ಕನ್ನಡಿಗರಿಗೆ ಶೇ ೮೦ ರಷ್ಟು ಉದ್ಯೋಗ ಮೀಸಲಿಗೆ ಕರವೇ ಆಗ್ರಹ
ಕೋಲಾರ,ಜು.೨೧- ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇಕಡ ೮೦ % ರಷ್ಟು ಉದ್ಯೋಗವನ್ನು ಮೀಸಲಿಡುವಂತೆ ಒತ್ತಾಯಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ವೃತ್ತದಲ್ಲಿ ಸಂಘಟಿತರಾದ ಜಿಲ್ಲಾ ಕ.ರ.ವೇ. ಕಾರ್ಯಕರ್ತರು ಕನ್ನಡದ ಧ್ವಜಗಳನ್ನು ಹಿಡಿದು ಘೋಷಣೆಗಳು ಕೊಗುತ್ತಾ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಮಂಡಿಸಿದ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಧನ್ಯವಾದಗಳು ಹಾಗೂ ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ಅಂಗೀಕಾರ ಮಾಡಿದ ೧೨ ಗಂಟೆಯಲ್ಲಿ ಮತ್ತೆ ಕನ್ನಡ ನಾಡಿನ ಭೂಮಿ, ನೀರು, ಗಾಳಿ ಎಲ್ಲಾ ಸೌಲಭ್ಯಗಳನ್ನು ಪಡೆದು ಕನ್ನಡಿಗರ ಸ್ವಾಭಿಮಾನದ ಉದ್ಯೋಗವನ್ನು ಹೊರರಾಜ್ಯದ ಕಾರ್ಮಿಕರಿಗೆ ಮಾರಾಟ ಮಾಡುತ್ತಿರುವ ಕನ್ನಡ ವಿರೋಧಿ ನಾಡದ್ರೋಹಿತನ ಎಂದು ಅರೋಪಿಸಿದರು.
ಉದ್ದಿಮೆಗಳು ಸರ್ಕಾರವನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ನಾವು ನಿಮ್ಮ ವಿಧೇಯಕವನ್ನು ವಾಪಸ್ಸು ಪಡೆಯದೇ ಇದ್ದರೆ, ಬಂಡವಾಳ ಹೂಡುವುದಿಲ್ಲ. ಇರುವ ಕೈಗಾರಿಕೆಗಳನ್ನು ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತೇವೆಂದು ಸರ್ಕಾರದ ಮೇಲೆಯೇ ಕಾಣದ ಕೈಗಳಿಂದ ಒತ್ತಡ ಹಾಕಿ ವಿಧೇಯಕವನ್ನು ಆಡಕತ್ತರಿಯಂತೆ ಇಟ್ಟಿರುವ ಆದೇಶವನ್ನು ಯಾವುದೇ ಕಾರಣಕ್ಕೂ ವಾಪಸ್ಸು ಪಡೆಯದೇ ಸರ್ಕಾರ ಅಧಿವೇಶನದಲ್ಲಿ ಮಂಡನೆ ಮಾಡಿರುವ ಖಾಸಗಿ ವಲಯದ ಉದ್ಯೋಗ ಮೀಸಲಾತಿ ವಿದೇಯಕವನ್ನು ಮುಂದುವರೆಸಬೇಕು ಎಂದು ಆಗ್ರಹ ಪಡೆಸಿದ ಅವರು ಇಲ್ಲವಾದರೆ ಕನ್ನಡಿಗರ ತಾಕತ್ತನ್ನು ವಲಸೆ ಕಂಪನಿಗಳ ಮಾಲೀಕರಿಗೆ ತೋರಿಸಬೇಕಾಗುತ್ತದೆಂದು ಮನವಿ ಮೂಲಕ ಮಾಡಿದರು.
ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಚಂಬೇ ರಾಜೇಶ್, ತಾಲೂಕು ಅಧ್ಯಕ್ಷ ದಿಂಬ ನಾಗರಾಜಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್, ಜಿಲ್ಲಾ ಉಪಾಧ್ಯಕ್ಷರಾದ ನಾಗೇಶ್ ಮಂಗಸಂದ್ರ, ಬೈರತ್ನಹಳ್ಳಿ ನಾರಾಯಣಸ್ವಾಮಿ, ಶ್ರೀನಿವಾಸ್, ಜನಪನಹಳ್ಳಿ ಆನಂದ್, ಮತ್ತಿಕುಂಟೆ ಶ್ರೀನಿವಾಸ್, ಮಹಿಳಾ ಅಧ್ಯಕ್ಷೆ ಮಂಜುಳಾ ನಾಗರಾಜ್, ಉಪಾಧ್ಯಕ್ಷರಾದ ಶಕುಂತಲ, ಪ್ರಮೀಣಾ, ಅರ್ಚನ, ಸವಿತ, ಸೌಮ್ಯ, ಮುಳಬಾಗಲು ಅಧ್ಯಕ್ಷ ಹರೀಶ್‌ಗೌಡ, ಗೌರವಾಧ್ಯಕ್ಷ ಪ್ರಕಾಶ್‌ಗೌಡ, ಮಾಲೂರು ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ (ಶಿವಾರನಾಣಿ), ಉಪಾಧ್ಯಕ್ಷರಾದ ಸಿ.ಡಿ.ನಾಗರಾಜ್, ಮಿಥುನ್, ಚಿರಂಚೀವಿ, ರಮೇಶ್, ಮಂಜುನಾಥ್, ತಾಲೂಕು ಉಪಾಧ್ಯಕ್ಷರಾದ ಅಗರ ಮುನಿಸ್ವಾಮಿ, ಬೆಗ್ಲಿ ಸುರೇಶ್ ಉಪಸ್ಥಿತರಿದ್ದರು.