ಟು ಪಟ್ಟು ಸ್ವಂತ ಉದ್ಯೋಗ ಹೊಂದಲು ಕಾನೂನು ಬದ್ದವಾಗಿ ರೈಲ್ವೆ ಪಾರ್ಕಿಂಗ್ ಪಡೆದುಕೊಂಡಿದ್ದಾರೆ. ಇಂಥ ವ್ಯಕ್ತಿಗೆ ಸಮುದಾಯದ ಮುಖಂಡರೇ ತೊಂದರೆ ಕೊಡುವುದು ಸರಿಯಲ್ಲ. ಮಲ್ಲೇಶ್ ಎಂಬ ವ್ಯಕ್ತಿ ಕಂದಾಯ ಇಲಾಖೆಯ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ನಗರಸಭೆಗೆ ಸೇರಿದ್ದರು ಯಾವುದೇ ರೀತಿ ಕಂದಾಯ ಕಟ್ಟದೇ ಸುಮಾರು ವರ್ಷಗಳಿಂದ ನಗರಸಭೆಗೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಇವರ ವಿರುದ್ದ ಕ್ರಮವಾಗಬೇಕು ಎಂದು ಒತ್ತಾಯಿಸಿದರು.
ಇವರು ಇದಕ್ಕೆ ರೈಲ್ವೆ ಇಲಾಖೆಗೆ ಆಗಲಿ, ನಗರಸಭೆಗೆ ಆಗಲಿ ಯಾವುದೇ ರೀತಿ ಶುಲ್ಕವನ್ನು ನೀಡುತ್ತಿಲ್ಲ. ಅಲ್ಲದೇ ಅನೇಕ ಭಾರಿ ರೈಲ್ವೆ ಇಲಾಖೆಯವರು ತಿಳುವಳಿಕೆ ನೀಡಿದ್ದಾರೆ. ಅಲ್ಲದೇ ನಗರಸಭೆಯವರು ಈ ಬಗ್ಗೆ ತೆರವು ಮಾಡುವಂತೆ ಹೇಳಿದ್ದರು. ಆದರೂ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಅಕ್ರಮವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ದಡದಹಳ್ಳಿ ಶಂಕರ್, ಆನಂತು, ಮಾಧು, ಮಹದೇವಪ್ರಸಾದ್, ಅರಳೀಪುರ ಇತರರು ಇದ್ದರು.