ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಬೀದರ :ಸೆ.28: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಶರಣಬಸವೇಶ್ವರ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ನಿರ್ದೇಶಕರಾದ
ಡಾ. ವಾಣಿಶ್ರೀ ಸಿ.ಟಿ. ಅವರು ಮಾತನಾಡುತ್ತಾ ಪ್ರವಾಸದಿಂದ ನಮ್ಮ ದೇಶದ ಸಂಸ್ಕøತಿಯಲ್ಲದೆ ಬೇರೆ ಬೇರೆ ದೇಶದ ಸಂಸ್ಕೃತಿಯನ್ನು ಅರಿತು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಇಂದು ಅಗ್ರಿ ಟೂರಿಸಂ, ಗ್ರೇವ್‍ಯಾರ್ಡ ಟೂರಿಸಂ ಬಹಳ ಮಹತ್ವ ಪಡೆದುಕೊಂಡಿವೆ ಪ್ರವಾಸೋಧ್ಯಮದಿಂದ ಹಲವಾರು ಜನರಿಗೆ ಉದ್ಯೋಗ ವ್ಯಾಪಾರ ಹಾಗೂ ನೂರಾರು ಕುಟುಂಬಗಳು ಬದುಕುತ್ತಿವೆ. ಇದರಿಂದ ವಿದ್ಯಾರ್ಥಿ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಶ್ರೀ ಪರೀಕ್ಷಿತ ಎಸ್. ನಂದಗಾಂವ ಶ್ರೀ ಅವರು ಮಾತನಾಡುತ್ತಾ ಇಂದು ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಸ್ವಚ್ಛತೆ ಕಾಪಾಡುವುದು ಬಹುಮುಖ್ಯ ಕೆಲಸವಾಗಿದೆ. ಕೆಲವೊಬ್ಬರಿಗೆ ದೇವಸ್ಥಾನ ಮತ್ತು ಮನೆಗಳಲ್ಲಿ ಶಾಂತಿ ದೊರೆಯುತ್ತದೆ ಇನ್ನೂ ಕೆಲವರು ಪ್ರವಾಸದಿಂದ ಶಾಂತಿ ಪ್ರಾಪ್ತವಾಗುತ್ತದೆ ಇಂದು ವಿಶ್ವ ಭಾರತದ ಕಡೆ ಮುಖ ಮಾಡಿ ನಿಂತಿದೆ ಗಾಂಧೀಜಿಯವರ ಶಾಂತಿ ಮತ್ತು ಅಹಿಂಸೆಗಳಲ್ಲಿದೆ. ಆದ ಕಾರಣ ವಿಶ್ವ ಸಂಸ್ಥೆಯು ಸಹ ಇದಕ್ಕೆ ಅನುಮಾಡಿಕೊಟ್ಟಿದೆ.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಪ್ರವಾಸದಿಂದ ಮಕ್ಕಳ ಜ್ಞಾನವೃದ್ಧಿಯಾಗುತ್ತದೆ. ದೇಶ ಸುತ್ತು ಕೋಶ ಓದು, ಇಂದು ಪ್ರವಾಸದಿಂದ ಕರ್ನಾಟಕ ಸರ್ಕಾರವು ಪ್ರವಾಸೋದ್ಯಮ ಇಲಾಖೆ ಒಂದು ಘೋಷಣೆ ಕೊಟ್ಟಿದೆ “ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳು” ಒಳಗೊಂಡಿದೆ. ಇಂದು ಕರ್ನಾಟಕದಲ್ಲಿ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೆಬೀಡು ಹಾಗೂ ಶ್ರವಣಬೇಳಗೋಳ, ಮೈಸೂರು ಪ್ರಾಂತ ಈ ಹತ್ತು ಹಲವಾರು ಪ್ರವಾಸದ ಕೇಂದ್ರಗಳು ಅಲ್ಲದೆ ಕಲ್ಯಾಣ ಕರ್ನಾಟಕದ ನಮ್ಮ ಬೀದರ ಜಿಲ್ಲೆಯ ಗುರುನಾನಕ, ಪಾಪನಾಶ, ನರಸಿಂಹ ಝರಣಿ ಹಾಗೂ ಜಲಸಂಗ್ವಿ, ಬೀದರ ಕೋಟೆ, ಬಸವಕಲ್ಯಾಣ ಕೋಟೆ, ಇಂತಹ ಹತ್ತು ಹಲವಾರು ಸ್ಮಾರಕಗಳು, ದೇವಾಲಯಗಳು ಕಟ್ಟಡಗಳು, ಇವೇಲ್ಲವು ಕಂಡು ಇತಿಹಾಸ ಜ್ಞಾನ ಅರಿತು ವಿದ್ಯಾರ್ಥಿಗಳು ನಮ್ಮ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಹೇಳಬೇಕು. ಇದು ಎಲ್ಲಾ ವಿದ್ಯಾರ್ಥಿ ಮತ್ತು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಮಕ್ಕಳಿಗೆ ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಮಹಾವಿದ್ಯಾಲಯ ಉಪ ಪ್ರಾಂಶುಪಾಲ ಅನೀಲಕುಮಾರ ಅಣದೂರೆ ವಹಿಸಿದರು ಪ್ರಾಸ್ತವಿಕ ನುಡಿ ಡಾ. ಶಿವಲೀಲಾ ವೀರಯ್ಯಾ ನುಡಿದರು, ಡಾ. ವೆಂಕಟೇಶ ಪೂಜಾರಿ ಸ್ವಾಗತಿಸಿದರು, ರೇಣುಕಾದೇವಿ ಎಂ.ಸ್ವಾಮಿ, ಬಸವರಾಜ ಬಿರಾದಾರ ನಿರೂಪಿಸಿದರು, ಮಾರುತಿ ಭೀಮಣ್ಣಾ ವಂದಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.