ನೈಸರ್ಗಿಕ ಸಂಪತ್ತು ಮಿತವಾಗಿ ಬೆಳೆಸಿ
ಹುಮನಾಬಾದ: ಸೆ.28:ಪರಿಸರ ಸಮತೋಲನ ಕಾಪಾಡಲು ನೈಸರ್ಗಿಕ ಸಂಪತ್ತನ್ನು ಮಿತವಾಗಿ ಬಳಸಿ ಮುಂದಿನ ಪೀಳಿಗೆ ರಕ್ಷಿಸಬೇಕೆಂದು ಹುಮನಾಬಾದ್ ಜೆ ಎಮ್ ಎಫ್ ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ಬಾದವಾಡಗಿ ಇಲ್ಲಿಯ ಬಿ ಆರ್ ಅಂಬೇಡ್ಕರ್ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಎಕ ಫೆಡ ಮಾ ಕೆ ನಾಮ ಅಭಿಯಾನ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕರೆ ನೀಡಿದರು.
ಪರಿಸರ ಅಸಮ ತೋಲನದಿಂದ ಭೂಮಿಯ ತಾಪಮಾನ ಹೆಚ್ಚಳವಾಗಿ ಹಲವಾರು ಪ್ರಕೃತಿ ವಿಕೋಪಗಳು ಸಂಭವಿಸಲಾರಂಭಿಸವೆ ಭೂ ತಾಪಮಾನ ಕಡಿಮೆ ಮಾಡಿದರೆ ನಮಗೆ ಉಳಿಗಾಲವಿಲ್ಲಾ ಎಂದು ಎಚ್ಚರಿಕೆ ನೀಡಿದರು. ಭೂ ತಾಯಿಯ ಹೆಸರಿನ ಮೇಲೆ ಸಸಿ ನೆಡುವ ಕಾರ್ಯಕ್ರಮ ಸಹಾಯವಾಗಿದೆ ಎಂದರು.
ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಸಹಾಯ ಮಾಡಬೇಕೆಂದರು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಲ್ತಾಫ್ ಖನಗಾವಿ ಮಾತನಾಡಿ ಕಾನೂನಿನ ಅರಿವು ಜನಸಾಮಾನ್ಯರಲ್ಲಿ ಇದ್ದರೆ ಅಪರಾಧಗಳು ತಡೆಗಟ್ಟಲು ಸಹಾಯವಾಗುತ್ತದೆ ಬಾಲ್ಯ ವಿವಾಹ ಸೇರಿದಂತೆ ಇತರ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ದೇಶದ ಸಂಪತ್ತು ಭವಿಷ್ಯದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಪರಿಸರ ಸಂರಕ್ಷಣೆಗೆ ಸಹಾಯವಾಗುತ್ತದೆ ಎಂದರು ಮರಗಿಡಗಳನ್ನು ಸಂರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕ ಕರ್ತವಾಗಿದೆ ಎಂದರು.
ಶೈಲೇಂದ್ರ ಕಾವಡಿ ಮಾತನಾಡಿ ನಮಗಿರುವುದು ಒಂದೇ ಭೂಮಿ ರಕ್ಷಿಸಲು ಮನವಿ ಮಾಡಿದರು ಈ ವರ್ಷದ ಘೋಷ ವಾಕ್ಯವಾದ ನಮ್ಮ ಭೂಮಿ ನಮ್ಮ ಭವಿಷ್ಯ- ನಮ್ಮ ಭೂಮಿ ರಕ್ಷಿಸಲು ಪ್ರತಿಯೊಬ್ಬರು ಕಾಳಜಿ ವಹಿಸಲು ಕರೆ ನೀಡಿದರು. ವಲಯ ಅರಣ್ಯಾಧಿಕಾರಿ ಐಶ್ವರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃಷಿ ಅರಣ್ಯ ಪೆÇ್ರೀತ್ಸಾಹ ಯೋಜನೆ ಅಡಿಯಲ್ಲಿ ರೈತರ ತಮ್ಮ ಹೊಲದಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಿದರೆ ಪೆÇ್ರೀತ್ಸಾಹ ಧನ ನೀಡಲಾಗುವುದು ಎಂದರು ಈ ವರ್ಷ 2024-2025 ನೇ ಸಾಲಿನಲ್ಲಿ ತಾಲೂಕಿನಾದ್ಯಂತ 2 ಲಕ್ಷ ಸಸಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಪ್ರಶಾಂತ್ ಹಿರೇಮಠ ಎಸ್ ಟಿ ಕಲ್ಯಾಣ್ ಅಧಿಕಾರಿ ಶಂಕರ ಉಪ ವಲಯ ಅರಣ್ಯಾಧಿಕಾರಿ ಅಂಬಾ ದಾಸ್ ಉಪಸ್ಥಿತರಿದ್ದರು. ವಸತಿ ನಿಲಯದ ಆವರಣದಲ್ಲಿ ಕಾರ್ಯಕ್ರಮ ಅಂಗವಾಗಿ ಸಸಿ ನೆಡಲಾಯಿತು ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕಾರ್ಯಕ್ರಮ ನೀರುಪಿಸಿ ವಂದಿಸಿದರು