ಬ್ರಹ್ಮಕುಮಾರಿ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮ
ಸೇಡಂ, ಅ,೦೬: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಆಶ್ರಮದಲ್ಲಿ ನಡೆದ ನವರಾತ್ರಿ ವಿಶೇಷ ದೇವಿಯರ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುರಸಭೆ ನೂತನ ಅಧ್ಯಕ್ಷರಾಗಿರುವ ವೀರೇಂದ್ರ ಸಾಹುಕಾರ್ ರುದ್ನೂರ,ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾಗಿರುವ ರಾಜಶೇಖರ್ ನಿಲಂಗಿಯವರಿಗೆ ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿರುವ ಬಸವರಾಜ್ ಕಾಳಗಿ, ಹಣಮಂತ ಭರತನೂರ ತಂಡದವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆಯಲ್ಲಿ ಆಶ್ರಮದ ಮುಖ್ಯಸ್ಥರಾಗಿರುವ ಕಲಾವತಿ ಅಕ್ಕ ಹಾಗೂ ಸಂತೋಷ್ ಕುಮಾರ್ ತೊಟ್ನಳ್ಳಿ, ಪ್ರಕಾಶ್, ಜನಾರ್ಧನ್ ರೆಡ್ಡಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.