ಅಕ್ಕಲಕೋಟದ ಜಗದ್ಗುರು ಚಿಕ್ಕರೇವಣಸಿದ್ಧರ ಪುಣ್ಯಸ್ಮರಣೆ
ಆಳಂದ:ಸೆ.28: ಪಟ್ಟಣದ ಶರಣ ಮಂಟಪದ ಶ್ರೀ ಸದ್ಗುರು ರೇವಣಸಿದ್ಧ ಶಿವಶರಣ ಮಠದಲ್ಲಿ ಹಮ್ಮಿಕೊಂಡ ಅಕ್ಕಲಕೋಟದ ಜಗದ್ಗುರು ಶ್ರೀ ಚಿಕ್ಕರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಪ್ರಥಮ ಪುಣ್ಯರಾಧನೆ ನಡೆಯಿತು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಳಂದ, ನಂದವಾಡಗಿ ಮತ್ತು ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅವರು ಮಾತನಾಡಿದರು.
ಮಾನವ, ಮಹಾಮಾನವ ಮತ್ತು ದೇವಮಾನವ” ಎಂಬ ವಿಚಾರ ಕುರಿತು ಮಾತನಾಡಿ, “ಜಗತ್ತಿನ ಒಳಿತು ಬಯಸುವವನೇ ದೇವಮಾನವ” ಎಂದು ಪ್ರತಿಪಾದಿಸಿದರು.
ಜಗತ್ತಿನಲ್ಲಿ ಶ್ರೇಷ್ಠ ಗುಡಿಯೇ ತಾಯಿ ಗರ್ಭ, ಎಂದು ತಾಯಿ ಗರ್ಭದ ಮಹತ್ವವನ್ನು ವಿಶೇಷವಾಗಿ ವಿವರಿಸಿ ಶ್ರೀಗಳು, ಯೋಗಿ, ಶಿವಯೋಗಿ ನಾವು ಅಲ್ಲದಿದ್ದರೂ, ನಾಲ್ವರಿಗೆ ಉಪಯೋಗವಾದಾಗಬೇಕು ಎಂದು ಭಗವಂತ ನಮ್ಮ ನಿಮ್ಮನೆಯಲ್ಲ ಕಳುಹಿಸಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಸಾರ್ಥಕತೆಯನ್ನು ಜೀವನದಲ್ಲಿ ಸಾಧಿಸಬೇಕೆಂದು ಕರೆ ನೀಡಿದರು.
ಚಿಕ್ಕ ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳು ಸಮಾಜ ಮತ್ತು ಧಾರ್ಮಿಕ ಕಾರ್ಯಗಳನ್ನು ಭಕ್ತರ ಉದ್ದಾರಕ್ಕಾಗಿ ಜೀವನವೀಡಿ ಶ್ರಮಿಸಿದ್ದರಿಂದ ಇಂದು ಭಕ್ತರು ಅವರ ಸ್ಮರಣೆಯನ್ನು ಕೈಗೊಳ್ಳುತ್ತಿದ್ದು, ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶರಣಮಠದ ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರು, “ಜಗದ್ಗುರು ಚಿಕ್ಕ ರೇವಣಸಿದ್ದ ಶಿವಶರಣ ಸ್ವಾಮಿಗಳ ಜೀವನ ಮತ್ತು ಸಾಧನೆ” ಕುರಿತು ಮಾತನಾಡಿ, ಮಹಾಪುರುಷರು, ಪುಣ್ಯಪುರುಷರು ಅಜ್ಞಾನವನ್ನು ಕಳೆದು ಜ್ಞಾನ ಬೋಧನೆ ಮಾಡಿದ ಮಹಾತ್ಮರು ಎಂದು ಸ್ಮರಿಸಿದರು. ಮಹಾತ್ಮರ ವಚನಗಳು, ನಡೆ, ನುಡಿಗಳು ನಮ್ಮ ಜೀವನದಲ್ಲಿ ಆಚಾರಣೆಗೆ ಬರಬೇಕಾಗಿವೆ ಹೇಳಿದರು.
ಶರಣಮಂಟಪ ಪಂಚಕಮೀಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ ಅವರು ಮಾತನಾಡಿ, ಅಕ್ಕಲಕೋಟದ ಚಿಕ್ಕರೇವಣಸಿದ್ಧ ಶ್ರೀಗಳು ತಮ್ಮ ಬದುಕಿನೊದ್ದಕ್ಕೂ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಭಕ್ತರಿಗೆ ಸನ್ಮಾರ್ಗ ತೋರಿ ಬಾಳನ್ನು ಬೆಳಗಿ ಸಮಾಜಕ್ಕೆ ಕೊಡಗೆ ನೀಡಿದ್ದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣಾ ಎಂದು ಹೇಳಿದರು.
ಐನಾಪೂರದ ಮಲ್ಲಿಕಾರ್ಜುನ ಶಾಸ್ತ್ರಿ ಪ್ರವಚÀನ ನಡೆಸಿಕೊಟ್ಟರು. ತಬಲಾ ಸಾಥಿ ಅಶೋಕ ಆಳಂದ ನೆರವೇರಿಸಿದರು.
ಮುಖಂಡ ಶಿವಲಿಂಗಪ್ಪ ಜುಳಜುಳೆ, ಶರಣಯ್ಯಾ ಸ್ವಾಮಿ ಘಸನೆ, ಶಿವರಾನಮ ಶಟಗುಂಡೆ, ಶರಣಪ್ಪ ಷಣ್ಮೂಖ, ಪ್ರವೀಣ ಕರ್, ಮಕ್ಕು ಬಂಡಾರ ಕವಟೆ, ಸಿದ್ಧರೂಢ ಬಡ್ಡೂರ, ಬಸವರಾಜ ತಟ್ಟಿ, ಆನಂದ ಜುಳಜುಳೆ, ಸೂರ್ಯಕಾಂತ ಶಟಗುಂಡೆ, ಶಿವಾನಮ ಎಸ್. ಹಿರೋಳಿ, ಶ್ರೀಶೈಲ ಉಳ್ಳೆ, ಅಕ್ಕನ ಬಳಗದ ಪ್ರಮುಖ ನಾಗಮ್ಮ ಯಲ್ದೆ ಸೇರಿದಂತೆ ವಿವಿಧ ಬಡಾವಣೆಯ ನೂರಾರು ಮಂದಿ ಶರಣ, ಶರಣಿಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಕ್ಕನ ಬಳಗದ ಪ್ರಮುಖಿ ನಾಗಮ್ಮ ಯಲ್ದೆ, ಶರಣಯ್ಯಾ ಸ್ವಾಮಿ ಘಸನೆ ನೇತೃತತ್ವದಲ್ಲಿ ಭಜನೆ ನಡೆಯಿತು.
ದೇವಿಯ ಘಟಸ್ಥಾಪನೆ 3ಕ್ಕೆ:
ಅ.3ರಂದು ಶರಣಮಂಟಪದಲ್ಲಿ ದಸರಾ ಆಚರಣೆ ಅಂಗವಾಗಿ ಘಟಸ್ಥಾಪನೆ, 9ದಿನಗಳ ಕಾಲ ಸಂಜೆ ಭಜನೆ ಮತ್ತು ಅಥಣಿಯ ಅದಾಯ ಸ್ವಾಮಿಗಳಿಂದ ದೇವಿಯ ಪರಾಯಣ ನಡೆಯಲಿದೆ. ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕು.
ಶ್ರೀ ಚನ್ನಬಸವ ಪಟ್ಟದೇವರು ಶರಣಮಂಟಪ ಆಳಂದ.