ಕಲ್ಲಿನ ಕ್ವಾರಿಯಲ್ಲಿ ಬಿದ್ದು ಯುವಕ ಸಾವು:ಈಶ್ವರಸಿಂಗ್ ಠಾಕೂರ್ ಸಾಂತ್ವನ
ಬೀದರ:ಸೆ.28: ತಾಲೂಕಿನ ನಂದಗಾವ ಗ್ರಾಮದಲ್ಲಿ ಕಲ್ಲಿನ ಕೋರಿಯಲ್ಲಿ ಬಡಪಾಯಿ ರೈತನ ಮಗ ಕರಣ್ ಬಿದ್ದು ಮರಣ ಹೊಂದಿರುವ ಪ್ರಯುಕ್ತ ಮೃತ ಯುವಕನ ಮನೆಗೆ ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ ಅವರು ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿ ಸಹಾಯಹಸ್ತ ನೀಡಿದರು.
ತಾಲೂಕಿನ ನಂದಗಾಂವ ಗ್ರಾಮದಲ್ಲಿ ಕಲ್ಲಿನ ಕ್ವಾರಿಯಲ್ಲಿ ಬಿದ್ದು ಮರಣ ಹೊಂದಿದ ಕರಣ್ ತಂದೆ ಹನುಮಂತ ಅವರ ಮನೆಗೆ ಶುಕ್ರವಾರ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕಾನೂನುಬಹಿರವಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕಲ್ಲಿನ ಕೋರಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ವಿನಂತಿಸಿಕೊಂಡರು. ಬಡಪಾಯಿ ರೈತನ ಮಗ ಪ್ರಾಣ ಕಳೆದುಕೊಂಡಿದ್ದಕ್ಕಾಗಿ ಆ ಕುಟುಂಬದ ಕಷ್ಟದ ಸನ್ನಿವೇಶ ಎದುರಿಸುತ್ತಿದೆ. ಇರುವ ಏಕೈಕ ಪುತ್ರನ ಪ್ರಾಣವನ್ನು ಕಳೆದುಕೊಂಡ ಪ್ರಯುಕ್ತ ಪಾಲಕರು ದುಃಖದಲ್ಲಿದ್ದಾರೆ. ಬೀದರ ತಹಸಿಲ್ದಾರ್ ಅವರಿಗೆ ಸ್ಥಳದಲ್ಲೇ ಕರೆಮಾಡಿ ಮಾತನಾಡಿ ರೈತನ ಮಗ ಆರ್ಥಿಕ ಸಂಕಷ್ಟದಲ್ಲಿ ಪ್ರಾಣ ಕಳೆದುಕೊಂಡಿದ್ದು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕೆಂದು ಕೋರಿದರು. ಹಾಗೂ ಕೃಷಿ ಅಧಿಕಾರಿಗಳಿಗೆ ಮಾತನಾಡಿ ರೈತನ ಕುಟುಂಬಕ್ಕೆ ನೀಡಬೇಕಾದ ಪರಿಹಾರವನ್ನು ನೀಡಬೇಕೆಂದು ವಿನಂತಿಸಿದರು.
ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದನೆಯನ್ನು ಮಾಡಿದ್ದಾರೆ. ತಾಲೂಕ ಪಂಚಾಯತ್ ಅಧಿಕಾರಿಗಳಿಗೆ ಮಾತನಾಡಿ ಕಾನೂನುಬಾಹಿರವಾಗಿ ಇರುವ ಕಲ್ಲಿನ ಕ್ವಾರಿಗಳನ್ನು ತಕ್ಷಣಕ್ಕೆ ಮುಚ್ಚಿಸಲು ಕಾರ್ಯಪ್ರವೃತ್ತರಾಗಬೇಕೆಂದು ವಿನಂತಿಸಿದರು.