ಕನಕದಾಸ ಮತ್ತು ತತ್ವಪದ ಅಧ್ಯಯನ ಮುನ್ನೋಟ- ವಿದ್ವಾಂಸರೊದಿಗೆ ಸಮಾಲೋಚನಾ ಗೋಷ್ಠಿ
ಸಂಜೆವಾಣಿ ವಾರ್ತೆ.
ವಿಜಯಪುರ,ಅ.೬: ಕನಕದಾಸರ ಮತ್ತು ತತ್ವಪದಕಾರರ ಕುರಿತು ಹೆಚ್ಚಿನ ಅಧ್ಯಯನವು ವರ್ತಮಾನಕ್ಕೆ ಸಲ್ಲುವ ರೀತಿಯಲ್ಲಿ ಸಮಗ್ರ ಸಾಹಿತ್ಯ ಇನ್ನೂ ಬರಬೇಕಾಗಿದೆ. ಅನ್ಯ ಭಾಷೆಗಳಲ್ಲಿ ಅನುವಾದವಾಗಬೇಕಾಗಿದೆ. ಕೀರ್ತನೆಗಳು, ಚಿಂತನೆಗಳು, ಜಯಂತಿ, ವಿದ್ಯಾರ್ಥಿಗಳಿಗೆ ಸ್ಪರ್ಧೆ, ಕಥೆ, ನಾಟಕ, ಪ್ರಬಂಧಗಳ ಮೂಲಕ ಕನಕದಾಸರ ಚಿಂತನೆಗಳು ಜನ ಜಾಗೃತಿಯಾಗಬೇಕಾಗಿರುವುದು ಅವಶ್ಯವಾಗಿದೆ ಎಂದು ಬೆಂಗಳೂರಿನ ರಾಷ್ಟಿçÃಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧ£ ಕೇಂದ್ರದ ಅಧ್ಯಕ್ಷÀ ಕಾ.ತ. ಚಿಕ್ಕಣ್ಣನವರು ಹೇಳಿದರು.
ರಾಷ್ಟಿçÃಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಡಾ. ಫ.ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಸಮಾಲೋಚನ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು ೭೦ ಜನ ವಿದ್ವಾಂಸರು ಕನಕದಾಸರ ಕೀರ್ತನೆಗಳು, ಸುಳಾದಿಗಳು, ಮುಂಡಿಗೆಗಳು, ವಿಶ್ಲೇಷಣಾತ್ಮಕವಾಗಿ ಮೂಡಿ ಬಂದರೆ ಮಾನವ ಕುಲಕ್ಕೆ ಅನುಕೂಲವಾಗುವುದು ಎಂದು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ ಮಾತನಾಡಿದರು.
ಡಾ. ಎಂ.ಎಸ್. ಮದಭಾವಿ ಸ್ವಾಗತಿಸಿದರು. ಡಾ. ವಿ.ಡಿ.ಐಹೊಳ್ಳಿ ವಂದಿಸಿದರು.
ವಿ.ಸಿ.ನಾಗಠಾಣ, ಅಮೀರುದ್ದಿನ್ ಖಾಜಿ, ಎನ್.ಆರ್. ಕುಲಕರ್ಣಿ, ಮ.ನು. ಪತ್ತಾರ, ಚಿದಂಬರ ಬಂಡಗಾರ, ಡಾ. ಎಂ.ಎA. ಬೆಳಗಲ್, ಡಾ. ಎಸ್.ಕೆ. ಕೊಪ್ಪಾ, ಡಾ. ಓಂಕಾರ ಕಾಕಡೆ, ಡಾ. ಎಂ.ಎನ್. ಗುಡಿ, ಡಾ. ವಿ.ಎಂ. ಬಾಗಾಯತ, ಡಾ. ಉಷಾದೇವಿ ಹಿರೇಮಠ, ದಾಕ್ಷಾಯಣಿ ಬಿರಾದಾರ, ಬನಶ್ರೀ ಹತ್ತಿ, ಪ್ರೊ. ಎಸ್.ಬಿ. ದೊಡಮನಿ, ಡಾ. ಸಂಗಮೇಶ ಮೇತ್ರಿ, ಶಕುಂತಲಾ ದೊಡಮನಿ, ದೊಡ್ಡಣ್ಣ ಬಜಂತ್ರಿ, ಸಂಗಮೇಶ ಬದಾಮಿ, ಸುಭಾಷ ಕನ್ನೂರ, ಲಕ್ಷಿö್ಮ ಮೋರೆ ಮುಂತಾದವರು ಉಪಸ್ಥಿತರಿದ್ದರು. ಸಂಚಾಲಕಿ ದಾಕ್ಷಾಯಣಿ ಹುಡೇದ ಗೋಷ್ಠಿಯನ್ನು ನಿರ್ವಹಿಸಿದರು.