ರೇಬಿಸ್ ಆತಂಕ ಬೇಡ ಜಾಗೃತಿ ಇರಲಿ
ಇಂಡಿ:ಅ.೬:ರೇಬಿಸ್ ಪ್ರಾಣಿಗಳ ಕಡಿತ ದಿಂದಲ್ಲದೆ ಪ್ರಾಣಿಗಳ
ಜೊಲ್ಲಿನ ಸಂಪರ್ಕದಿAದ ಚರ್ಮದ ಮೇಲೆ ನೆಕ್ಕುವಿಕೆಯಿಂದ , ಪರಚುವಿಕೆಯಿಂದ ಮಾನವನಿಗೆ
ಬರಬಹುದು. ನಾಯಿ ಕಡಿತದಿಂದ ೯೭ % ರೇಬಿಸ್‌ಹರಡುವದರಿಂದ ಸಾರ್ವಜನಿಕರು ತಮ್ಮ ಸಾಕು ನಾಯಿಗಳಿಗೆ ಸಮಿಪದ ಪ್ರಾಥಮಿಕ ಚಿಕಿತ್ಸಾಲಯಗಳಿಗೆ ಹೋಗಿ ರೇಬಿಸ್
ಚುಚ್ಚುಮದ್ದು ಹಾಕಿಸುವ ಮುಖಾಂತರ ರೇಬಿಸ್ ತಡೆಯಬಹುದು ಎಂದು ಮುಖ್ಯ ಪಶು ವೈಧ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಪಟ್ಟಣದ ಪಶು ಚಿಕಿತ್ಸಾಲಯದ ಆವರಣದಲ್ಲಿ ವಿಶ್ವ ರೇಬಿಸ್ ದಿನದ ನಿಮಿತ್ಯ ನಡೆದ ಸಮಾರಂಭದಲ್ಲಿ
ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಯಿ ಕಚ್ಚಿದ ಗಾಯವನ್ನು ತಕ್ಷಣವೇ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಸಾಬೂನು ಹಚ್ಚಿ
ನೀರಿನಲ್ಲಿ ತೊಳೆಯಬೇಕು. ಹಾಗೂ ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಸುಣ್ಣ, ಅರಿಶಿಣ, ಎಣ್ಣೆಯಂತಹ
ವಸ್ತುಗಳು ಹಾಕಬೇಡಿ,ನೇರವಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ
ಪಡೆಯಬೇಕು ಎಂದರು.
ಡಾ. ರವಿಶಂಕರ ಬಿರಾದಾರ ಮಾತನಾಡಿ ಯಾವದೇ ಪ್ರಾಣಿ ಅಥವಾ ನಾಯಿ ಕಚ್ಚಿದರೆ ವೈದ್ಯರ
ಸಲಹೆಯಂತೆ ಕಚ್ಚಿದ ೧ ನೇ,೩ ನೇ, ೭ ನೇ, ೧೪ ನೇ ಮತ್ತು ೨೮ ನೇ ದಿನದ ರೇಬಿಸ್ ಚುಚ್ಚುಮದ್ದು
ಹಾಕಿಸಬೇಕು,ಬೆಳಕು ಮತ್ತು ನೀರು ಕಂಡರೆ ಭಯ,
ಮೈ ಕೈ ನೋವು ಜ್ವರ ತಲೆನೋವು ಹುಚ್ಚು ಹಿಡಿದವರಂತೆ ವರ್ತಿಸುವದು ರೇಬಿಸ್ ಲಕ್ಷಣಗಳೆಂದರು.
ಡಾ. ದಯಾನಂದ ಸಜ್ಜನ,ಡಾ. ಸಂಜೀವ ಕುಮಾರ ಲಾಳಸಂಗಿ, ಡಾ. ಲಕ್ಷೀಶ ಕಟ್ಟಿಮನಿ
,ಡಾ. ಆಶಾರಾಣಿದಶವಂತಡಾ. ವಿನಯ ಜಂಬಗಿ ಮಾತನಾಡಿದರು.
ರಾಮಣ್ಣ ಉಪ್ಪಾರ,ರಮೇಶ ನರಳೆ, ಜಾವೀದ್ ಬಾಗವಾನ,ಎಸ್.ಬಿ.ಮೂಡಲಗಿ,ಪುಂಡಲೀಕ ಕುಡಗಿ,
ಜಿ.ಆರ್.ಕರಣಿ,ಮತ್ತಿತರಿದ್ದರು.