ಡಾ. ಬಿ. ಆರ್. ವಸತಿ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕಮಲನಗರ:ಅ.೬: ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು ೪೦೦ ಮೀಟರ್ ಓಟದಲ್ಲಿ ಪ್ರವೀಣ್ ತಂದೆ ಅಶೋಕ್ ಪ್ರೌಢಶಾಲೆ ವಿದ್ಯಾರ್ಥಿ ಜಿಲ್ಲಾ ಮಟ್ಟದಿಂದ ಕ್ರೀಡಾಕೂಟದಲ್ಲಿ ಪ್ರಥಮ ಜಯ ಸಾಧಿಸಿದ್ದು ರಾಜ್ಯಮಟ್ಟಕೆ ಆಯ್ಕೆಯಾಗಿರುತ್ತಾರೆ. ೪೦೦ ಮೀಟರ್ ಓಟದಲ್ಲಿ ರುಭೇನ್ ರಾಜಕುಮಾರ್ ಪ್ರಾಥಮಿಕ ಶಾಲೆ ಹುಡುಗ ದ್ವಿತೀಯ ಸ್ಥಾನಕ್ಕೆ ಆಯ್ಕೆಯಾಗಿರುತ್ತಾನೆ .
ಜಿಲ್ಲೆಯಲ್ಲಿ ೨೦೨೪ -೨೫ನೇ ಸಾಲಿನ ಬೀದರ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ನಡೆಯಲಾಯಿತು.
ಈ ಸಂದರ್ಭದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಮಾಣ ಪತ್ರ ಕೊಟ್ಟು ಸನ್ಮಾನಿಸಲಾಯಿತು. ಶಾಲೆಗೆ ಕೀರ್ತಿ ತಂದ ಮಕ್ಕಳಿಗೆ ಡಾ! ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ನಿಟ್ಟೂರೆ ತಾಲೂಕ ದೈಹಿಕ ಅಧ್ಯಕ್ಷರಾದ ರಾಮರಾವ್ ದೈಹಿಕ ಆಯೋಜಕರಾದ ಕಂಟೆಪ್ಪ ಭವರಾ ತಂಡದ ವ್ಯವಸ್ಥಾಪಕರಾದ ದಯಾನಂದ ರಾಜೋಳೆ ಸಾಯಿನಾಥ್ ವಾಗ್ಮರೆ ಹಾಗೂ ಶಾಲಾ ಸಿಬ್ಬಂದಿ ವರ್ಗದ ಶಿಕ್ಷಕರು ಹರ್ಷ ವ್ಯಕ್ತ ಪಡಿಸಿದ್ದರು.