ಅಪರೂಪದ ಕರುಳಿನ ಶಸ್ತ್ರ ಚಿಕಿತ್ಸೆ ಯಶಸ್ವಿ
ಬೀದರ: ಸೆ.28:ಭಾಲ್ಕಿ ತಾಲೂಕಿನವರಾದ ಬಿರಬಲ್(31) ಅವರ ಹೊಟ್ಟೆ ಕರುಳಿನ ಬಹಳ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ನಗರದ ಕನ್ನಡಾಂಬೆ ವೃತ್ತದಲ್ಲಿರುವ ಹೀಲಿಂಗ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಜರುಗಿತು.
ಅವರ ಶಸ್ತ್ರಚಿಕಿತ್ಸೆ ಸಂಪೂರ್ಣವಾಗಿ ಫಲಕಾರಿಯಾಗಿದೆ ಅವರ ಆರೋಗ್ಯ ಉತ್ತಮವಾಗಿ ಪ್ರಗತಿಯಲ್ಲಿದೆ, ಸಂಪೂರ್ಣ ಗುಣಮುಖವಾಗಿದ್ದು ಮತ್ತು ಯಾವುದೇ ತೊಡಕುಗಳ ಲಕ್ಷಣಗಳಿಲ್ಲ. ಆರೈಕೆ ಸೂಚನೆಗಳನ್ನು ಒದಗಿಸಿದ್ದಾರೆ ಮತ್ತು ಮನೆಯಲ್ಲಿ ಚಿಕಿತ್ಸೆ ಮುಂದುವರೆಸುವುದನ್ನು ಶಿಫಾರಸು ಮಾಡಿ ಅವರಿಗೆ ಔಷಧಿಗಳನ್ನು ನೀಡಿಲಾಗಿದೆ.
ಈ ಶಸ್ತ್ರ ಚಿಕಿತ್ಸೆಯನ್ನು ಹೀಲಿಂಗ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರಾದ ಡಾ.ಶಿವಲೀಲಾ ಎಕ್ಲೂರೆ, ಡಾ. ಶಾಂತಕುಮಾರಿ, ಡಾ. ಸುಕಾನಂದ್, ಡಾ. ಇರ್ಷಾದ್ ನವೀದ್, ಡಾ. ಅನಿಲಕುಮಾರ ಎಕ್ಲೂರೆ, ಮಜಿದ್ ಬಿಲಾಲ್(ಮೇಲ್ವಿಚಾರಕ) ಮತ್ತು ಸಿಬ್ಬಂದಿ ಇವರ ಸಹಯೋಗದಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಿಂದ ನಡೆಸಲಾಯಿತು.
ಆಸ್ಪತ್ರೆಯ ವೈಧ್ಯರು ಸೇರಿ ಅವರನ್ನು ಹೂಗುಚ್ಚ ನೀಡಿ ಮನೆಗೆ ಕಳುಹಿಸಲಾಯಿತು ಎಂದು ಆಸ್ಪತ್ರೆಯ ಮುಖ್ಯಸ್ಥರಾದ ಸಿರಾಜುದ್ದೀನ್ ಎಸ್. ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.