ಖೋ ಖೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
ಚಿಟಗುಪ್ಪ:ಅ.೬:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶನಿವಾರ ಜರುಗಿದ ಜಿಲ್ಲಾ ಮಟ್ಟದ ಬಾಲಕಿಯರ ಖೋ ಖೋ ಸ್ಪರ್ಧೆಯಲ್ಲಿ ತಾಲೂಕಿನ ಬಸಿರಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ವಿಜೇತರಾಗಿ ವಿಭಾಗ ಮಟ್ಟಕ್ಕೆ ಆಯ್ಕೆಯಾದರು.ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಸೈಯದ್ ಅಬ್ದುಲ್ ಮುನಾಫ್,ಗ್ರೇಡ್ ೧ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ್ ಸೂರ್ಯವಂಶಿ,ಕಾರ್ಯದರ್ಶಿ ವೆಂಕಟರಾವ ಡೋಂಬಾಳೆ ಅವರು ಪ್ರಶಸ್ತಿ ನೀಡಿ ಶುಭ ಹಾರೈಸಿದರು.ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯಗುರು ಬಸಪ್ಪ,ಸಹ ಶಿಕ್ಷಕರಾದ ನಾಗಪ್ಪ,ಘಾಳೇಪ್ಪಾ,ಶಾಮರಾವ,ಗಜಾನಂದ ಸೂರ್ಯಕಾಂತ,ಇಮಾನುವೆಲ್,ಸುರೇಶ ಪಾಟೀಲ,ಶ್ರೀಲಿಲಾ,ಎಸ್ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ,ಸದಸ್ಯರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.